Video: ಪುಟ್ಟ ಹುಡುಗಿಯ ಬೇಡಿಕೆಗೆ ಸ್ಪಂದಿಸಿದ ಯುವಕ, ಈ ಹುಡುಗಿಯ ಖುಷಿ ನೋಡಿ
ನಾವು ಸಣ್ಣವರಿದಾಗ ಯಾರಾದ್ರೂ ಹೊಸ ಬಟ್ಟೆ, ಪೆನ್, ಪೆನ್ಸಿಲ್ ಕೊಟ್ಟರೆ ಖುಷಿಯಾಗುತ್ತಿತ್ತು. ಆದರೆ ಈ ಪುಟ್ಟ ಹುಡುಗಿಯೂ ಅಪರಿಚಿತ ಯುವಕನ ಬಳಿ ಬೇಡಿಕೆಯಿಟ್ಟಿದ್ದಾಳೆ. ತನಗೆ ಸೈಕಲ್ ಬೇಕೆಂದು ಕೇಳುತ್ತಿದ್ದಂತೆ ಈ ಯುವಕನು ತನ್ನ ಕೈಲಾದ ಸಹಾಯ ಮಾಡಿದ್ದು ಈ ಹೃದಯಸ್ಪರ್ಶಿ ವಿಡಿಯೋವೊಂದು ಸದ್ಯ ವೈರಲ್ ಆಗುತ್ತಿದೆ.

ಈಗಿನ ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಒಬ್ಬರ ಭಾವನೆಗೆ ಸ್ಪಂದಿಸಲು ಯಾರಿಗೂ ಸಮಯವಿಲ್ಲ. ಒಬ್ಬರಿಗೆ ಕಷ್ಟ ಎಂದರೆ ಮಿಡಿಯುವ ಮನಸ್ಸು ಯಾರಿಗೂ ಇಲ್ಲ. ಆದರೆ ಇದೆಲ್ಲದರ ನಡುವೆ ಒಳ್ಳೆಯ ಮನಸ್ಸುಳ್ಳ ವ್ಯಕ್ತಿಗಳನ್ನು ಕಂಡಾಗ ನಿಜಕ್ಕೂ ಖುಷಯೆನಿಸುತ್ತದೆ. ಈ ಯುವಕನ ಒಳ್ಳೆಯ ಮನಸ್ಸು ನೋಡಿದ್ರೆ ಇಷ್ಟು ಒಳ್ಳೆಯ ವ್ಯಕ್ತಿಗಳು ಇರ್ತಾರಾ ಎಂದೆನಿಸುತ್ತದೆ. ಬೀದಿ ಬದಿಯಲ್ಲಿ ಪೆನ್ನು ಪೆನ್ಸಿಲ್ ಮಾರುತ್ತಿರುವ ಪುಟ್ಟ ಹುಡುಗಿಯೂ (Little girl) ಅಪರಿಚಿತ ಯುವಕನ (Young man) ಬಳಿ ತನಗೆ ಸೈಕಲ್ ಬೇಕೆಂದು ಬೇಡಿಕೆ ಇಟ್ಟಿದ್ದಾಳೆ. ಆ ವೇಳೆಯಲ್ಲಿ ಅಷ್ಟು ದೊಡ್ಡ ಮೊತ್ತದ ಸೈಕಲ್ ಕೊಡಿಸಲು ಸಾಧ್ಯವಾಗದೇ ಬ್ಯಾಗ್ ಸೇರಿದಂತೆ ಇನ್ನಿತ್ತರ ಶಾಲೆಗೆ ಅಗತ್ಯವಿರುವ ವಸ್ತುಗಳನ್ನು ಕೊಡಿಸಿ ಪುಟ್ಟ ಹುಡುಗಿಯ ಮೊಗದಲ್ಲಿ ನಗು ಮೂಡಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಈ ಯುವಕನದ್ದು ಎಷ್ಟು ದೊಡ್ಡ ಮನಸ್ಸು ನೋಡಿ
K19- rider ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋಗೆ ಬಾಯಿ ತುಂಬಾ ಅಣ್ಣ ಅಣ್ಣ ನನಗೆ ಬ್ಯಾಗ್ ತೆಗೆದು ಕೊಡಿ ಎಂದಾಗ ನಾನೇನು ಮಾಡಲಿ ಎಂದು ಶೀರ್ಷಿಕಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ರಸ್ತೆ ಬದಿಯಲ್ಲಿ ಪೆನ್ನು ಪೆನ್ಸಿಲ್ ಮಾರುತ್ತಿರುವ ಹುಡುಗಿಯೂ ಅಪರಿಚಿತ ಯುವಕನ ಬಳಿ ನನಗೆ ಸೈಕಲ್ ತಕೊಂಡು ಬರ್ತೀರಾ ಎಂದು ಕೇಳಿದ್ದಾಳೆ. ಸೈಕಲ್‌ಗೆ ಹಣ ತುಂಬಾ, ಅಷ್ಟು ಹಣ ನನ್ನ ಹತ್ರ ಇಲ್ಲ. ಈ ವಿಡಿಯೋ ಮಾಡ್ತೇನೆ ಅಲ್ವಾ, ಈ ವಿಡಿಯೋ ನೋಡಿದವರು ಕೊಟ್ಟರೆ ನಿನಗೆ ಸೈಕಲ್ ಕೊಡ್ತೇನೆ ಎಂದು ಹೇಳುತ್ತಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಆ ಬಳಿಕ ಈ ಪುಟ್ಟ ಹುಡುಗಿ ತನಗೆ ಬ್ಯಾಗ್, ಪೆನ್ನು ಪೆನ್ಸಿಲ್, ಕಂಪಾಸ್ ಬೇಕು ಎಂದು ಹೇಳಿದ್ದಾಳೆ. ಈ ವೇಳೆ ನೀನು ಇಲ್ಲೇ ನಿಂತಿರು, ಒಂದು ಘಂಟೆಯೊಳಗೆ ಬರುತ್ತೇನೆ ಎಂದು ಹೇಳಿದ್ದಾನೆ. ಈ ಪುಟ್ಟ ಹುಡುಗಿಯ ಬೇಡಿಕೆಗೆ ಸ್ಪಂದಿಸಿದ ಯುವಕನು ಆಕೆ ಹೇಳಿದ ಎಲ್ಲದ್ದನ್ನು ತಂದು ಕೊಟ್ಟಿದ್ದಾನೆ. ಈ ಬ್ಯಾಗ್, ಪೆನ್ನು ಪೆನ್ಸಿಲ್ ನೋಡಿದ ಪುಟಾಣಿ ಯೂ ನಗೆ ಬೀರಿದ್ದಾಳೆ. ಆಕೆಯ ಮೊಗದಲ್ಲಿ ನಗು ಮೂಡಿಸಿದ್ದಾನೆ.
ಇದನ್ನೂ ಓದಿ:Video: ಮೊದಲ ಬಾರಿ ಐಸ್ಕ್ರೀಮ್ ತಿಂದ ಮಗು, ಕಂದಮ್ಮನ ರಿಯಾಕ್ಷನ್ ಹೇಗಿತ್ತು ನೋಡಿ
ಪುಟ್ಟ ಹುಡುಗಿಗೆ ಬ್ಯಾಗ್ ಕೊಡಿಸಿದ ಯುವಕನ ವಿಡಿಯೋ
View this post on Instagram
ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಒಳ್ಳೆಯ ಕೆಲಸ, ಹೀಗೆಯೇ ಮುಂದುವರೆಯಲಿ ಎಂದಿದ್ದಾರೆ. ಇನ್ನೊಬ್ಬರು ಪಾಪ ಸೈಕಲ್ ತೆಗ್ಸಿಸಿಕೊಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮದು ತುಂಬಾ ಒಳ್ಳೆಯ ಮನಸ್ಸು, ನಿಮಗೆ ತೆಗೆಸಿ ಕೊಡುವ ಮನಸ್ಸಿದೆ ಸಾಕು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








