Video: ಅಯ್ಯಯ್ಯೋ ನನಗೆ ಹಸಿವು ತಡೆಯೋಕೆ ಆಗ್ತಿಲ್ಲ; ರಸ್ತೆಯಲ್ಲಿ ಕುಳಿತು ಟಿಫಿನ್ ಬಾಕ್ಸ್ ತೆರೆದು ನೂಡಲ್ಸ್ ತಿಂದ ಪುಟ್ಟ ಬಾಲಕ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳನ್ನು ನೋಡುವಾಗ ಕರುಳು ಚುರ್ ಎನ್ನುತ್ತೆ. ಈ ಹಸಿವು ಎನ್ನುವುದು ಮನುಷ್ಯನನ್ನು ಏನು ಬೇಕಾದರೂ ಮಾಡಿಸಬಹುದು. ಶಾಲೆಗೆ ಹೋಗುವ ಪುಟ್ಟ ಹುಡುಗನಿಗೆ ಸಿಕ್ಕಾಪಟ್ಟೆ ಹಸಿವು ಆಗಿದೆ. ಆದ್ರೆ ಹಸಿವು ತಾಳಲಾರದೇ ಈ ಪುಟ್ಟ ಹುಡುಗನು ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಕ್ಲಿಪಿಂಗ್ ವೈರಲ್ ಆಗಿದ್ದು ನೆಟ್ಟಿಗರು ಈ ಪುಟಾಣಿ ಮುಗ್ಧತೆಗೆ ಮನಸೋತಿದ್ದಾರೆ.

ಮಕ್ಕಳು (children) ಏನು ಮಾಡಿದರೂ ಚಂದನೇ. ಹೀಗಾಗಿ ಪುಟಾಣಿಗಳ ಆಟ ತುಂಟಾಟಗಳು, ಮುಗ್ಧತೆಯ ಸಾರುವ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಈ ಮಗುವಿನ ಮುಗ್ಧತೆ ಎಷ್ಟಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು, ಶಾಲೆಗೆ ಹೋಗುವಾಗ ಪುಟ್ಟ ಹುಡುಗನು ಹೊಟ್ಟೆ ಹಸಿದಿದ್ದು, ಈ ವೇಳೆ ಚರಂಡಿಯ ಪಕ್ಕದಲ್ಲಿ ಕುಳಿತು ಬ್ಯಾಗ್‌ನಲ್ಲಿದ್ದ ಟಿಫಿನ್ ಬಾಕ್ಸ್ (Tiffin box) ತೆರೆದು ಅದರಲ್ಲಿದ್ದ ನೂಡಲ್ಸ್ ತಿನ್ನಲು ಶುರು ಮಾಡಿದ್ದಾನೆ. ಈ ಪುಟಾಣಿಯ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
@MOHDIMR1994 ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಮಕ್ಕಳ ಮುಗ್ಧತೆಗೆ ಇದುವೇ ಸಾಕ್ಷಿ. ಪುಟಾಣಿಯೊಂದು ಶಾಲೆಗೆ ಹೋಗಲು ತಯಾರಾಗಿದ್ದು, ಆದರೆ ಈ ನಡುವೆ ಈ ಪುಟಾಣಿಗೆ ಸಿಕ್ಕಾಪಟ್ಟೆ ಹಸಿವಾದಂತಿದೆ. ಹೀಗಾಗಿ ಈ ಪುಟ್ಟ ಬಾಲಕನು ತೆರೆದ ಚರಂಡಿಯ ಪಕ್ಕದಲ್ಲೇ ಕುಳಿತು ತನ್ನ ಬ್ಯಾಗ್ ನಲ್ಲಿದ್ದ ಟಿಫಿನ್ ಬಾಕ್ಸ್ ತೆರೆದು ತಿಂಡಿ ತಿನ್ನಲು ಕುಳಿತಿದ್ದಾನೆ. ಈ ದೃಶ್ಯವನ್ನು ಅಲ್ಲೇ ಇದ್ದವರು ಯಾರೋ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಕೆಲವರು ಈ ಪುಟಾಣಿಯನ್ನು ಮಾತನಾಡಿಸಿರುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಪುಟ್ಟ ಬಾಲಕ ಏನು ಮಾತನಾಡದೇ ನೂಡಲ್ಸ್ ತಿಂದು ಮುಗಿಸಿ ಟಿಫಿನ್ ಬಾಕ್ಸ್ ಬಾಯಿ ಮುಚ್ಚಳವನ್ನು ಮುಚ್ಚಲು ಮುಂದಾಗಿದ್ದಾನೆ. ಆ ವೇಳೆ ಅಲ್ಲಿಂದ ವ್ಯಕ್ತಿಯೊಬ್ಬರು ಬಾಕ್ಸ್ ಮುಚ್ಚಲು ಸಹಾಯ ಮಾಡುತ್ತಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
शाबास बेटा शाबास 👇👇😛😄
बच्चा स्कूल जाते हुए रास्ते में लगी भूख स्कूल तो देखा जाएगा पहले पेट पूजा आप सबसे यह गुजारिश है बच्चों को स्कूल खुद छोड़कर आए pic.twitter.com/QcOmjXTgBN
— IMRAN (@MOHDIMR1994) September 9, 2025
ಇದನ್ನೂ ಓದಿ:Video: ಟೀಚರ್‌ಗೆ ಗೊತ್ತಾಗದಂತೆ ಬಿಸ್ಕೆಟ್ ತಿನ್ನುತ್ತಾ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪುಟಾಣಿ
ಸೆಪ್ಟೆಂಬರ್ 9 ರಂದು ಹಂಚಿಕೊಳ್ಳಲಾದ ಈ ಕ್ಲಿಪಿಂಗ್ ನಾಲ್ಕು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಒಬ್ಬ ಬಳಕೆದಾರರು, ಬಹಳ ದಿನಗಳ ಬಳಿಕ ನನ್ನ ಅಮ್ಮ ನನ್ನ ಟಿಫಿನ್ ಬಾಕ್ಸ್‌ಗೆ ನೂಡಲ್ಸ್ ಹಾಕಿಕೊಟ್ಟಿದ್ದಾರೆ. ನನಗೆ ಮಧ್ಯಾಹ್ನದವರೆಗೂ ಕಾಯಲು ಟೈಮ್ ಇಲ್ಲ. ಅದಕ್ಕೆ ನಾನು ನೂಡಲ್ಸ್ ತಿಂದೆ ಎಂದು ತಮಾಷೆಯಾಗಿಯೇ ಬರೆದಿದ್ದಾರೆ. ಇನ್ನೊಬ್ಬರು ಪಾಪ ಪುಟ್ಟ ಬಾಲಕನ ಮುಗ್ಧತೆ ಎಷ್ಟಿದೆ ನೋಡಿ ಎಂದು ಹೇಳಿದ್ದಾರೆ. ಮತ್ತೊಬ್ಬರು ಹಸಿವು ಎಂಬ ಎರಡಕ್ಷರ ಎಲ್ಲವನ್ನು ಮಾಡಿಸುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Sun, 14 September 25








