Viral: ಅಹಮದಾಬಾದ್ ನಗರ ಮಹಿಳೆಯರಿಗೆ ತುಂಬಾನೇ ಸುರಕ್ಷಿತ, ತನ್ನ ಅನುಭವ ಬಿಚ್ಚಿಟ್ಟ ವಿದೇಶಿ ಮಹಿಳೆ
ಭಾರತಕ್ಕೆ ಬಂದ ವಿದೇಶಿಗರು ಇಲ್ಲಿನ ಸ್ಥಳ, ಆಹಾರ ಹಾಗೂ ಜನರನ್ನು ಹಾಡಿ ಹೊಗಳುವುದನ್ನು ನೀವು ನೋಡಿಯೇ ಇರುತ್ತೀರಿ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಭಾರತೀಯರ ಮನಸ್ಸು ಗೆಲ್ಲುತ್ತದೆ. ಆದರೆ ಇದೀಗ ಫ್ರೆಂಚ್ ಮಹಿಳೆಯೊಬ್ಬರು ಅಹಮದಾಬಾದ್ ತನಗೆ ಭದ್ರತೆ ಹಾಗೂ ಸೌಕರ್ಯವನ್ನು ನೀಡಿದೆ ಎಂದು ಈ ನಗರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಳ್ಳೆಯದ್ದನ್ನೇ ಹುಡುಕುವ ಈ ವಿದೇಶಿ ಮಹಿಳೆಯ ಒಳ್ಳೆಯ ಮನಸ್ಸನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ನಮ್ಮ ಭಾರತೀಯರು ವಿದೇಶದಲ್ಲಿ (Foreign) ಕೆಲಸ ಮಾಡಲು ಹಾಗೂ ಅಲ್ಲಿಯೇ ಸೆಟ್ಲ್ ಆಗಲು ಎಷ್ಟು ಇಷ್ಟ ಪಡುತ್ತಾರೋ ಅದೇ ರೀತಿ ವಿದೇಶಿಗರಿಗೂ ಭಾರತವೆಂದರೇನೇ ಸೆಳೆತ. ಲೆಕ್ಕವಿಲ್ಲದಷ್ಟು ವಿದೇಶಿಗರು ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಪ್ರತಿಯೊಂದು ವಿಚಾರಗಳನ್ನು ಅನುಸರಿಸುತ್ತಾರೆ. ಕೆಲವರು ಇಲ್ಲಿನ ಜನರ ಒಳ್ಳೆತನಕ್ಕೆ ಮನಸೋತು ಮರಳಿ ತಮ್ಮ ದೇಶಕ್ಕೆ ಹೋಗದೇ ಇಲ್ಲಿಯೇ ಇರಲು ಇಷ್ಟ ಪಡುತ್ತಾರೆ. ಗುಜರಾತಿನ ಅಹಮದಾಬಾದ್‌ನಲ್ಲಿ (Ahmedabad of Gujarat) ನೆಲೆಸಿರುವ ಫ್ರೆಂಚ್ ಮಹಿಳೆ ಈ ನಗರವು ಎಷ್ಟು ಸುಂದರವಾಗಿದೆ, ಸುರಕ್ಷತೆ ದೃಷ್ಟಿಯಿಂದ ಎಷ್ಟು ಉತ್ತಮವಾಗಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಅಹಮದಾಬಾದ್ ನಗರವನ್ನು ಹಾಡಿ ಹೊಗಳಿದ ಫ್ರೆಂಚ್ ಮಹಿಳೆ
@juliachaigneau ಹೆಸರಿಗೆ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಪೋಸ್ಟ್ ನಲ್ಲಿ ಫ್ರೆಂಚ್ ಮಹಿಳೆ ಜೂಲಿಯಾ ಚೈಗ್ನೋ ಅವರು ಗುಜರಾತಿನ ಅಹಮದಾಬಾದ್ ನಗರ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಫೋಟೋವನ್ನು ಹಂಚಿಕಕೊಂಡಿದ್ದು, ನಾನು ಗುಜರಾತ್ (ಭಾರತ)ದ ಅಹಮದಾಬಾದ್‌ನಲ್ಲಿ ಒಂದು ವರ್ಷ ವಾಸಿಸುತ್ತಿದ್ದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಇಲ್ಲಿ ಎಂದಿಗೂ ಸುರಕ್ಷಿತವಾಗಿರುವುದಿಲ್ಲ ಎಂದು ಭಾವಿಸಿದೆ. ಒಬ್ಬ ಮಹಿಳೆಯಾಗಿ, ಸುರಕ್ಷತೆಯ ಬಗ್ಗೆ ಯಾವಾಗಲೂ ಮನಸ್ಸಿನಲ್ಲಿರುತ್ತದೆ. ಹಾಗಾಗಿ ನಾನು ಮೊದಲು ಭಾರತಕ್ಕೆ ಬಂದಾಗ, ನನ್ನ ಅನೇಕ ಸ್ನೇಹಿತರು ಈ ಬಗ್ಗೆ ಚಿಂತಿತರಾಗಿದ್ದರು. ಆದರೆ ನಗರ ಮಟ್ಟದಲ್ಲಿ ಕೆಲವು ಆಯ್ಕೆಗಳು ವಾಸ್ತವವಾಗಿ ಒಂದು ಸ್ಥಳ ಎಷ್ಟು ಸುರಕ್ಷಿತವಾಗಿದೆ ಎಂದು ನನಗೆ ತೋರಿಸಿತು ಎಂದಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
I lived in Ahmedabad, Gujarat (India) for a year and honestly, I never felt safer.
As a woman, safety is always on my mind. So when I first moved to India, many of my friends worried about me. But living in a dry state changed my perspective. It made me see how certain choices… pic.twitter.com/u2lRDtEkqs
— Julia Chaigneau (@juliachaigneau) September 8, 2025
ಭಾರತೀಯರು ಮತ್ತು ವಿದೇಶಿಯರನ್ನು ಒಟ್ಟುಗೂಡಿಸುವ ಗೇಟೆಡ್ ಸಮುದಾಯದಲ್ಲಿ ಉಳಿಯಲು ನಾನು ಅದೃಷ್ಟಶಾಲಿಯಾಗಿದ್ದೆ. ಹೀಗಾಗಿ ಈ ಸ್ಥಳವು ಸುರಕ್ಷಿತವೆಂದು ಭಾವಿಸಿತು. ಭಾರತದಲ್ಲಿ ಎಲ್ಲೆಡೆ ಸುರಕ್ಷಿತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ, ಪ್ರತಿ ನಗರ ಮತ್ತು ಪ್ರತಿ ರಾಜ್ಯವು ವಿಭಿನ್ನವಾಗಿದೆ ಆದರೆ ನನ್ನ ಅನುಭವದ ಪ್ರಕಾರ ಅಹಮದಾಬಾದ್ ವಾಸಿಸಲು ನಿಜವಾಗಿಯೂ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:Video: ಭಾರತ ಅಗ್ಗ ಅಂದುಕೊಂಡ್ರಾ, ಇಲ್ಲಿನ ಜೀವನ ಎಷ್ಟು ಕಷ್ಟ ಎಂದ ರಷ್ಯನ್ ಯುವತಿ
ಸೆಪ್ಟೆಂಬರ್ 8 ರಂದು ಶೇರ್ ಮಾಡಲಾದ ಈ ಪೋಸ್ಟ್ ಇದುವರೆಗೂ ಏಳು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಜೀವನದ ಬಹುಪಾಲು ಕಾಲ ಅಹಮದಾಬಾದ್‌ನಲ್ಲಿ ಕಳೆದಿದ್ದೆ. ಅಲ್ಲಿ ಇರುವವರೆಗೂ ಅಹಮದಾಬಾದ್‌ನ ಶ್ರೇಷ್ಠತೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಅರಿತುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಅಹಮದಾಬಾದ್ ಅತ್ಯುತ್ತಮ, ನನ್ನ ಜೀವನದುದ್ದಕ್ಕೂ ಇಲ್ಲಿ ವಾಸಿಸುತ್ತಿದ್ದೇನೆ ಮತ್ತು ಸುರಕ್ಷತೆಯು ಖಂಡಿತವಾಗಿಯೂ ಪ್ಲಸ್ ಪಾಯಿಂಟ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಅನುಭವ ಹಂಚಿಕೊಂಡದ್ದಕ್ಕೆ ಧನ್ಯವಾದಗಳು, ಅಹಮದಾಬಾದ್ ಕೇವಲ ಸುರಕ್ಷಿತ ನಗರವಲ್ಲ, ಮೂಲಸೌಕರ್ಯ ದೃಷ್ಟಿಯಿಂದಲೂ ಅದ್ಭುತವಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








