Video: ಮೊದಲ ಬಾರಿ ಐಸ್ಕ್ರೀಮ್ ತಿಂದ ಮಗು, ಕಂದಮ್ಮನ ರಿಯಾಕ್ಷನ್ ಹೇಗಿತ್ತು ನೋಡಿ
ಪುಟ್ಟ ಕಂದಮ್ಮಗಳ ಆಟ ತುಂಟಾಟಗಳನ್ನು ನೋಡಲು ಎರಡು ಕಣ್ಣು ಸಾಲದು. ಅದರಲ್ಲಿ ತಿಂಡಿ ತಿನಿಸನ್ನು ಬಾಯಿಗೆ ಇಟ್ಟರೆ ಪುಟಾಣಿಗಳು ನೀಡುವ ರಿಯಾಕ್ಷನ್ ಮಾತ್ರ ಮುದ್ದಾಗಿ ಇರುತ್ತದೆ. ಆದರೆ ಇದೀಗ ಇಲ್ಲೊಂದು ಕಂದಮ್ಮ ಮೊದಲ ಬಾರಿಗೆ ಐಸ್ ಕ್ರೀಮ್ ಸವಿದು ಕ್ಯೂಟ್ ಆಗಿ ರಿಯಾಕ್ಷನ್ ನೀಡಿದ್ದು, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಐಸ್ ಕ್ರೀಮ್ (Ice Cream) ಅಂದ್ರೆ ದೊಡ್ಡವರಿಂದ ಹಿಡಿದು ಮಕ್ಕಳಿಗೆ ತುಂಬಾನೇ ಇಷ್ಟ. ಯಾರಾದ್ರೂ ಐಸ್ ಕ್ರೀಮ್ ತಿನ್ನುತ್ತಿದ್ದರೆ ನಮಗೂ ತಿನ್ನಬೇಕು ಅನಿಸುತ್ತದೆ. ಇನ್ನು ಹೆತ್ತವರು ಪುಟಾಣಿ ಮಕ್ಕಳ ಮುಂದೆ ಐಸ್ ಕ್ರೀಮ್ ತಿನ್ನೋ ಆಗಿಲ್ಲ. ನಂಗೂ ಕೊಡು ಎನ್ನುತ್ತಾ ಅಮ್ಮನನ್ನೇ ದಿಟ್ಟಿಸಿ ನೋಡುತ್ತವೆ. ನೀವೇನಾದ್ರೂ ಪುಟಾಣಿ ಮಕ್ಕಳ ಬಾಯಿಗೆ ಐಸ್ ಕ್ರೀಮ್ ಇಟ್ಟರೆ ನಾಲಿಗೆ ಹೊರ ಹಾಕುತ್ತಾ ಬಾಯಿ ಚಪ್ಪರಿಸಿಕೊಂಡು ರುಚಿ ಸವಿಯುವುದನ್ನು ನೋಡಿರುತ್ತೀರಿ. ಈ ಪುಟ್ಟ ಮಗುವು (little baby) ಮೊದಲ ಬಾರಿಗೆ ಐಸ್ ಕ್ರೀಮ್ ಸವಿಯುತ್ತಿದ್ದಂತೆ ಮುದ್ದು ಮುದ್ದಾಗಿ ರಿಯಾಕ್ಷನ್ ಕೊಟ್ಟಿದೆ. ಈ ವಿಡಿಯೋ ಸದ್ಯ ನೆಟ್ಟಿಗರ ಹೃದಯ ಗೆದ್ದಿದೆ.
ಐಸ್ ಕ್ರೀಮ್ ಸವಿದ ಕಂದಮ್ಮನ ರಿಯಾಕ್ಷನ್ ಹೇಗಿತ್ತು ನೋಡಿ
contractopia ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾದ ಈ ವಿಡಿಯೋಗೆ ಮೊದಲ ಐಸ್ ಕ್ರೀಂ ತಿಂದಾಗ ಸಿಗುವ ಸಂತೋಷಕ್ಕೆ ಯಾವುದೂ ಸಾಟಿಯಿಲ್ಲ, ಅವಳ ಪ್ರತಿಕ್ರಿಯೆ ಇಂದು ನೀವು ನೋಡುವ ಅತ್ಯಂತ ಸಿಹಿಯಾದ ವಿಷಯಗಳಲ್ಲಿ ಒಂದು ಎಂದು ಶೀರ್ಷಿಕೆ ನೀಡಲಾಗಿದೆ. ಇಲ್ಲಿ ನೀವು ಮಗುವೊಂದು ಮೊದಲ ಬಾರಿಗೆ ಐಸ್ ಕ್ರೀಮ್ ಸವಿಯುವುದನ್ನು ಕಾಣಬಹುದು. ರುಚಿ ಸವಿದ ಬಳಿಕ ಮುದ್ದಾಗಿ ರಿಯಾಕ್ಷನ್ ನೀಡಿದೆ. ಹೌದು, ಕ್ಯಾಂಡಿಯನ್ನು ಮಗುವಿಗೆ ಬಾಯಿಗೆ ಇಡಲಾಗಿದ್ದು, ಈ ಮಗುವಿಗೆ ಐಸ್ ಕ್ರೀಮ್ ಇಷ್ಟವಾಯಿತು ಎಂದು ಕಾಣಿಸುತ್ತದೆ. ಈ ವೇಳೆ ಅರ್ಧದಷ್ಟು ಕ್ಯಾಂಡಿಯನ್ನೇ ತನ್ನ ಬಾಯೊಳಗೆ ತುಂಬಿಸಿಕೊಂಡು ಖುಷಿ ಪಟ್ಟಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋ 26 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಮಗುವಿನ ರಿಯಾಕ್ಷನ್ ಗೆ ಬಳಕೆದಾರರು ಮನಸೋತಿದ್ದಾರೆ. ಒಬ್ಬ ಬಳಕೆದಾರ ಈ ಪುಟಾಣಿಯ ರಿಯಾಕ್ಷನ್ ಗೆ ನಾನು ಮನಸೋತೆ ಎಂದಿದ್ದಾರೆ. ಇನ್ನೊಬ್ಬರು, ಅವಳಿಗೆ ಎಷ್ಟು ಖುಷಿಯಾಯ್ತು ಅನ್ನೋದು ನನಗೆ ಗೊತ್ತು. ನಾನು ಈ ರೀತಿಯೇ ಮಾಡ್ತೇನೆ ಎಂದು ಹೇಳಿದ್ದಾರೆ. ಎಷ್ಟು ಮುದ್ದಾಗಿದೆ ಈ ದೃಶ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








