AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹೆರಿಗೆ ಕೊಠಡಿಯಲ್ಲಿ ವೈದ್ಯೆಯ ಮೇಲೆ ಹಲ್ಲೆ ನಡೆಸಿದ ಇಂಟರ್ನ್ ವಿದ್ಯಾರ್ಥಿನಿಯರು

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವು ಆಘಾತಕಾರಿ ವಿಡಿಯೋ ನೋಡಿದ್ರೆ ಎಂತೆಂತಹ ಜನರು ಈ ಕಾಲದಲ್ಲಿ ಇರ್ತಾರೆ ಎಂದೆನಿಸುತ್ತದೆ. ಹೌದು, ಹೆರಿಗೆ ನೋವಿನಿಂದ ಮಹಿಳೆಯೊಬ್ಬರು ನರಳಾಡ್ತಾ ಇದ್ರೆ, ಇತ್ತ ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಇಂಟರ್ನ್ ವಿದ್ಯಾರ್ಥಿನಿಯರು ಹಲ್ಲೆ ನಡೆಸಿದ್ದಾರೆ. ಈ ಆಘಾತಕಾರಿ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ವಿದ್ಯಾರ್ಥಿನಿಯರ ವಿರುದ್ಧ ಕಿಡಿಕಾರಿದ್ದಾರೆ.

Video: ಹೆರಿಗೆ ಕೊಠಡಿಯಲ್ಲಿ ವೈದ್ಯೆಯ ಮೇಲೆ ಹಲ್ಲೆ ನಡೆಸಿದ ಇಂಟರ್ನ್ ವಿದ್ಯಾರ್ಥಿನಿಯರು
ವೈದ್ಯೆಯ ಮೇಲೆ ಹಲ್ಲೆ ನಡೆಸಿದ ಇಂಟರ್ನ್ ವಿದ್ಯಾರ್ಥಿನಿಯರು Image Credit source: Instagram
ಸಾಯಿನಂದಾ
|

Updated on: Sep 18, 2025 | 4:35 PM

Share

ಮಧ್ಯಪ್ರದೇಶ, ಸೆಪ್ಟೆಂಬರ್ 18: ಹೆಚ್ಚು ಓದುತ್ತಿದ್ದಂತೆ ನಾವುಗಳು ಮನುಷ್ಯತ್ವ ಮರೆತು ವರ್ತಿಸುತ್ತಿದ್ದೇವೆ. ಎಲ್ಲಿ ಹೇಗೆ ವರ್ತಿಸಬೇಕು ಎನ್ನುವುದನ್ನು ಮರೆತು ಬಿಟ್ಟಿದ್ದೇವೆ ಎಂದೆನಿಸುತ್ತದೆ. ಈ ದೃಶ್ಯ ನೋಡಿದ ಮೇಲೆ ನಿಮಗೂ ಹಾಗೆಯೇ ಅನಿಸಿದ್ರೂ ತಪ್ಪಿಲ್ಲ. ಹೆರಿಗೆ ಕೊಠಡಿಯೊಳಗೆ (labour room) ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಇಂಟರ್ನ್ ವಿದ್ಯಾರ್ಥಿನಿಯರು ಹಲ್ಲೆ ನಡೆಸಿದ್ದಾರೆ. ಈ ಘಟನೆಯೂ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ (Shahdol district of Madhya Pradesh) ಬಿರ್ಸಾ ಮುಂಡಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ವೈದ್ಯೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಇಂಟರ್ನ್ ವಿದ್ಯಾರ್ಥಿನಿಯರು

indiainyourfeed ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಹೆರಿಗೆ ನೋವು ಅನುಭವಿಸುತ್ತಿದ್ದ ಮಹಿಳೆಯನ್ನು ಕರೆದೊಯ್ಯುತ್ತಿದ್ದಾರೆ. ಈ ವೇಳೆಯಲ್ಲಿ ವೈದ್ಯರ ಮೇಲೆ ಇಂಟರ್ನ್ ವಿದ್ಯಾರ್ಥಿನಿಯರು ಹಲ್ಲೆ ನಡೆಸುವುದನ್ನು ನೋಡಬಹುದು. ಈ ಇಬ್ಬರೂ ಯುವತಿಯರು ವೈದ್ಯೆಯ ತಲೆಕೂದಲನ್ನು ಎಳೆದಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಪುರುಷ ವೈದ್ಯರೊಬ್ಬರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಯಾಗಿಸಲು ಪ್ರಯತ್ನಿಸಿದ್ದು, ಆದರೆ, ಈ ವಿದ್ಯಾರ್ಥಿನಿಯರು ವೈದ್ಯರಿಗೆ ಬೆದರಿಕೆ ಹಾಕಿರುವುದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು.

ಇದನ್ನೂ ಓದಿ
Image
ಬೆನ್ನಟ್ಟಿ ಬಂದ ಶ್ವಾನಗಳಿಗೆ ಹೆದರಿ ಮನೆಯ ಛಾವಣಿ ಹತ್ತಿದ ಹಸು
Image
ವೈದ್ಯರ ಹಾಸ್ಟೆಲ್​ ಟಾಯ್ಲೆಟ್​​​ ಕಮೋಡ್​​ನೊಳಗೆ ನಾಗರಹಾವು!
Image
ಕಾಡಿನಿಂದ ನಾಡಿಗೆ ಬಂದ ಕರಡಿಗೆ ಕೂಲ್ ಡ್ರಿಂಕ್ಸ್‌ ಕುಡಿಸಿದ ಯುವಕ
Image
ಹೆರಿಗೆ ನೋವಿನಲ್ಲೂ ಹೆಂಡ್ತಿ ಮೊಗದಲ್ಲಿ ನಗು ಮೂಡಿಸಿದ ಪತಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ವೈದ್ಯರ ಮೇಲೆ ವಿದ್ಯಾರ್ಥಿನಿಯರು ಹಲ್ಲೆ ನಡೆಸಿದ್ದು ಯಾಕೆ?

ಸೆಪ್ಟೆಂಬರ್ 11 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಈ ವೇಳೆ ಡಾ. ಯೋಗಿತಾ ತ್ಯಾಗಿ ಮತ್ತು ಡಾ. ಶಾನು ಅಗರ್ವಾಲ್ ಅವರು ಹೆರಿಗೆ ಕೊಠಡಿಗೆ ನುಗ್ಗಿ ಡಾ. ಶಿವಾನಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ನೈಟ್ ಶಿಫ್ಟ್ ಬಗ್ಗೆ ಇಂಟರ್ನ್‌ಗಳ ನಡುವೆ ಉದ್ವಿಗ್ನತೆ ಉಂಟಾಗಿರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಆ ಬಳಿಕ ಹಲ್ಲೆಗೊಳಗಾದ ಡಾ. ಶಿವಾನಿಯವರು ಕಾಲೇಜು ಆಡಳಿತ ಮಂಡಳಿಗೆ ಲಿಖಿತ ದೂರು ನೀಡಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಿದ ಇಂಟರ್ನ್ ವಿದ್ಯಾರ್ಥಿನಿಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:Video: ಹೆರಿಗೆ ನೋವಿನಲ್ಲೂ ಹೆಂಡ್ತಿ ಮೊಗದಲ್ಲಿ ನಗು ಮೂಡಿಸಲು ವಿಚಿತ್ರ ಡ್ಯಾನ್ಸ್ ಮಾಡಿದ ಪತಿ

ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಲವಾರು ಜನರು ವೀಕ್ಷಿಸಿದ್ದು ಮಹಿಳೆಯೂ ಹೆರಿಗೆ ನೋವಿನ ನಡುವೆ ಒದ್ದಾಡುತ್ತಿದ್ರೆ ಈ ಯುವತಿಯರು ಈ ರೀತಿ ವರ್ತನೆ ಸರಿಯಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಯುವತಿಯರು ವೈದ್ಯರಾಗುವುದಕ್ಕೂ ನಾಲಾಯಕ್ಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದೇನು ಹೆರಿಗೆ ಕೊಠಡಿಯೋ, ಇಲ್ಲ ಮಾರ್ಕೆಟೋ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ