Video: ನಡುರಸ್ತೆಯಲ್ಲೇ ಗಂಡನಿಗೆ ಥಳಿಸಿದ ಹೆಂಡ್ತಿ, ವೈರಲ್ ಆಯ್ತು ದೃಶ್ಯ
ಸಣ್ಣ ಪುಟ್ಟ ವಿಚಾರವಾಗಿ ನಡೆಯುವ ಗಂಡ ಹೆಂಡಿರ ನಡುವಿನ ಜಗಳಗಳು ಕೆಲವೊಮ್ಮೆ ಹೊಡೆದಾಟದವರೆಗೂ ತಲುಪುವುದಿದೆ. ಆದರೆ ಇದೀಗ ಗಂಡ ಹೆಂಡ್ತಿ ನಡುರಸ್ತೆಯಲ್ಲೇ ಗುದ್ದಾಡಿಕೊಂಡಿದ್ದು, ಈ ಜಗಳಗಳು ಅತಿರೇಕಕ್ಕೆ ತಲುಪಿದೆ. ಹೌದು, ಪತಿ ಪತ್ನಿಯ ನಡುವಿನ ಜಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಇವರಿಬ್ಬರ ಬಿಗ್ ಫೈಟ್ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಕಾನ್ಪುರ, ಸೆಪ್ಟೆಂಬರ್ 18: ಗಂಡ ಹೆಂಡಿರ ಜಗಳ (fight) ಉಂಡು ಮಲಗುವ ತನಕ ಎನ್ನುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ, ಈಗ ಏನಿದ್ದರೂ ಪತಿಪತ್ನಿಯರ ಜಗಳ ನಡುಬೀದಿಗೆ ಬಂದರೇನೇ ಸಮಾಧಾನ ಎನ್ನುವ ಪರಿಸ್ಥಿತಿಯು ನಿರ್ಮಾಣವಾಗಿದೆ. ಹೌದು, ಸಣ್ಣ ಪುಟ್ಟ ವಿಷಯವನ್ನೇ ದೊಡ್ಡದು ಮಾಡಿ ಎಲ್ಲರಿಗೂ ತಿಳಿಯುವಂತೆ ನಡುರಸ್ತೆಯಲ್ಲೇ ಜಗಳ ಮಾಡುವ ದಂಪತಿಗಳು ಇದ್ದಾರೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ನಡುರಸ್ತೆಯಲ್ಲೇ ಹೆಂಡ್ತಿ ಗಂಡನಿಗೆ ಹಿಗ್ಗಾಮುಗ್ಗವಾಗಿ ಥಳಿಸುತ್ತಿದ್ದು, ಪತಿಯು ಆಕೆಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಈ ಘಟನೆಯು ಉತ್ತರ ಪ್ರದೇಶದ ಕಾನ್ಪುರದಲ್ಲಿ (Kanpur of Uttara Pradesh) ನಡೆದಿದೆ ಎನ್ನಲಾಗಿದೆ. ಈ ಜಗಳ ಹಿಂದಿನ ಕಾರಣವೇನು ಎನ್ನುವುದು ತಿಳಿದು ಬಂದಿಲ್ಲ. ಈ ಜನನಿಬಿಡ ಪ್ರದೇಶದಲ್ಲಿ ಹೆಂಡ್ತಿ ಗಂಡನಿಗೆ ಥಳಿಸುತ್ತಿರುವ ದೃಶ್ಯವು ಸಖತ್ ವೈರಲ್ ಆಗುತ್ತಿದೆ.
ಹೆಂಡ್ತಿಯಿಂದ ಗಂಡನಿಗೆ ಬಿತ್ತು ಗೂಸಾ
@gharkekalesh ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಪತಿ ಪತ್ನಿಯ ನಡುವಿನ ಗುದ್ದಾಟದ ದೃಶ್ಯವನ್ನು ಕಾಣಬಹುದು. ಬಳೆ ಅಂಗಡಿಯ ಹೊರಗೆ ಪತ್ನಿಯು ಪತಿಗೆ ಹಿಗ್ಗಾಮುಗ್ಗ ಥಳಿಸಿದ್ದಾಳೆ. ಪ್ರಾರಂಭದಲ್ಲಿ ಕುರ್ಚಿ ಮೇಲೆ ಕುಳಿತಿದ್ದ ಪತಿಯನ್ನು ಕಾಲಿನಿಂದ ಒದ್ದು ಬೀಳಿಸಿದ್ದಾಳೆ. ಈ ಹೊಡೆದಾಟವು ಅತಿರೇಕಕ್ಕೆ ತಲುಪಿದ್ದು, ಆ ಬಳಿಕ ಆತನ ಮೈ ಮೇಲೆ ಹತ್ತಿ ಚೆನ್ನಾಗಿ ಮನಸ್ಸು ಬಂದಂತೆ ಬಾರಿಸುವುದನ್ನು ಕಾಣಬಹುದು. ಅಷ್ಟಕ್ಕೆ ನಿಲ್ಲಿಸದೇ ಆತನ ತಲೆಯನ್ನು ಚರಂಡಿಗೆ ತಳ್ಳಿ ಮತ್ತೆ ಚೆನ್ನಾಗಿ ಥಳಿಸುತ್ತಾಳೆ. ಈ ಹೊಡೆತದಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಆತನಿಗೆ ಸಾಧ್ಯವಾಗಲಿಲ್ಲ. ಇನ್ನು ಅಲ್ಲಿ ನೆರೆದಿದ್ದ ಜನರು ಮಧ್ಯ ಪ್ರವೇಶಿಸಿ ಜಗಳವನ್ನು ಬಿಡಿಸುವ ಪ್ರಯತ್ನ ಮಾಡಿಲ್ಲ. ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Kalesh b/w a Couple pic.twitter.com/qeUVf42EJP
— Ghar Ke Kalesh (@gharkekalesh) September 17, 2025
ಇದನ್ನೂ ಓದಿ:Viral: ಸಮೋಸ ತರಲು ನಿರಾಕರಿಸಿದ ಪತಿ, ಕೋಪದಲ್ಲಿ ಥಳಿಸಿ ಹಲ್ಲೆಗೆ ಯತ್ನಿಸಿದ ಪತ್ನಿ
ಸೆಪ್ಟೆಂಬರ್ 17 ರಂದು ಶೇರ್ ಮಾಡಿಕೊಳ್ಳಲಾದ ಈ ವಿಡಿಯೋ ಇದುವರೆಗೂ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಬಳಕೆದಾರರೊಬ್ಬರು ಈ ಮಹಿಳೆಗೆ ಹೋರಾಟದ ಕೌಶಲ್ಯವಿದೆ. ಆಕೆ ಖಂಡಿತವಾಗಿಯೂ WWE ಯಲ್ಲಿ ಭಾಗವಹಿಸಬಹುದು ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಅವಳು ನಿಜಕ್ಕೂ ಕಠಿಣ ಸ್ಪರ್ಧಿ ಎಂದಿದ್ದಾರೆ. ಭಾರತೀಯ ಜೋಡಿಗಳು ಹೀಗೆಯೇ ಇರುತ್ತಾರೆ, ಆದರೆ ಗಂಡ ಹೆಂಡಿರ ಜಗಳಗಳು ಬೀದಿಗೆ ಬರುತ್ತಿರುವುದು ವಿಪರ್ಯಾಸ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








