AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕೈ ತುಂಬಾ ಸಂಬಳ ಸಿಗುವ ಕೆಲಸವಿದೆ, ಆದ್ರೆ ಸಂತೋಷವಿಲ್ಲ; ವಿದೇಶಿ ಜೀವನವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಭಾರತೀಯ ಮಹಿಳೆ

ಹೆಚ್ಚಿನವರು ಕೈ ತುಂಬಾ ಸಂಬಳ ಉದ್ಯೋಗ ಸಿಕ್ಕರೆ ಸಾಕು ಎಂದು ಬಯಸುತ್ತಾರೆ. ಕೆಲಸ ಎಷ್ಟೇ ಕಷ್ಟವಿರಲಿ, ಲೈಫ್ ಸೆಟ್ಲ್ ಆದರೆ ಸಾಕು ಎಂದುಕೊಳ್ಳುವವರೇ ಹೆಚ್ಚು. ಆದರೆ ಇದೀಗ ಭಾರತೀಯ ಮಹಿಳೆಗೆ ಕೈ ತುಂಬಾ ಸಂಬಳ ಸಿಗುವ ಉದ್ಯೋಗದಿಂದ ಹಿಂಸೆ ಎನಿಸುತ್ತಿದೆ. ಹೌದು, ಬೆಂಗಳೂರಿನಲ್ಲಿ ತಮ್ಮ ಕಡಿಮೆ ಸಂಬಳ ಸಿಗುತ್ತಿದ್ದ ಕೆಲಸದಲ್ಲೇ ಸಂತೋಷವಾಗಿದ್ದೆ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

Video: ಕೈ ತುಂಬಾ ಸಂಬಳ ಸಿಗುವ ಕೆಲಸವಿದೆ, ಆದ್ರೆ ಸಂತೋಷವಿಲ್ಲ; ವಿದೇಶಿ ಜೀವನವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಭಾರತೀಯ ಮಹಿಳೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Sep 17, 2025 | 5:14 PM

Share

ಕೆಲವರಿಗೆ ವಿದೇಶ (foreign) ಅಂದ್ರೆ ಅದೇನೋ ವ್ಯಾಮೋಹ. ವಿದೇಶದಲ್ಲಿ ಜಾಬ್ ಸಿಕ್ಕರೆ ಲೈಫ್ ಸೆಟ್ಲ್ ಆದಂತೆ ಎನ್ನುವುದು ಹೆಚ್ಚಿನವರ ಭಾವನೆ. ಹೀಗಾಗಿ ಓದು ಮುಗಿಯುತ್ತಿದ್ದಂತೆ ಉದ್ಯೋಗಕ್ಕಾಗಿ ವಿದೇಶಕ್ಕೆ ಹಾರುತ್ತಾರೆ. ಆದರೆ ನಾವು ಅಂದುಕೊಂಡಂತೆ ಅವರ ಬದುಕು ಇರಲ್ಲ ಎನ್ನುವುದು ಈ ಮಹಿಳೆ ಯ ಮಾತು ಕೇಳಿದ್ರೆ ನಿಮ್ಗೆ ಅನಿಸಬಹುದು. ಕಾರ್ಪೋರೇಟ್ ಜೀವನದಲ್ಲಿ ಹೆಚ್ಚು ಸಂಬಳವಿದ್ರೂ ಆ ಕೆಲಸದ ಸಹವಾಸ ಸಾಕಪ್ಪ ಸಾಕು ಎಂದು ಅನಿಸಿದ್ದು. ಇದೀಗ ದುಬೈನಲ್ಲಿ ನೆಲೆಸಿರುವ ಭಾರತೀಯ ಮಹಿಳೆ ಸೀಮಾ ಪುರೋಹಿತ್ (Seema Purohit) ಅವರು ಅಧಿಕ ಸಂಬಳ ಸಿಗುವ ಈ ಕೆಲಸವು ನೆಮ್ಮದಿ ನೀಡುತ್ತಿಲ್ಲ. ಕಡಿಮೆ ಸಂಬಳವಾದ್ರೂ ಬೆಂಗಳೂರಿನ ಜೀವನವೇ ಚೆನ್ನಾಗಿತ್ತು ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

seemapurohit018 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ 18000 ಸಂಬಳ ಸಿಗುವ ಕೆಲಸದಿಂದ ನಾನು ಸಂತೋಷವಾಗಿದ್ದೆ. ಅದು ನನ್ನ ಮೊದಲ ಕೆಲಸವಾಗಿತ್ತು. ಹೆಚ್ಚಿನ ಅವಕಾಶ ಹಾಗೂ ಸಂಬಳ ಸಿಗುತ್ತಿದ್ದಂತೆ ದುಬೈಗೆ ತೆರಳಿದೆ. ಆದರೆ ಕಾರ್ಪೊರೇಟ್ ಜಗತ್ತಿನಲ್ಲಿ ಅಧಿಕ ಸಂಬಳವೇನೋ ಸಿಕ್ಕಿತು. ಬೆಂಗಳೂರಿನಲ್ಲಿ ಸಾಧಾರಣ ಮಾಸಿಕ ಸಂಬಳವನ್ನು ಗಳಿಸುವಾಗ ಸಿಗುತ್ತಿದ್ದ ತೃಪ್ತಿಯ ಭಾವನೆಯನ್ನು ವಿದೇಶದಲ್ಲಿನ ಈ ಅಧಿಕ ಸಂಬಳದ ಕೆಲಸದಲ್ಲಿ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
ಸಹೋದರನ ಮದುವೆಗೆ ರಜೆ ಕೊಡದ ಬಾಸ್, ಜಾಬ್ ರಿಸೈನ್ ಮಾಡಿದ ಉದ್ಯೋಗಿ
Image
ಇಂದು ವಾರ್ಷಿಕ ಸಂಬಳವೇ 24 ಲಕ್ಷ ರೂ; ಯಶಸ್ಸಿನ ಹಾದಿ ಬಿಚ್ಚಿಟ್ಟ ಯುವಕ
Image
ಅಮೆರಿಕದಲ್ಲಿ ಶಿಕ್ಷಣ ಪಡೆದ್ರು ಸಿಗದ ಉದ್ಯೋಗ, ಈ ಯುವಕನ ಪರಿಸ್ಥಿತಿ ನೋಡಿ
Image
ನಿಮ್ಗೆ ಈ ಕಂಪನಿಯಲ್ಲಿ ಕೆಲಸ ಸಿಗಲ್ಲ ಎಂದು ಯುವತಿಗೆ ಹೇಳಿದ ಸಂದರ್ಶಕ

ವೈರಲ್ ವಿಡಿಯೋ ಇಲ್ಲಿದೆ ನೋಡಿ

View this post on Instagram

A post shared by Seema (@seemapurohit018)

ಈಗಿನ ಕಾಲದಲ್ಲಿ ಉತ್ತಮ ಅವಕಾಶಗಳು ಅಧಿಕ ಸಂಬಳ ಸಿಗುವ ಉದ್ಯೋಗ ಹುಡುಕುತ್ತಾ ತಮ್ಮ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ತನ್ನ ಮೊದಲ ಕೆಲಸದಲ್ಲಿ ತಿಂಗಳಿಗೆ ಕೇವಲ 18,000 ರೂ ಗಳಿಸುತ್ತಿದ್ದ ಸಮಯದಲ್ಲಿ ನಾನೇ ವಿಶ್ವದ ಶ್ರೀಮಂತ ಹುಡುಗಿ ಎನ್ನುವ ಭಾವನೆಯಿತ್ತು. ಆ ಸಮಯದಲ್ಲಿ ಕಡಿಮೆ ಸಂಬಳ ಸಿಗುತ್ತಿದ್ರೂ, ಬಾಡಿಗೆ ಪಾವತಿಸಲು, ಶಾಪಿಂಗ್, ಆಹಾರ ಸೇವಿಸಲು ಹೀಗೆ ಖರ್ಚು ಕಳೆದು ತಿಂಗಳ ಕೊನೆಯಲ್ಲಿ ಸ್ವಲ್ಪ ಹಣವನ್ನು ಉಳಿತಾಯ ಮಾಡುತ್ತಿದ್ದೆದ್ದೆ. ಆ ಕ್ಷಣವು ನನ್ನ ಜೀವನದ ಸಂತೋಷದ ಕ್ಷಣಗಳಲ್ಲಿ ಒಂದು. ಆದರೆ ಇಂದು ದುಬೈಯಲ್ಲಿ ನನಗೆ ಕೈ ತುಂಬಾ ಸಂಬಳ ದೊರೆಯುತ್ತಿದೆ, ಸಂತೋಷವಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:Viral: ಸಹೋದರನ ಮದುವೆಗೆ ರಜೆ ಕೊಡದ ಬಾಸ್, ಜಾಬ್ ರಿಸೈನ್ ಮಾಡಿದ ಉದ್ಯೋಗಿ

ಈ ವಿಡಿಯೋ ಎಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ರೀತಿ ಅನುಭವ ನಮಗೂ ಆಗಿದೆ. ಸಂಬಳ ಹೆಚ್ಚಾದಷ್ಟು ನೆಮ್ಮದಿ ಹಾಳಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಬಹುಷಃ ನೀವು ದುಬೈನಲ್ಲಿ ಹೆಚ್ಚು ಖರ್ಚು ಮಾಡುತ್ತಿರಬೇಕು ಅದಕ್ಕಾಗಿ ನಿಮಗೆ ಉಳಿತಾಯವು ಕಷ್ಟ ಎನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ದುಬೈನಲ್ಲಿನ ಜೀವನವು ನಿಮ್ಮ ಮಾನಸಿಕ ನೆಮ್ಮದಿಯ ಮೇಲೆ ಪರಿಣಾಮ ಬೀರುತ್ತಿದ್ದರೆ, ಮನೆಗೆ ಹಿಂತಿರುಗಿ. ಭಾರತದಲ್ಲಿಯೂ ನಿಮಗೆ ಉತ್ತಮ ಉದ್ಯೋಗ ಸಿಗುತ್ತದೆ, ನಿಮ್ಮ ಸಂತೋಷವನ್ನು ತ್ಯಾಗ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Wed, 17 September 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!