Optical Illusion: ಈ ಚಿತ್ರದಲ್ಲಿ ಪುಟ್ಟ ಹಕ್ಕಿಯೊಂದು ಅಡಗಿದೆ, 15 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ
ಕಣ್ಣು ಹಾಗೂ ಮೆದುಳಿಗೆ ಕೆಲಸ ನೀಡುವ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಬಿಡಿಸುವುದೆಂದರೆ ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ತುಂಬಾನೇ ಕಷ್ಟ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ಚಿತ್ರ ವೈರಲ್ ಆಗಿದ್ದು, ಇದರಲ್ಲಿ ಅಡಗಿರುವ ಹಕ್ಕಿಯನ್ನು ಕಂಡುಹಿಡಿಯಬೇಕು. ಎಲೆಗಳ ನಡುವೆ ಅವಿತು ಕೊಂಡಿರುವ ಪಕ್ಷಿಯನ್ನು ತೀಕ್ಷ್ಣ ಮನಸ್ಸಿನ ವ್ಯಕ್ತಿಗಳು ಮಾತ್ರ ಪತ್ತೆಹಚ್ಚಲು ಸಾಧ್ಯ.

ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ ಸೇರಿದಂತೆ ಇನ್ನಿತರ ಮೋಜಿನ ಆಟಗಳು ಖುಷಿಕೊಡುವುದರ ಜೊತೆಗೆ ಮೆದುಳಿಗೆ ಕೆಲಸ ನೀಡುತ್ತವೆ. ಈ ಒಗಟಿನ ಚಿತ್ರವನ್ನು ಬಿಡಿಸುತ್ತ ಕುಳಿತರೆ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಬುದ್ಧಿವಂತರು ಕಡಿಮೆ ಸಮಯದಲ್ಲಿ ಉತ್ತರ ಕಂಡು ಹಿಡಿದು ಜಾಣರು ಎನಿಸಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಎಷ್ಟೇ ಸಮಯ ತೆಗೆದುಕೊಂಡರೂ ಉತ್ತರ ಕಂಡುಕೊಳ್ಳಲು ಸಾಧ್ಯವಾಗವುದಿಲ್ಲ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಈ ಒಗಟನ್ನು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ. ಎಲೆಗಳ ನಡುವೆ ಪುಟ್ಟ ಪಕ್ಷಿಯೊಂದು ಅಡಗಿದೆ. ಹದಿನೈದು ಸೆಕೆಂಡುಗಳಲ್ಲಿ ಈ ಹಕ್ಕಿ ಎಲ್ಲಿದೆ ಎಂದು ಹುಡುಕಿ ಹೇಳಬೇಕು. ಈ ಸವಾಲು ಸ್ವೀಕರಿಸಲು ನೀವು ರೆಡಿ ಇದ್ದೀರಾ?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಏನಿದೆ?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಫೈಂಡ್ ದಿ ಸ್ನೈಪರ್ ಎಂಬ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಎಲೆಗಳ ನಡುವೆ ಒಂದು ಪುಟ್ಟ ಹಕ್ಕಿಯೊಂದು ಅಡಗಿದೆ. 15 ಸೆಕೆಂಡುಗಳ ಒಳಗೆ ಪುಟ್ಟ ಹಕ್ಕಿಯನ್ನು ಗುರುತಿಸುವ ಸವಾಲು ನೀಡಲಾಗಿದೆ. ಎಲೆಗಳು ರಾಶಿಯೂ ನಿಮ್ಮ ಕಣ್ಣನ್ನು ಮೋಸ ಗೊಳಿಸುತ್ತದೆ. ಈ ಸುತ್ತಮುತ್ತಲಿನ ಪ್ರದೇಶದಿಂದಾಗಿ ಎಲ್ಲೋ ಅಡಗಿರುವ ಪುಟ್ಟ ಹಕ್ಕಿಯನ್ನು ಗುರುತಿಸುವುದು ಕಷ್ಟಕರವಾಗಿಸುತ್ತದೆ. ಈ ಪಕ್ಷಿಯೂ ನಿಮ್ಮ ಕಣ್ಣಿಗೆ ಬಿದ್ದರೆ ವೀಕ್ಷಣಾ ಕೌಶಲ್ಯವು ಅತ್ಯುತ್ತಮ ವಾಗಿದೆ ಎಂದರ್ಥ.
ಇದನ್ನೂ ಓದಿ: Optical Illusion: ನಿಮ್ಮ ಕಣ್ಣಿಗೆ ಕಪ್ಪೆ ಕಾಣಿಸಿತೇ? 10 ಸೆಕೆಂಡುಗಳಲ್ಲಿ ಗುರುತಿಸಿ
ಪುಟ್ಟ ಹಕ್ಕಿ ನಿಮ್ಮ ಕಣ್ಣಿಗೆ ಬಿದ್ದಿತೇ?
ನೀವು ಎಷ್ಟೇ ಪ್ರಯತ್ನಿಸಿದರೂ ಪುಟ್ಟ ಹಕ್ಕಿಯೂ ಎಲ್ಲಿದೆ ಎಂದು ಪತ್ತೆ ಹಚ್ಚಲು ನಿಮಗೆ ಸಾಧ್ಯವಾಗಿಲ್ಲವೇ. ನಾವು ಹೇಳುವಂತೆ ನೀವು ಮಾಡಿ, ಈ ಆಪ್ಟಿಕಲ್ ಭ್ರಮೆಯನ್ನು ಪರಿಹರಿಸಲು, ಫೋಟೋವನ್ನು ಭಾಗಗಳಾಗಿ ವಿಂಗಡಿಸಿಕೊಳ್ಳಿ. ಪ್ರತಿಯೊಂದು ಭಾಗವನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿ. ನಿಮ್ಮ ಕಣ್ಣಿಗೆ ಹಕ್ಕಿಯೊಂದು ಕಾಣಿಸಿತು ಎಂದು ನಾವು ಭಾವಿಸುತ್ತೇವೆ. ಇಲ್ಲವಾದರೆ ಹಕ್ಕಿ ಎಲ್ಲಿದೆ ಎಂದು ನಾವೇ ನಿಮಗೆ ತಿಳಿಸುತ್ತೇವೆ. ಈ ಚಿತ್ರದ ಕೆಳಗಿನ ಬಲಭಾಗದ ಬಳಿ ಕೊಂಬೆಯ ಮೇಲೆ ಕುಳಿತಿರುವ ಪುಟ್ಟ ಹಕ್ಕಿಯೂ ಕುಳಿತಿದ್ದು ನೀವು ಸೂಕ್ಷ್ಮವಾಗಿ ಗಮನಿಸಿದರೆ ಅದು ನಿಮ್ಮ ಕಣ್ಣಿಗೆ ಕಾಣಿಸುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Wed, 17 September 25








