Video: ಎಂತಹ ಸಂಸ್ಕಾರ ನೋಡಿ; ಮಾಲ್‌ನಲ್ಲಿ ಗೊಂಬೆಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ಪುಟಾಣಿ
ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಹೆತ್ತವರು ಏನು ಕಲಿಸುತ್ತಾರೋ, ಅದು ಆ ಮಕ್ಕಳ ನಡೆನುಡಿಯಲ್ಲಿ ವ್ಯಕ್ತವಾಗುತ್ತದೆ. ಅದುವೇ ಮಕ್ಕಳು ಬೆಳೆದುಬಂದ ಮನೆಯ ವಾತಾವರಣ ಹೇಗಿದೆ ಎನ್ನುವುದನ್ನು ತಿಳಿಸುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋನೇ ಇದಕ್ಕೆ ಸಾಕ್ಷಿ. ಹೌದು, ಪುಟಾಣಿಯೊಂದು ಮಾಲ್ ನಲ್ಲಿರುವ ಗೊಂಬೆಯನ್ನು ಕಂಡು ಅದರೊಂದಿಗೆ ಸಂಸ್ಕಾರಯುತವಾಗಿ ನಡೆದುಕೊಂಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಮಾತಿದೆ. ಹೀಗಾಗಿ ಹೆತ್ತವರು ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ (Kids) ಒಳ್ಳೆಯ ಸಂಸ್ಕಾರವನ್ನು ಹೇಳಿಕೊಡಬೇಕು. ನೀವು ಈ ಮಕ್ಕಳನ್ನು ಹೇಗೆ ಬೆಳೆಸುತ್ತೀರಿ ಎನ್ನುವುದರ ಮೇಲೆ ಅವರ ನಡವಳಿಕೆ ಹಾಗೂ ಭವಿಷ್ಯವು ನಿರ್ಧಾರವಾಗುತ್ತದೆ. ಸರಿಯಾದ ಸಮಯಕ್ಕೆ ಒಂದೊಳ್ಳೆ ಸಂಸ್ಕಾರವಿಟ್ಟು ಬೆಳೆಸಿದರೆ ಮಾತ್ರ ಮಕ್ಕಳು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ. ಆದರೆ ಈ ಪುಟಾಣಿಗೆ ಹೆತ್ತವರು ಎಷ್ಟು ಒಳ್ಳೆಯ ಸಂಸ್ಕಾರ ನೀಡಿದ್ದಾರೆ ಎನ್ನುವುದಕ್ಕೆ ಇದುವೇ ಸಾಕ್ಷಿಯಾಗಿದೆ. ಪುಟಾಣಿಯೂ ಶಾಪಿಂಗ್ ಮಾಲ್ ನಲ್ಲಿ (shopping mall) ಆಕರ್ಷಕ ಗೊಂಬೆಗಳನ್ನು ಕಂಡು ಮನುಷ್ಯರೆಂದು ಭಾವಿಸಿದೆ. ಆ ಬಳಿಕ ಗೊಂಬೆಗಳ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದುಕೊಂಡಿದ್ದು, ಈ ಹೃದಯಸ್ಪರ್ಶಿ ದೃಶ್ಯವೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮಾಲ್‌ನಲ್ಲಿ ಗೊಂಬೆ ಕಂಡೊಡನೆ ಈ ಪುಟಾಣಿ ಮಾಡಿದ್ದೇನು?
@divu and mom ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪುಟ್ಟ ಹುಡುಗಿಯ ಮುಗ್ಧತೆ ಹಾಗೂ ಸಂಸ್ಕಾರವಂತ ನಡವಳಿಕೆಗೆ ಸಾಕ್ಷಿಯಾಗಿದೆ. ಈ ಪುಟಾಣಿಯ ಹೆಸರು ದಿವಿಶಾ. ಈ ಪುಟ್ಟ ಹುಡುಗಿಯ ತಂದೆ ಶಾನು ಸಫಾಯಾ ತಾಯಿ ವಿಧಿ ಸಕ್ಸೇನಾ. ಈ ಪುಟ್ಟ ಹುಡುಗಿಯೂ ತನ್ನ ತಂದೆ ತಾಯಿಯ ಶಾಪಿಂಗ್ ಮಾಲ್ ಗೆ ಬಂದಿದ್ದಾಳೆ. ಈ ಪುಟಾಣಿಯ ಗಮನ ಶಾಪಿಂಗ್ ಮಾಲ್‌ನಲ್ಲಿ ನಿಲ್ಲಿಸಲಾದ ಗೊಂಬೆಗಳ ಕಡೆಗೆ ಹೋಗಿದ್ದು, ಈ ಗೊಂಬೆಗಳನ್ನು ಮನುಷ್ಯರೆಂದು ಭಾವಿಸಿದ್ದಾಳೆ. ಅಷ್ಟೇ ಅಲ್ಲದೇ ಈ ಗೊಂಬೆಗಳ ಪಾದ ಮುಟ್ಟಿ ನಮಸ್ಕರಿಸಿರುವುದನ್ನು ನೀವಿಲ್ಲಿ ನೋಡಬಹುದು. ಮುದ್ದಿನ ಮಗಳ ಈ ಕೆಲಸ ನೋಡಿ ಹೆತ್ತವರು ನಗುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:Video: ಇದು ವನಗಿರಿಯ ರಂಗು; ಪ್ರಕೃತಿಯ ನಡುವೆ ಹುಲಿದನ ಆಟವಾಡಿ ಸಂಭ್ರಮಿಸಿದ ಪುಟಾಣಿಗಳು
ಈ ವಿಡಿಯೋ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇದು ನಾನು ನೋಡಿದ ಅತ್ಯಂತ ಖುಷಿಯ ವಿಚಾರ. ಮುಗ್ಧತೆಗೆ ಇದುವೇ ಸಾಕ್ಷಿ ಎಂದಿದ್ದಾರೆ. ಮಕ್ಕಳಿಗೆ ಎಂತಹ ಒಳ್ಳೆಯ ಸಂಸ್ಕಾರವನ್ನು ಹೆತ್ತವರು ಕಲಿಸಿಕೊಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂದಿನ ಜೀವನದಲ್ಲಿ ನಾವು ಅರಿಯದ ಕೆಲವು ಮೌಲ್ಯಯುತ ನಡವಳಿಕೆಯನ್ನು ಈ ಪುಟಾಣಿಯೂ ನೆನಪಿಸಿದ್ದಾಳೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








