AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಪುರುಷರ ಮೌನದ ಹಿಂದಿದೆ ನೂರಾರು ಹೋರಾಟ; ಸ್ನೇಹಿತನ ಬದುಕಿನ ಚಿತ್ರಣವನ್ನು ಬಿಚ್ಚಿಟ್ಟ ವ್ಯಕ್ತಿ

ಗಂಡು ಮಕ್ಕಳು ಜೀವನದಲ್ಲಿ ಎದುರಾಗುವ ಸವಾಲು,ಕಷ್ಟಗಳನ್ನು ಹೇಳಿಕೊಳ್ಳುವುದೇ ಇಲ್ಲ. ಏನೇ ಇದ್ರೂ ಎಲ್ಲವನ್ನು ಸಹಿಸಿಕೊಂಡು ಕುಟುಂಬದ ಸಂತೋಷಕ್ಕಾಗಿ ದುಡಿಯುತ್ತಾರೆ. ಆದರೆ ಮುಂಬೈ ಮೂಲದ ವ್ಯಕ್ತಿಯೊಬ್ಬರ ಪೋಸ್ಟ್ ಪುರುಷರ ಹೆಗಲ ಮೇಲೆ ಎಷ್ಟೆಲ್ಲಾ ಜವಾಬ್ದಾರಿಗಳು ಇರುತ್ತವೆ ಎನ್ನುವುದನ್ನು ಬಹಿರಂಗಪಡಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಪುರುಷರ ಮೌನದ ಹಿಂದಿದೆ ನೂರಾರು ಹೋರಾಟ; ಸ್ನೇಹಿತನ ಬದುಕಿನ ಚಿತ್ರಣವನ್ನು ಬಿಚ್ಚಿಟ್ಟ ವ್ಯಕ್ತಿ
ಸಾಂದರ್ಭಿಕ ಚಿತ್ರ Image Credit source: Pinterest
ಸಾಯಿನಂದಾ
|

Updated on: Oct 02, 2025 | 5:50 PM

Share

ಗಂಡುಮಕ್ಕಳ (Men) ಜೀವನವೇ ಹಾಗೆ, ಬದುಕಿನಲ್ಲಿ ಏನೇ ಎದುರಾಗಲಿ, ಮುಗ್ಗರಿಸಿ ಬೀಳಲಿ ಎಲ್ಲವನ್ನು ಸಹಿಸಿಕೊಳ್ಳಬೇಕು. ಯಾರ ಬಳಿಯಾದ್ರೂ ಹೇಳಿಕೊಂಡರೆ ತಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅನ್ನೋ ಭಾವನೆ. ಹೀಗಾಗಿ ತಮ್ಮ ಕಷ್ಟಗಳ ಬಗ್ಗೆ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳುವುದಿಲ್ಲ. ಎಷ್ಟೇ ಕಷ್ಟ ಎದುರಾಗಲಿ ಹೆಂಡ್ತಿ ಮಕ್ಕಳು ಖುಷಿಯಾಗಿರಲಿ ಎಂದು ಅವರಿಗಾಗಿಯೇ ದುಡಿಯುತ್ತಾರೆ. ಮುಂಬೈ ಮೂಲದ ಮಾರ್ಕೆಟಿಂಗ್ ವೃತ್ತಿಪರರಾದ ನೀಲ್ ಜಾಧವ್ (Neel Jadhav) ತನ್ನ ಸ್ನೇಹಿತರೊಬ್ಬರು ಮೂರು ತಿಂಗಳ ಕಾಲ ಸಂಬಳವಿಲ್ಲದೇ ಇದ್ದಾಗಲೂ ಖರ್ಚುವೆಚ್ಚಗಳನ್ನು ಹೇಗೆ ಸರಿದೂಗಿಸಿದರು. ಆದರೆ ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆಯಾಯ್ತು ಎಂದು ವಿವರಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಷ್ಟೋ ಗಂಡಸರು ಇದೇ ರೀತಿ ಜೀವನ ನಡೆಸುತ್ತಿದ್ದಾರೆ ಎಂದು ಬಳಕೆದಾರರು ಕಟು ವಾಸ್ತವವನ್ನು ಒಪ್ಪಿಕೊಂಡಿದ್ದಾರೆ.

ಮಾರ್ಕೆಟಿಂಗ್ ವೃತ್ತಿಪರರಾದ ನೀಲ್ ಜಾಧವ್ ಅವರು ತಮ್ಮ ಸ್ನೇಹಿತ ಮೂರು ತಿಂಗಳ ಕಾಲ ಕೆಲಸ ವಿಲ್ಲದ ವೇಳೆ ಹೇಗೆ ಕುಟುಂಬ ನಿರ್ವಹಣೆ ಮಾಡಿದ ಎನ್ನುವ ಬಗ್ಗೆ ಲಿಂಕ್ಡ್ ಇನ್‌ನಲ್ಲಿ ವಿವರಿಸಿದ್ದಾರೆ. ಈ ಪೋಸ್ಟ್‌ನಲ್ಲಿ ನನ್ನ ಸ್ನೇಹಿತ ತನ್ನ ಜೀವನದ ದೊಡ್ಡ ಫ್ಲೆಕ್ಸ್ ಏನೆಂದರೆ, ಅವನಿಗೆ 3 ತಿಂಗಳ ಕಾಲ ಸಂಬಳ ನೀಡಲಿಲ್ಲ, ಆದರೆ ಅವರು ಈ ಬಗ್ಗೆ ತನ್ನ ಕುಟುಂಬಕ್ಕೆ ಎಂದಿಗೂ ತಿಳಿಸಲಿಲ್ಲ. ವಯಸ್ಸಾದ ಹೆತ್ತವರ ವೈದ್ಯಕೀಯ ಬಿಲ್‌, ಮಕ್ಕಳ ಶಾಲಾ ಶುಲ್ಕ ಎಲ್ಲಾ ಪಾವತಿಸಿದ್ದಾರೆ. ಪೋಷಕರು ಮನೆಗೆ ಪುನಃ ಬಣ್ಣ ಬಳಿದಿದ್ದಾರೆ. ಆದರೆ ಈ ಎಲ್ಲಾ ಖರ್ಚು ವೆಚ್ಚಗಳನ್ನು ಅವರು ಸರಿದೂಗಿಸಿದರು ಎನ್ನುವ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

Viral Post

ಇದನ್ನೂ ಓದಿ
Image
ತಿಂಗಳಿಗೆ 60 ಸಾವಿರ ರೂ ಸಂಬಳದ ಉದ್ಯೋಗ ತೊರೆದ ಯುವತಿ
Image
ಎಕ್ಸ್‌ನಲ್ಲಿ ಒಂದೇ ಒಂದು ಪೋಸ್ಟ್, ತಿಂಗಳಿಗೆ 30 ಸಾವಿರ ರೂ ಸಂಪಾದನೆ
Image
ಒಂಟಿತನ ಹೋಗಲಾಡಿಸಲು ಹೊಸ ಮಾರ್ಗ ಕಂಡುಕೊಂಡ ಸಾಫ್ಟ್‌ವೇರ್‌ ಇಂಜಿನಿಯರ್
Image
ಮೂವಿ ನೋಡೋಕ್ ಥಿಯೇಟರ್‌ಗೆ ಬಂದ್ರು ವರ್ಕ್‌ ಟೆನ್ಶನ್‌ ಮಾತ್ರ ತಪ್ಪಿಲ್ಲ

ಆದರೆ ಆ ಕಥೆಯಲ್ಲಿ ನೋವಿನಿಂದ ಕೂಡಿದ ಭಾಗವಿದೆ. ಈ ರಹಸ್ಯ ವಿಷಯವನ್ನು ತನ್ನೊಳಗೆ ಇಟ್ಟುಕೊಂಡು ಒಳಗೊಳಗೆ ಬಹಳಷ್ಟು ನರಳಿದ್ದು ಇದೆ. ಇದ್ದಕ್ಕಿದ್ದಂತೆ ವಯಸ್ಸು ಆದವರಂತೆ ಕಂಡರು. ತಲೆ ಕೂದಲು ಕಳೆದುಕೊಂಡನು. ತೂಕ ಹೆಚ್ಚಾಯಿತು, ಶಾಂತವಾಗಿಯೇ ಬಿಟ್ಟರು. ಅವರನ್ನು ಅವರಿಗೆ ನೋಡಲು ಸಾಧ್ಯವಾಗಲಿಲ್ಲ. ಪುರುಷರು ತಮ್ಮ ಭಾವನೆಗಳನ್ನು ಹೇಳಿಕೊಳ್ಳುವುದಿಲ್ಲ. ಅವರ ಮೇಲೆ ಸಹಜವಾಗಿ ಎಲ್ಲರೂ ಹೊರೆ ಹಾಕುತ್ತಾರೆ. ಪುರುಷರ ಕಷ್ಟಗಳ ಬಗ್ಗೆ ಕೇಳುವುದಿಲ್ಲ ಹಾಗೂ ಅವರನ್ನು ಯಾರು ಗಮನಿಸುವುದೇ ಇಲ್ಲ. ಯಾವುದನ್ನೂ ಬಾಯಿಬಿಟ್ಟು ಹೇಳಿಕೊಳ್ಳುವುದೇ ಇಲ್ಲ ಎಂದು ಹೇಳಿದ್ದಾರೆ.

ಈ ಪುರುಷರು ದೂರದ ವ್ಯಕ್ತಿಗಳಲ್ಲ, ಅವರು ನಮ್ಮ ತಂದೆ,ಚಿಕ್ಕಪ್ಪ, ಸಹೋದರರು, ಗಂಡ, ಮಗ ಅಥವಾ ಸ್ನೇಹಿತರು ಇರಬಹುದು. ನಿಮ್ಮ ಬಾಸ್, ಅಧಿಕಾರಿಗಳು ಹಾಗೂ ಚಹಾ ತರುವವರು ಆಗಿರಬಹುದು. ನಾವು ದಿನವಿಡೀ ಪುರುಷರ ಆರೋಗ್ಯದ ಬಗ್ಗೆ ಮಾತನಾಡಬಹುದು. ಆದರೆ ಅವರು ಶಾಂತವಾಗಿರುವವವರ ಬಗ್ಗೆ ಗಮನ ಹರಿಸದಿದ್ದರೆ ಯಾವುದೇ ವ್ಯತ್ಯಾಸ ನಮಗೆ ತಿಳಿಯುವುದೇ ಇಲ್ಲ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:Video: ಸಂಬಳಕ್ಕಿಂತ ಆರೋಗ್ಯವೇ ಮುಖ್ಯ; ತಿಂಗಳಿಗೆ 60 ಸಾವಿರ ರೂ ಸಂಬಳದ ಉದ್ಯೋಗ ತೊರೆದ ಯುವತಿ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರರು ನಮ್ಮಲ್ಲಿ ಎಷ್ಟೋ ಗಂಡಸರು ಕುಟುಂಬಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರ ಮನಸ್ಸಿನ ಮಾತನ್ನು ಆಲಿಸುವಲ್ಲಿ ಸೋಲುತ್ತಿದ್ದೇವೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಪುರುಷರ ಮೌನದ ಹಿಂದಿನ ಮಾತನ್ನು ಅರ್ಥ ಮಾಡಿಕೊಳ್ಳಬೇಕು, ಆಗ ಮಾತ್ರ ಅವರ ಕಷ್ಟಕ್ಕೆ ಹೆಗಲು ಆಗಲು ಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ಪುರುಷರು ಯಾವುದೇ ವಿಷ್ಯಗಳನ್ನು ಹಂಚಿಕೊಳ್ಳಲು ಒಳ್ಳೆಯ ವ್ಯಕ್ತಿ ಬೇಕು. ಅವನ ಸುತ್ತಲಿನ ಜನರು ಅದನ್ನು ಒಟ್ಟಾಗಿ ನಿರ್ಮಿಸಬೇಕು. ಪ್ರತಿಯೊಬ್ಬರೂ ಭಾವನಾತ್ಮಕ ಲಭ್ಯತೆಯನ್ನು ಬಯಸುತ್ತಾರೆ, ಆದರೆ ಕೆಲವರು ಮಾತ್ರ ಅದರೊಂದಿಗೆ ಬರುವ ಅವ್ಯವಸ್ಥೆಗೆ ಸಿದ್ಧರಿರುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ