Viral: ಎಕ್ಸ್‌ನಲ್ಲಿ ಒಂದೇ ಒಂದು ಪೋಸ್ಟ್, ತಿಂಗಳಿಗೆ 30 ಸಾವಿರ ರೂ ಸಂಪಾದನೆ; ಈ ಯುವಕನ ಯಶಸ್ಸಿನ ಗುಟ್ಟು ಇದು
ಬುದ್ಧಿ ಉಪಯೋಗಿಸಿದ್ರೆ ಮಾತ್ರ ಲಕ್ಷ ಲಕ್ಷ ಸಂಪಾದನೆ ಮಾಡಬಹುದು ಎನ್ನುವುದಕ್ಕೆ ಈ ಯುವಕನೇ ನೈಜ ಉದಾಹರಣೆ. ಓದಿದರೆ ಸಾಲದು, ಕೆಲವು ವಿಚಾರಗಳಲ್ಲಿ ನೀವು ನಿಮ್ಮ ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಹೌದು, ಈ ಯುವಕನು ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ತಿಂಗಳಿಗೆ ಮೂವತ್ತು ಸಾವಿರ ರೂ ಸಂಪಾದಿಸುತ್ತಾನಂತೆ. ಸದ್ಯಕ್ಕೆ ಈ ಯುವಕನ ಪೋಸ್ಟ್ ನೆಟ್ಟಿಗರನ್ನು ಶಾಕ್ ಆಗುವಂತೆ ಮಾಡಿದೆ. ಬಳಕೆದಾರರು ಅದೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.

ಕೈಯಲ್ಲಿ ಒಂದು ಉದ್ಯೋಗ, ತಿಂಗಳ ಕೊನೆಯಲ್ಲಿ ಸಂಬಳ ಇಷ್ಟು ಇದ್ದರೆ ಹೇಗೂ ಬದುಕಬೇಕು ಎಂದುಕೊಳ್ತಾರೆ. ಹೀಗಾಗಿ ಒಳ್ಳೆಯ ಉದ್ಯೋಗ (Job) ಗಿಟ್ಟಿಸಿಕೊಳ್ಳಲು ಒದ್ದಾಡ್ತಾರೆ. ಜೀವನದಲ್ಲಿ ಯಶಸ್ಸು ಗಳಿಸಲು, ಕೈ ತುಂಬಾ ಸಂಪಾದನೆ ಮಾಡಲು ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಇಂಜಿನಿಯರ್ (Engineer) ಆಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಯುವಕನೊಬ್ಬ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ತಿಂಗಳಿಗೆ 30 ಸಾವಿರಕ್ಕೂ ಅಧಿಕ ಸಂಪಾದನೆ ಮಾಡ್ತಾನೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಕ್ಯಾಂಪಸ್ ನಿಯೋಜನೆ ವೇತನಕ್ಕಿಂತ ಹೆಚ್ಚು ತಮ್ಮ ವೇತನ ಇದೆ ಎಂದು ಬಹಿರಂಗ ಪಡಿಸಿದ್ದಾನೆ. ಈ ಪೋಸ್ಟ್‌ಗೆ ಬಳಕೆದಾರರಿಂದ ನಾನಾ ರೀತಿಯ ಕಾಮೆಂಟ್‌ಗಳು ಬಂದಿವೆ.
@kanavtwt ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಪೋಸ್ಟ್ ನಲ್ಲಿ ಇಂಜಿನಿಯರ್ ಆಗಿರುವ 21 ವರ್ಷದ ಯುವಕನು ತಮ್ಮ ವೇತನದ ಬಗ್ಗೆ ಉಲ್ಲೇಖಿಸಿದ್ದಾನೆ. ನನಗೆ ಸರಾಸರಿ ಶ್ರೇಣಿ 3 ಕ್ಯಾಂಪಸ್ ಸೆಲೆಕ್ಷನ್ ಗಿಂತ ಹೆಚ್ಚಿನದ್ದನ್ನು ಹೆಚ್ಚು ಪಾವತಿಸಲಾಗುತ್ತಿದೆ. ನಾನು ಇದನ್ನೂ ಎರಡು ತಿಂಗಳ ಹಿಂದೆಯೇ ಪ್ರಾರಂಭಿಸಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾನೆ. ಪೋಸ್ಟ್ ನಲ್ಲಿ ಜಾಹೀರಾತು ಆದಾಯ ಕಾರ್ಯಕ್ರಮ ಹಾಗೂ ಕ್ರಿಯೇಟರ್ ರಿವೆನ್ಯೂ ಶೇರಿಂಗ್ ಆದಾಯ ಗಳಿಸುತ್ತಿದ್ದು, ತಂತ್ರಜ್ಞಾನ ಸಂಬಂಧಿತ ವಿಷಯಗಳನ್ನು ಪೋಸ್ಟ್ ಮಾಡಿರುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
posting on x is already paying me more than average tier 3 campus placement and I literally only started 2 months ago pic.twitter.com/KRl9HdSYm4
— kanav (@kanavtwt) September 15, 2025
ಇದನ್ನೂ ಓದಿ:Viral: ಒಂಟಿತನ ಹೋಗಲಾಡಿಸಲು ಹೊಸ ಮಾರ್ಗ ಕಂಡುಕೊಂಡ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್
ಸೆಪ್ಟೆಂಬರ್ 15 ರಂದು ಶೇರ್ ಮಾಡಲಾದ ಈ ಪೋಸ್ಟ್ ಇದುವರೆಗೆ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಈ ರೀತಿ ಸಂಪಾದನೆ ಮಾಡಬಹುದೇ ಎಂದಿದ್ದಾರೆ. ಇನ್ನೊಬ್ಬರು, ನಾನು ಈ ಕೆಲಸದಲ್ಲಿ ಆಸಕ್ತಿ ಹೊಂದಿದ್ದೇನೆ. ನನಗೆ ಸಲಹೆ ನೀಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಒಳ್ಳೆಯ ಪ್ರಯತ್ನ, ಹೀಗೆಯೇ ಮುಂದುವರೆಯಿರಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








