Video: ಸಂಬಳಕ್ಕಿಂತ ಆರೋಗ್ಯವೇ ಮುಖ್ಯ; ತಿಂಗಳಿಗೆ 60 ಸಾವಿರ ರೂ ಸಂಬಳದ ಉದ್ಯೋಗ ತೊರೆದ ಯುವತಿ
ಈಗಿನ ಕಾಲದಲ್ಲಿ ದುಡ್ಡಿದ್ರೆ ಮಾತ್ರ ದುನಿಯಾ. ಹೀಗಾಗಿ ಕೆಲವರು ರಾತ್ರಿ ಹಗಲು ನಿದ್ದೆ ಬಿಟ್ಟು ಕೆಲ್ಸ ಮಾಡ್ತಾರೆ. ಆದರೆ ಇಲ್ಲೊಬ್ಬಳು ಯುವತಿಗೆ ಹಣಕ್ಕಿಂತ ಆರೋಗ್ಯವೇ ಮುಖ್ಯವಂತೆ. ಹೀಗಾಗಿ ಉತ್ತಮ ಸಂಬಳವಿರುವ ಕೆಲಸವನ್ನು ತ್ಯಜಿಸಿದ್ದಾಳೆ. ಯುವತಿಯೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾಳೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಈಗಿನ ಕಾಲದಲ್ಲಿ ಕೆಲಸ (Job) ಗಿಟ್ಟಿಸಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸ. ಹೀಗಾಗಿ ಒಳ್ಳೆಯ ಕೆಲಸ ಸಿಕ್ಕರೆ ಎಷ್ಟೇ ಕಷ್ಟವಾದರೂ ಸರಿಯೇ, ಹೊಂದಿಕೊಂಡು ಕೆಲಸ ಮಾಡ್ತಾರೆ. ಆದರೆ ಕೆಲಸದ ಒತ್ತಡದಿಂದಲೇ ಕೆಲವೊಮ್ಮೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವುದಿದೆ. ಹೀಗಾದಾಗ ಈ ಕೆಲಸ ಬೇಡವೇ ಬೇಡ ಎನ್ನುವ ನಿರ್ಧಾರ ಮಾಡ್ತಾರೆ. ಆದರೆ ಯುವತಿಯೊಬ್ಬಳು ಈ ರೀತಿಯೇ ಮಾಡಿದ್ದಾಳೆ. ಕೆಲಸಕ್ಕಿಂತ ಆರೋಗ್ಯವೇ ಮುಖ್ಯ ಎನ್ನುವ ನಿರ್ಧಾರ ಮಾಡಿದ್ದು ಉದ್ಯೋಗ ತೊರೆದಿದ್ದಾಳೆ. ಕೆಲಸದ ಒತ್ತಡವು ಹೇಗೆ ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಉಪಾಸನ (Upasana) ಹೇಳಿಕೊಂಡಿದ್ದಾಳೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉಪಾಸನ (Upasana) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಫ್ರೆಂಚ್ ಅಸೋಸಿಯೇಟ್ ಕೆಲಸ ಮಾಡುವ ಉಪಾಸನಳ ತಿಂಗಳ ಸಂಬಳ 60,000 ರೂ. ನೈಟ್ ಶಿಫ್ಟ್ ಕೆಲಸವಿದ್ದ ಕಾರಣ ತಲೆನೋವು, ಕಡಿಮೆ ರಕ್ತದೊತ್ತಡ ಮತ್ತು ಆತಂಕ ಸೇರಿದಂತೆ ಇನ್ನಿತ್ತರ ಆರೋಗ್ಯ ಸಮಸ್ಯೆಗಳು ಎದುರಾದವು. ಈ ವಿಡಿಯೋದಲ್ಲಿ ಕೆಲಸ ಒತ್ತಡವು ಎಷ್ಟೆಲ್ಲಾ ಸವಾಲುಗಳು ಎದುರಾದವು ಎನ್ನುವ ಬಗ್ಗೆ ವಿವರಿಸಿರುವುದನ್ನು ನೀವಿಲ್ಲಿ ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
22ನೇ ವಯಸ್ಸಿನಲ್ಲಿ ನಾನು ಆರ್ಥಿಕವಾಗಿ ಸುರಕ್ಷಿತವಾದೆ. ಆದರೆ ನನ್ನ ಜೀವನದಲ್ಲಿ ಹಣ ಅಥವಾ ಆರೋಗ್ಯ ಈ ಎರಡು ವಿಷ್ಯದಲ್ಲಿ ನನಗೆ ನನ್ನ ಆಯ್ಕೆಯ ಬಗ್ಗೆ ಸ್ಪಷ್ಟತೆ ಇತ್ತು. ಹಣವು ಶಾಶ್ವತವಲ್ಲ, ಆರೋಗ್ಯ ಹಾಳು ಮಾಡಿಕೊಂಡು ಕೆಲಸ ಮಾಡಿದ್ರೆ, ನಮ್ಮ ದೇಹದ ಶಕ್ತಿಯೇ ಕುಂದುವುದು. ಹೀಗಾದಾಗ ಏನು ಮಾಡುವುದು? ಹಣ ಆರೋಗ್ಯ ಈ ಎರಡರಲ್ಲಿ ಆರೋಗ್ಯವೇ ಮುಖ್ಯ ಎಂದು ಹೇಳಿದ್ದಾಳೆ. ಹೀಗಾಗಿ ತಾನು ಉತ್ತಮ ಸಂಬಳದ ಕೆಲಸವನ್ನು ತೊರೆದಿದ್ದೇನೆ. ಹೊಸ ಜೀವನಕ್ಕೆ ತಯಾರಾಗಿದ್ದೇನೆ. ಜೀವನದಲ್ಲಿ ಮುಂದೆ ಆಗುವುದು ತಿಳಿಯದಿದ್ದರೂ, ಸಾಧಿಸುವ ಛಲವು ಹಾಗೆಯೇ ಇದೆ ಎಂದು ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ:Viral: ಎಕ್ಸ್‌ನಲ್ಲಿ ಒಂದೇ ಒಂದು ಪೋಸ್ಟ್, ತಿಂಗಳಿಗೆ 30 ಸಾವಿರ ರೂ ಸಂಪಾದನೆ; ಈ ಯುವಕನ ಯಶಸ್ಸಿನ ಗುಟ್ಟು ಇದು
ಈ ವಿಡಿಯೋ ಹನ್ನೆರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನಾನು ನಿಮ್ಮದೇ ಪರಿಸ್ಥಿತಿಯನ್ನು ಎದುರಿಸುತ್ತಿರುವೆ. ನಿಮ್ಮ ಮಾತುಗಳು ನನಗೆ ಸ್ಫೂರ್ತಿ ನೀಡಿದವು ಎಂದಿದ್ದಾರೆ. ಇನ್ನೊಬ್ಬರು, ನಾನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತೇನೆ, ನನಗೆ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಹೆಚ್ಚು ಚಿಂತಿಸಬೇಡಿ, ನೀವು ನಿಮ್ಮ ಜೀವನದಲ್ಲಿ ಇದಕ್ಕಿಂತ ಒಳ್ಳೆಯದ್ದನ್ನು ಪಡೆಯುತ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:38 pm, Sat, 27 September 25








