AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಸರ್​​​ ನನಗೆ ಪೈಲ್ಸ್​​​ ಆಗಿದೆ, ರಜೆ ಬೇಕು ಅಂದ್ರೆ ಬ್ಯಾಂಕ್​​ ಮ್ಯಾನೇಜರ್​ ಹೇಳಿದ್ದೇನು ಗೊತ್ತಾ?

ಬ್ಯಾಂಕ್ ಉದ್ಯೋಗಿಯೊಬ್ಬರು ಪೈಲ್ಸ್‌ನಿಂದ ಬಳಲುತ್ತಿದ್ದು, ರಜೆ ಕೇಳೀದ್ರೆ ಅವರ ಮ್ಯಾನೇಜರ್ ಮನುಷ್ಯತ್ವ ಕಳೆದುಕೊಂಡು ಮಾತನಾಡಿದ್ದಾರೆ. ಸಂಬಳ ಕಟ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಉದ್ಯೋಗಿಗಳ ಆರೋಗ್ಯಕ್ಕಿಂತ ಕೆಲಸವೇ ಮುಖ್ಯ ಎಂದು ಭಾವಿಸುವ ಕಾರ್ಪೊರೇಟ್ ಮನಸ್ಥಿತಿ ಹಾಗೂ ಮ್ಯಾನೇಜರ್‌ನ ಅಮಾನವೀಯ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Viral: ಸರ್​​​ ನನಗೆ ಪೈಲ್ಸ್​​​ ಆಗಿದೆ, ರಜೆ ಬೇಕು ಅಂದ್ರೆ ಬ್ಯಾಂಕ್​​ ಮ್ಯಾನೇಜರ್​ ಹೇಳಿದ್ದೇನು ಗೊತ್ತಾ?
ವೈರಲ್​ ಪೋಸ್ಟ್
ಅಕ್ಷಯ್​ ಪಲ್ಲಮಜಲು​​
|

Updated on: Oct 16, 2025 | 4:15 PM

Share

ಜೀವನದಲ್ಲಿ ಕೆಲಸ ಎಷ್ಟು ಮುಖ್ಯನೋ, ಆರೋಗ್ಯ (Health) ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಆರೋಗ್ಯ ಇದ್ರೆ ದುಡಿಮೆ ಎಂಬ ಮಾತು ಸತ್ಯ. ಆದರೆ ಈ ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಜೀತದಾಳುಗಳಂತೆ ಇರಬೇಕು ಎಂಬುದು ಹಲವು ಉದ್ಯೋಗಿಗಳ ಮಾತು. ಅದರಲ್ಲೂ ಇಲ್ಲಿ ರಜೆ ಕೇಳಿದ್ರೆ ಮುಗಿಯಿತು, ಬಾಸ್​​​ಗಳ ಮನೆಯ ಆಸ್ತಿ ಕೇಳಿದಂತೆ ಮಾಡ್ತಾರೆ. ಕೆಲಸ ಮಾಡಿ, ರಜೆ ಮಾತ್ರ ಕೇಳಬೇಡಿ. ಇದು ಕಂಪನಿಗಳ ನಿಯಮ. ಇದೀಗ ಇಲ್ಲೊಂದು ಉದ್ಯೋಗಿಯ ಪರಿಸ್ಥಿತಿ ಕೂಡ ಅದೇ, ಅನಾರೋಗ್ಯವಾಗಿದೆ ಎಂದು ರಜೆ ಕೇಳಿದ್ರೆ, ಈ ಬಾಸ್​​ ಹೀಗೆ ಹೇಳೋದ, ಈ ಕಥೆ ಕೇಳಿದ್ರೆ ನೀವು ಕೂಡ ಅಯ್ಯೋ ಇವರು ಯಾವ ಸೀಮೆ ಬಾಸ್​​​​​ ಎಂದು ಹೇಳ್ತೀರಾ, ಬ್ಯಾಂಕ್​​ ಉದ್ಯೋಗಿಯೊಬ್ಬರಿಗೆ ಪೈಲ್ಸ್ ಆಗಿದೆ. ಇದಕ್ಕೆ ಮ್ಯಾನೇಜರ್‌ ಬಳಿ ರಜೆ ಕೇಳಿದ್ರೆ, ಮ್ಯಾನೇಜರ್‌ ಉತ್ತರ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ.

ಸಾರ್​​​ ನನಗೆ ಪೈಲ್ಸ್​​​ ಆಗಿದೆ. ಕೂರೋಕೂ ಆಗ್ತಿಲ್ಲ, ನಿಲ್ಲೋಕೂ ಆಗ್ತಿಲ್ಲ, ಇದು ಗಂಭೀರ ಸಮಸ್ಯೆ ಸರ್​​ ದಯವಿಟ್ಟು ನನಗೆ ಇವತ್ತು ಮೆಡಿಕಲ್ ಲೀವ್ ಕೊಡಿ ಎಂದು ವಾಟ್ಸಪ್​​​ನಲ್ಲಿ ಮೆಸೇಜ್​ ಹಾಕಿದ್ದಾರೆ. ಇದರ ಜತೆಗೆ ಮ್ಯಾನೇಜರ್​​​ಗೆ ನಂಬಿಕೆ ಬರಲಿ ಎಂದು ಡಾಕ್ಟರ್ ಕೊಟ್ಟ ಪ್ರಿಸ್ಕ್ರಿಪ್ಷನ್ ಫೋಟೋ ಕೂಡ ಕಳಿಸಿದ್ದಾರೆ. ಆದರೆ ಮ್ಯಾನೇಜರ್‌  ಮಾಡಿ ಉಪದೇಶ ನೋಡಿದ್ರೆ, ರಜೆ ಬೇಡ ಆಫೀಸ್​​​ ಹೋಗಿ ಕೆಲಸ ಮಾಡುವ ಎಂದೆನ್ನಿಸುವುದು ಖಂಡಿತ, ಅಷ್ಟು ಕೆಟ್ಟಾಗಿತ್ತು ಅವರ ಮಾತುಗಳು. ಉದ್ಯೋಗಿಯ ಸಂದೇಶ ನೋಡಿ ಮ್ಯಾನೇಜರ್‌ ಪ್ರತಿಕ್ರಿಯೆ ಹೀಗಿತ್ತು, “ನಿಂಗೆ ಶಿಸ್ತು ಕಲಿಸಿದ್ದು ಯಾರು? ರಜೆ ಕೇಳ್ತಿರೋ ಟೈಮ್ ನೋಡು. ಎರಡು ದಿನದ ಸಂಬಳ ಕಟ್” ಎಂದು ಬೆದರಿಕೆ ಹಾಕಿದ್ರು, ಅಲ್ಲ ಆರೋಗ್ಯ ಸಮಸ್ಯೆ ಹೇಳಿ-ಕೇಳಿ ಬರುತ್ತಾ? ಅನಾರೋಗ್ಯಕ್ಕೂ, ಸಂಬಳಕ್ಕೂ ಏನು ಸಂಬಂಧ? ಅದರೂ ಎಲ್ಲವನ್ನು ಸಹಿಸಿಕೊಂಡ ಇರಬೇಕು ಅಷ್ಟೇ. ಯಾಕೆಂದರೆ ಕೆಲಸ ಅನಿವಾರ್ಯ.

ಇಲ್ಲಿದೆ ನೋಡಿ ಪೋಸ್ಟ್:

What should I do with this kind of Manager byu/nanukannadiga inIndianWorkplace

ಅದ್ರೂ ಮ್ಯಾನೇಜರ್‌ ಬಳಿ ಬೇಡಿಕೊಂಡೆ, “ಸರ್​​​ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ, ಆರೋಗ್ಯದಲ್ಲಿ ಸಮಸ್ಯೆಯಾಗಿರುದಕ್ಕೆ ನಾನು ರಜೆ ಕೇಳ್ತಿರೋದು, ಮೊದಲ್ಲೇ ತಿಳಿಸಲು ಆಗಿಲ್ಲ ಕ್ಷಮಿಸಿ” ಎಂದು ಹೇಳಿದೆ. ಪ್ರಪಂಚದಲ್ಲಿ ನಾನೊಬ್ಬನೇ ಆಗಿರಬೇಕು, ಸೌಖ್ಯ ಇಲ್ಲ ಅಂದ್ರೂ ಕ್ಷಮೆ ಕೇಳಿರುವುದು. ಆದ್ರೆ ಮ್ಯಾನೇಜರ್‌ ಎಷ್ಟು ಕ್ರೂರಿಯಾಗಿದ್ದ ಅಂದ್ರೆ, “ಹಾಗಾದ್ರೆ ನಿನ್ನ ಬ್ಯುಸಿನೆಸ್ ಯಾರು ಮಾಡ್ತಾರೆ? ನಿನ್ನ ನಂಬಿಕೆಕೊಂಡು ಸಾವಿರಾರೂ ಕಮಿಟ್‌ಮೆಂಟ್‌ ಇದೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ” ಎಂದು ಮನುಷ್ಯತ್ವ ಬಿಟ್ಟು ಮಾತನಾಡಿದ್ರು , ಅಲ್ಲ ಒಂದು ದಿನ ರಜೆ ತೆಗೆದುಕೊಂಡ್ರೆ ಏನ್ ಬ್ಯಾಂಕ್​ ಮುಚ್ಚುತ್ತಾ? ಅಲ್ಲ ದೇಶ ಮುಳುಗುತ್ತಾ?, “ಸರ್​​ ನಾನು ಆಫೀಸ್​​​ಗೆ ಬಂದ ಮೇಲೆ ಎಲ್ಲ ಕೆಲಸವನ್ನು ಮುಗಿಸುವೆ, ಈಗ ಒಂದು ರಜೆ ತೆಗೆದುಕೊಳ್ಳವೇ ಎಂದು ತಾಳ್ಮೆಯಿಂದ ಉತ್ತರಿಸುತ್ತಾರೆ.

ಇದನ್ನೂ ಓದಿ: ಪುಟ್ಟ ಮಗಳ ಕೈಯಲ್ಲಿ ರೋಗಿಯ ತಲೆಬುರುಡೆಯಲ್ಲಿ ರಂಧ್ರ ಮಾಡಿಸಿದ ಸರ್ಜನ್!

ಈ ಪೋಸ್ಟ್​ ವೈರಲ್​ ಆಗುತ್ತಿದ್ದಂತೆ ಸೋಶಿಯಲ್​​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮೊದಲು ಈ ಮ್ಯಾನೇಜರ್‌ಗೆ ಒಂದು ಇಂಗ್ಲಿಷ್ ಕ್ಲಾಸ್, ಆಮೇಲೆ ಒಂದು ಮಾನವೀಯತೆ ಕ್ಲಾಸ್‌ಗೆ ಸೇರಿಸಿ ಎಂದು ಬಳಕೆದಾರರೊಬ್ಬರು ಕಮೆಂಟ್​​ ಮಾಡಿದ್ದಾರೆ. ಮೊದಲು ಆ ಮ್ಯಾನೇಜರ್​​​ಗೆ ಮಾನುಷ್ಯನಂತೆ ವರ್ತನೆ ಮಾಡಲು ಹೇಳಿ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ