25 ವರ್ಷ ಜೊತೆಗಿದ್ದ ಸಂಗಾತಿಯ ಸಾವು ಸಹಿಸಲಾಗದೆ ಪರದಾಡಿದ ಹೆಣ್ಣಾನೆ; ಭಾವುಕ ವಿಡಿಯೋ ಇಲ್ಲಿದೆ
ತನ್ನ ಜೊತೆಗಾರನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ, ಹೆಣ್ಣು ಆನೆಯೊಂದು ಆ ಆನೆಯನ್ನು ಎಬ್ಬಿಸಲು ವಿಫಲ ಪ್ರಯತ್ನ ಮಾಡುತ್ತಿದೆ. ಈ ವಿಡಿಯೋ ವೈರಲ್ ಆಗಿದೆ. ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ವೀಡಿಯೊಗಳು ವೈರಲ್ ಆಗುತ್ತವೆ. ಅವುಗಳಲ್ಲಿ, ಪ್ರಾಣಿಗಳ ವೀಡಿಯೊಗಳು, ವಿಶೇಷವಾಗಿ ಆನೆಗಳಿಗೆ ಸಂಬಂಧಿಸಿದ ಹೆಚ್ಚಾಗಿರುತ್ತವೆ. ಈಗಲೂ ಸಹ, ಆನೆಯ ವೀಡಿಯೊ ವೇಗವಾಗಿ ವೈರಲ್ ಆಗುತ್ತಿದೆ. ಆದರೆ ಈ ವೀಡಿಯೊ ತುಂಬಾ ಭಾವನಾತ್ಮಕವಾಗಿದೆ.
ನವದೆಹಲಿ, ಅಕ್ಟೋಬರ್ 16: ಪ್ರಕೃತಿಯು ಮನುಷ್ಯರಿಗೆ ಭಾವನೆ, ವಾತ್ಸಲ್ಯ, ಪ್ರೀತಿ ಮತ್ತು ಪ್ರೀತಿಪಾತ್ರರ ಮೇಲಿನ ಕಾಳಜಿಯಂತಹ ಹಲವು ಗುಣಗಳನ್ನು ನೀಡಿದೆ. ಮನುಷ್ಯರು ಅದನ್ನು ವ್ಯಕ್ತಪಡಿಸುತ್ತಾರೆ. ಆದರೆ, ಮನುಷ್ಯರ ಹಾಗೇ ಪ್ರಾಣಿಗಳಿಗೂ ಭಾವನೆಗಳಿರುತ್ತವೆ, ಸಂಬಂಧದ ಬಗ್ಗೆ ನಂಟಿರುತ್ತದೆ. ನಾವು ಅದನ್ನು ಅರ್ಥ ಮಾಡಿಕೊಂಡಾಗಲಷ್ಟೇ ನಮಗೆ ಅದರ ಅನುಭವವಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿರುವ ವೀಡಿಯೊದಲ್ಲಿ ಹೆಣ್ಣು ಆನೆಯೊಂದು ತನ್ನ ಜೊತೆಗಿದ್ದ ಆನೆಯ ಸಾವಿನಿಂದ ದುಃಖಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ತುಂಬಾ ಭಾವನಾತ್ಮಕವಾಗಿದೆ. ಹೆಣ್ಣು ಆನೆ ಸತ್ತ ಆನೆಯನ್ನು ಎಬ್ಬಿಸಲು ಹಲವು ಪ್ರಯತ್ನಗಳನ್ನು ಮಾಡಿತು. ಅದು ಆನೆಯನ್ನು ತನ್ನ ಸೊಂಡಿಲಿನಿಂದ ಅಲ್ಲಾಡಿಸಿ, ಅದರ ದೇಹವನ್ನು ತಳ್ಳಿ, ಅದನ್ನು ಎಬ್ಬಿಸಲು ವಿಫಲ ಪ್ರಯತ್ನ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. 25 ವರ್ಷಗಳಿಂದ ಜೊತೆಗಿದ್ದ ಆನೆ ಸತ್ತುಹೋಗಿರುವುದನ್ನು ತಾಳಲಾಗದೆ ಆ ಹೆಣ್ಣಾನೆ ಅಸಹಾಯಕವಾಗಿ ವರ್ತಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

