AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಟ್ಟ ಮಗಳ ಕೈಯಲ್ಲಿ ರೋಗಿಯ ತಲೆಬುರುಡೆಯಲ್ಲಿ ರಂಧ್ರ ಮಾಡಿಸಿದ ಸರ್ಜನ್!

ಆಸ್ಟ್ರಿಯಾದಲ್ಲಿ ವೈದ್ಯಕೀಯ ನೀತಿ ನಿಯಮಗಳನ್ನು ಉಲ್ಲಂಘಿಸಿ, ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ವೈದ್ಯರೊಬ್ಬರು ತಮ್ಮ 12 ವರ್ಷದ ಮಗಳಿಗೆ ರೋಗಿಯ ತಲೆಬುರುಡೆಯಲ್ಲಿ ರಂಧ್ರ ಮಾಡಲು ಅವಕಾಶ ನೀಡಿದ್ದಾರೆ. ಇದೀಗ ಈ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ವೈದ್ಯರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಪುಟ್ಟ ಮಗಳ ಕೈಯಲ್ಲಿ ರೋಗಿಯ ತಲೆಬುರುಡೆಯಲ್ಲಿ ರಂಧ್ರ ಮಾಡಿಸಿದ ಸರ್ಜನ್!
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Oct 16, 2025 | 1:58 PM

Share

“ವೈದ್ಯೋ ಹರಿ ನಾರಾಯಣ” ಈ ಮಾತಿಗೆ ಕೆಲವೊಂದು ವೈದ್ಯರು ವಿರುದ್ಧವಾಗಿ ಕೆಲಸ ಮಾಡುತ್ತಾರೆ. ವೈದ್ಯ ವೃತ್ತಿಗೆ ಬಹುದೊಡ್ಡ ಮಹತ್ವ ಇದೆ. ಆ ವೃತ್ತಿಯನ್ನು ನಿಭಾಯಿಸಲು ಆಟವಾಡುವ ಮಕ್ಕಳಿಗೆ ನೀಡಿದ್ರೆ ಹೇಗಿರಬಹುದು, ಹೌದು ಇಲ್ಲೊಂದು ಅಂತಹದೇ ಘಟನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಭಾರೀ ವೈರಲ್ ಆಗಿದೆ. ಹಾಗೂ ಈ ವಿಚಾರವಾಗಿ ಚರ್ಚೆಗಳು ಕೂಡ ನಡೆಯುತ್ತಿದೆ. ಮೆದುಳಿನ ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು ರೋಗಿಯೊಬ್ಬರ ತಲೆಬುರುಡೆಯಲ್ಲಿ ಚಿಕ್ಕ ರಂಧ್ರ (patient skull drilled) ಮಾಡಲು ತನ್ನ 12 ವರ್ಷದ ಮಗಳಿಗೆ ಅವಕಾಶ ನೀಡಿದ್ದಾರೆ. ಇದೀಗ ಈ ವೈದ್ಯರನ್ನು ಬಂಧಿಸಲಾಗಿದ್ದು, ವಿಚಾರಣೆ ಕೂಡ ನಡೆಸಲಾಗುತ್ತಿದೆ.

ಜನವರಿಯಲ್ಲಿ ಈ ಘಟನೆ ನಡೆದಿದೆ. ಆದರೆ ಪಕ್ರರಣ ತಡವಾಗಿ ಬೆಳಕಿಗೆ ಬಂದಿದೆ. ಆಸ್ಟ್ರಿಯಾದಲ್ಲಿ ಮೆದುಳಿನ ಶಸ್ತ್ರಚಿಕಿತ್ಸಕಿರೊಬ್ಬರು ತನ್ನ 12 ವರ್ಷದ ಮಗಳಿಗೆ ಆಪರೇಷನ್ ಥಿಯೇಟರ್‌ಗೆ ಪ್ರವೇಶಿಸಲು ಅವಕಾಶ ನೀಡಿದ್ದಾರೆ. ನಂತರ ರೋಗಿಯ ತಲೆಬುರುಡೆಯಲ್ಲಿ ರಂಧ್ರ ಮಾಡಲು ಅವಕಾಶ ನೀಡಿದ್ದಾರೆ ಎಂದು ಹೇಳಲಾಗಿದೆ. ಕುರಿಯರ್ ವರದಿಯ ಪ್ರಕಾರ, ಆಸ್ಟ್ರಿಯಾದ ಗ್ರಾಜ್‌ನಲ್ಲಿರುವ ಗ್ರಾಜ್ ಪ್ರಾದೇಶಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಈ ಘಟನೆ ನಡೆದಿದೆ .

ಇದನ್ನೂ ಓದಿ: ಫೋರ್ಕ್ ಸ್ಪೂನ್ , ಚಾಕುವಿನಿಂದ ಸಮೋಸಾ ತಿನ್ನುವುದು ಹೇಗೆಂದು ಕಲಿಸಿದ ತರಬೇತುದಾರ

33 ವರ್ಷದ ಕೃಷಿಕರೊಬ್ಬರು ಮೆದುಳಿನ ಶಸ್ತ್ರಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ದಾಖಲಾಗಿದ್ದರು, ಗಂಭೀರ ಅಪಘಾತದಿಂದ ಅವರ ಮೆದುಳಿಗೆ ಪೆಟ್ಟಾಗಿತ್ತು. ಇವರಿಗೆ ಇಬ್ಬರು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು, ಇದರಲ್ಲಿ ಒಬ್ಬರು ಇನ್ನೂ ತರಬೇತಿಯಲ್ಲಿರುವ ನರಶಸ್ತ್ರಚಿಕಿತ್ಸಕರಾಗಿದ್ದರು. ಈ ವೇಳೆ ಹಿರಿಯ ವೈದ್ಯರು ತಮ್ಮ 12 ವರ್ಷದ ಮಗಳನ್ನು ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದಾರೆ. ಶಸ್ತ್ರಚಿಕಿತ್ಸೆ ಬಹುತೇಕ ಪೂರ್ಣಗೊಂಡ ನಂತರ ಮಗಳಿಗೆ ರೋಗಿಯ ತಲೆಬುರುಡೆಯಲ್ಲಿ ಚಿಕ್ಕ ರಂಧ್ರ ಮಾಡಲು ಅವಕಾಶ ನೀಡಿದ್ದಾರೆ. ಆಪರೇಷನ್ ಥಿಯೇಟರ್​​ನಿಂದ ಹೊರ ಬಂದ ಮೇಲೆ ಆಸ್ಪತ್ರೆಗಳ ನರ್ಸ್​​ಗಳಲ್ಲಿ ನನ್ನ ಮಗಳು ಒಂದು ಆಪರೇಷನ್ ಮಾಡಿದ್ದಾಳೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದೀಗ ಈ ಹೆಮ್ಮೆ ಪಡುವ ಕೆಲಸವೇ ಆ ವೈದ್ಯರಿಗೆ ಜೈಲು ಸೇರುವ ಸ್ಥಿತಿಯನ್ನು ತಂದಿದೆ. ಇಲ್ಲಿ ವೈದ್ಯರ ಹೆಸರನ್ನು ಎಲ್ಲೂ ಉಲ್ಲೇಖ ಮಾಡಿಲ್ಲ. ಇನ್ನು ವೈದ್ಯರು ಈ ಆರೋಪವನ್ನು ನಿರಾಕರಿಸಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:57 pm, Thu, 16 October 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ