Viral: ಫೋರ್ಕ್ ಸ್ಪೂನ್ , ಚಾಕುವಿನಿಂದ ಸಮೋಸಾ ತಿನ್ನುವುದು ಹೇಗೆಂದು ಕಲಿಸಿದ ತರಬೇತುದಾರ
ನಾಗ್ಪುರದ ತರಬೇತುದಾರ ಅಮೋಲ್, ಸಮೋಸಾವನ್ನು ಫೋರ್ಕ್-ಚಾಕು ಬಳಸಿ ತಿನ್ನುವ ವಿಧಾನವನ್ನು ಕಲಿಸಿದ ವಿಡಿಯೋ ವೈರಲ್ ಆಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಬೀದಿ ಆಹಾರವನ್ನು ಪಾಶ್ಚಿಮಾತ್ಯಗೊಳಿಸುತ್ತಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ. ಈ ವಿಡಿಯೋಗೆ ಕಮೆಂಟ್ ಬಾಕ್ಸ್ನಲ್ಲಿ ಕೆಲವೊಂದು ಮಿಮ್ಸ್ಗಳನ್ನು ಹಂಚಿಕೊಳ್ಳಲಾಗಿದೆ. ಇಲ್ಲಿದೆ ನೋಡಿ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಿತ್ರ ವಿಡಿಯೋ ಹಾಗೂ ಪೋಸ್ಟ್ಗಳು ವೈರಲ್ ಆಗುತ್ತಾ ಇರುತ್ತದೆ. ಇದೀಗ ಅಂತಹದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾಗ್ಪುರ ಮೂಲದ ತರಬೇತುದಾರ ಅಮೋಲ್ ಅವರು ಫೋರ್ಕ್ ಸ್ಪೂನ್ ಮತ್ತು ಚಾಕು ಬಳಸಿ ಸಮೋಸಾ (Samosa) ತಿನ್ನುವುದು ಹೇಗೆ ಎಂಬುದನ್ನು ತನ್ನ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣ ಬಳಕೆದಾರರನ್ನು ರಂಜಿಸಿದೆ. ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಮೋಸಾ ತಿನ್ನಲು ಒಂದು ಶಿಷ್ಟಾಚಾರಬೇಕೇ, ಅದನ್ನು ಹೇಗೆ ತಿನ್ನಬೇಕು ಎನ್ನುವುದನ್ನು ಟ್ಯುಟೋರಿಯಲ್ನಲ್ಲಿ ತರಬೇತಿ ನೀಡುವುದು ವಿಚಿತ್ರ ಎಂದು ಅನೇಕ ಸೋಶಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋವನ್ನು ವೆಸ್ಟರ್ನ್ ವಿಂಗ್ಸ್ ಸ್ಪೋಕನ್ ಇಂಗ್ಲಿಷ್ ಮತ್ತು ಪರ್ಸನಾಲಿಟಿ ಡೆವಲಪ್‌ಮೆಂಟ್ ಅಕಾಡೆಮಿಯ ಸಂಸ್ಥಾಪಕ ಅಮೋಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಭಾರತೀಯ ಸ್ಟ್ರೀಟ್ ಫುಡ್ ಸಂಸ್ಕೃತಿಯನ್ನು ಪಾಶ್ಚಿಮಾತ್ಯೀಕರಣಗೊಳಿಸುತ್ತಿದ್ದಾರೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ತಿನ್ನುವ ಸಂತೋಷವನ್ನು ಕೊಲ್ಲುತ್ತಿದ್ದಾರೆ ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
A spoken English coach in Nagpur teaches students how to eat a samosa with a fork and knife 😳
He patiently explains the precise method of slicing a samosa with cutlery before taking a bite 😂😂pic.twitter.com/cN67b72dAu
— Times Algebra (@TimesAlgebraIND) October 16, 2025
ಈ ವಿಡಿಯೋದಲ್ಲಿ ಅಮೋಲ್ ವಿದ್ಯಾರ್ಥಿಗಳನ್ನು ರೆಸ್ಟೋರೆಂಟ್ಗೆ ಕರೆದುಕೊಂಡು ಹೋಗಿ, ಅಲ್ಲಿ ಬೇರೆ ಬೇರೆ ಆಹಾರಗಳ ಜತೆಗೆ ಸಮೋಸಾ ಆರ್ಡರ್ ಮಾಡಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಮುಂದೆ ನಿಂತು ತಾಳ್ಮೆಯಿಂದ ಕಟ್ಲರಿ ಮತ್ತು ಫೋರ್ಕ್ ಸ್ಪೂನ್ನಿಂದ ಸಮೋಸಾ ಕತ್ತರಿಸುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಪ್ರತಿಕ್ರಿಯೆ ನೀಡದೇ ಸಮೋಸಾ ಕತ್ತರಿಸುವ ವಿಧಾನವನ್ನು ನೋಡುತ್ತ ನಿಂತಿದ್ದಿದ್ದರು. ಈ ವಿಡಿಯೋವನ್ನು ನೋಡಿ ಸೋಶಿಯಲ್ ಮೀಡಿಯಾ ಬಳಕೆದಾರರು ಹೀಗೆ ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ ವಿದ್ಯಾರ್ಥಿಗಳೇ ನೀವು ಅಲ್ಲಿಂದ ಓಡಿ ಹೋಗಿ, ಅವರು ಹೇಳುತ್ತಿರುವ ವಿಧಾನ ಸುಳ್ಳು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಇವರು ಹೇಳಿಕೊಡುವ ವಿಧಾನದಲ್ಲಿ ಸಮೋಸಾ ತಿಂದರೆ ಚಟ್ನಿ ಮಯಾವಾಗುವುದು ಖಂಡಿತ ಎಂದು ಹಾಸ್ಯವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಈ ದೇಶದಲ್ಲಿ ಮಾತ್ರ ನಿರಂತರ ಹಾರ್ನ್‌ಗಳಿಲ್ಲದೆ ವಾಹನ ಸಂಚಾರ ನೋಡಲು ಸಾಧ್ಯ ಎಂದ ಭಾರತೀಯ
ಈ ವಿಡಿಯೋಗೆ ಕಮೆಂಟ್ ಬಾಕ್ಸ್ನಲ್ಲಿ ಕೆಲವೊಂದು ಮಿಮ್ಸ್ಗಳನ್ನು ಹಂಚಿಕೊಳ್ಳಲಾಗಿದೆ. ಬಿಸಿ ಸಮೋಸಾವನ್ನು ಕೈಯಿಂದ ಪುಡಿಮಾಡಿ ನೇರವಾಗಿ ಚಟ್ನಿಯಲ್ಲಿ ಅದ್ದಿ ತಿನ್ನುವ ದೇಸಿ ವಿಧಾನ ಬಗ್ಗೆಯೂ ಹೇಳುವ ವಿಮ್ಸ್ನ್ನು ಹಂಚಿಕೊಂಡಿದ್ದಾರೆ. ಇನ್ನು ದೇಸಿ ತಿಂಡಿಗಳ ಬಗ್ಗೆ ವಿಚಿತ್ರ ವಿಡಿಯೋಗಳು ವೈರಲ್ ಆಗಿರುವುದು ಇದೇ ಮೊದಲಲ್ಲ, ಈ ಹಿಂದೆ ದೆಹಲಿಯಲ್ಲಿ ಒಬ್ಬ ತರಬೇತುದಾರ ಫೋರ್ಕ್ ಮತ್ತು ಚಮಚವನ್ನು ಬಳಸಿ ಪಾನಿ ಪುರಿ ತಿನ್ನುವುದು ಹೇಗೆ ಎಂದು ಹೇಳಿಕೊಟ್ಟಿದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Thu, 16 October 25




