Video: ಈ ದೇಶದಲ್ಲಿ ಮಾತ್ರ ನಿರಂತರ ಹಾರ್ನ್‌ಗಳಿಲ್ಲದೆ ವಾಹನ ಸಂಚಾರ ನೋಡಲು ಸಾಧ್ಯ ಎಂದ ಭಾರತೀಯ
ಪೋಲೆಂಡ್‌ನಲ್ಲಿ ನಿಶ್ಯಬ್ದ ಹಾಗೂ ಹಾರ್ನ್ ರಹಿತ ರಸ್ತೆಗಳನ್ನು ತೋರಿಸುವ ಭಾರತೀಯ ವ್ಯಕ್ತಿಯೊಬ್ಬನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಭಾರತದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಹೋಲಿಸಿದ್ರೆ ಇಲ್ಲಿನ ವಾಹನ ಸಂಚಾರ ಹೇಗೆ ಭಿನ್ನವಾಗಿದೆ ಎಂದು ತೋರಿಸಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಭಾರತದ (India) ಬಹುತೇಕ ನಗರದ ರಸ್ತೆಗಳಲ್ಲಿ ಗಿಜಿಗುಟ್ಟುವ ವಾಹನಗಳು ಹಾಗೂ ಟ್ರಾಫಿಕ್ ಸಮಸ್ಯೆಯನ್ನು ನೀವು ನೋಡಿರುತ್ತೀರಿ. ಇನ್ನು ರಸ್ತೆಯಲ್ಲಿ ವಾಹನಗಳು ನಿಂತರೆ ಹಿಂಬದಿ ವಾಹನ ಸವಾರರು ಹಾರ್ನ್ ಹಾಕುತ್ತಾ ಕಿರಿಕಿರಿ ಮಾಡುತ್ತಾರೆ. ಭಾರತದಲ್ಲಿ ಇದು ಸರ್ವೇ ಸಾಮಾನ್ಯ. ಆದರೆ ಭಾರತೀಯ ವ್ಯಕ್ತಿಯೊಬ್ಬ ಪೋಲೆಂಡ್‌ನಲ್ಲಿ (Poland’s) ಹಾರ್ನ್ ರಹಿತ ವಾಹನ ಚಾಲನೆಯನ್ನು ತೋರಿಸಿದ್ದಾನೆ. ಈ ವಿಡಿಯೋದಲ್ಲಿ ಭಾರತಕ್ಕೆ ಹೋಲಿಸಿದ್ರೆ ಇಲ್ಲಿನ ವಾಹನ ಸಂಚಾರ ಹೇಗೆ ಭಿನ್ನವಾಗಿದೆ ಎಂದು ವಿವರಿಸಿದ್ದಾನೆ.
ಕುನಾಲ್ ದತ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಪೋಲೆಂಡ್‌ನಲ್ಲಿ ವಾಹನಗಳು ನಿರಂತರ ಹಾರ್ನ್‌ಗಳಿಲ್ಲದೆ ಸಂಚಾರದ ಮೂಲಕ ಹೇಗೆ ಸರಾಗವಾಗಿ ಚಲಿಸುತ್ತವೆ ಎಂಬುದನ್ನು ತಿಳಿಸಿದ್ದಾರೆ, ಇದು ಭಾರತದ ಹಾರ್ನ್‌ಗಳಿಂದ ತುಂಬಿರುವ ಬೀದಿಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಅತಿಯಾದ ಹಾರ್ನ್ ಮಾಡುವಿಕೆಯನ್ನು ಸಮರ್ಥಿಸುವ ಚಾಲಕರ ಮೇಲೆ ಹಗುರವಾಗಿ ಚಾಟಿ ಬೀಸಿದ್ದಾರೆ. ಸದ್ದಿಲ್ಲದೆ ಚಲಿಸುವ ಕಾರುಗಳಿಂದ ತುಂಬಿರುವ ಜನನಿಬಿಡ ರಸ್ತೆಯನ್ನು ತೋರಿಸಿದ್ದಾನೆ. ರಸ್ತೆಯಲ್ಲಿ ವಾಹನಗಳಿದ್ದರೂ ಸಹ ಶಬ್ದ ಮಾಲಿನ್ಯವಿಲ್ಲ ಎಂದು ಹೇಳಿದ್ದಾನೆ. ಪೋಲೆಂಡ್‌ನಲ್ಲಿ ಚಾಲಕರು ಏಕೆ ಹಾರ್ನ್ ಮಾಡುವುದನ್ನು ತಪ್ಪಿಸುತ್ತಾರೆ ಎಂದು ಹೇಳಿರುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರರು ಕೆಲವರು ಭಾರತದಲ್ಲಿ ಹಾರ್ನ್ ಮಾಡುವುದು ಅತ್ಯಗತ್ಯ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಹೇಳುತ್ತಿರುವುದು ಸಂಪೂರ್ಣವಾಗಿ ಸರಿ ಎಂದು ಒಪ್ಪಿಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರ ಭಾರತದಲ್ಲಿ ಹಾರ್ನ್ ಹಾಕದೇ ರಸ್ತೆಗಳಲ್ಲಿ ವಾಹನ ಸಂಚಾರಿಸುವುದನ್ನು ನೀವು ನೋಡಲು ಅಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Wed, 15 October 25








