
ಕೃತಕ ಬುದ್ಧಿಮತ್ತೆ (AI) ಜಗತ್ತಿಗೆ ಕಂಟಕ, ಅದು ಅದೆಷ್ಟೋ ಜನರ ಉದ್ಯೋಗವನ್ನು ಕಸಿದುಕೊಳ್ಳುತ್ತದೆ ಎಂಬ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ AIನಿಂದಲ್ಲೇ ಕೆಲಸ ಪಡೆದುಕೊಂಡಿರುವ ಬಗ್ಗೆಯೂ ಒಂದು ಸುದ್ದಿಯೊಂದು ವೈರಲ್ ಆಗಿದೆ. ಕೃತಕ ಬುದ್ಧಿಮತ್ತೆಯನ್ನು ಹೇಗೆ ಬಳಸಿಕೊಳ್ಳಬೇಕು ಹಾಗೂ ಅದು ಹೇಗೆ ನಮಗೆ ಸಹಾಯವಾಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಮಾಜಿ ಮೆಟಾ ಮತ್ತು ಟಿಕ್‌ಟಾಕ್ ಉತ್ಪನ್ನ ವ್ಯವಸ್ಥಾಪಕರಾದ (Product Manager) ಅಮರ್ ಸೌರಭ್ ಅವರು ಜಾಗತಿಕ ಕಂಪನಿಗಳೊಂದಿಗೆ ಸಂದರ್ಶನ ಪಡೆಯಲು ChatGPT ಅನ್ನು ಬಳಸಿದ್ದಾರೆ. ಇದರಿಂದ PayPalನಲ್ಲಿ ಪ್ರಮುಖ ಉತ್ಪನ್ನ ವ್ಯವಸ್ಥಾಪಕರಾಗಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಈ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬಿಸಿನೆಸ್ ಇನ್ಸೈಡರ್ ವರದಿಯ ಪ್ರಕಾರ, ಅಮರ್ ಸೌರಭ್ ತಮ್ಮ ಕೆಲಸದ ಹುಡುಕಾಟಕ್ಕೆ 2 ಗಂಟೆಗಳ ಕಾಲ ChatGPTಯನ್ನು ಬಳಸಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಮರ್ ಸೌರಭ್ ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಕಂಪ್ಯೂಟರ್ , ಮಾಹಿತಿ ವಿಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಮತ್ತು ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯ (ಯುಎಸ್ಎ) ದಿಂದ ಉನ್ನತ ಪದವಿ ಪಡೆದುಕೊಂಡಿದ್ದಾರೆ. ಇನ್ನು ಅವರು ಐದು ವರ್ಷಗಳ ಕಾಲ ಮೆಟಾ ಮತ್ತು ಟಿಕ್ಟಾಕ್ನಲ್ಲಿ ಉತ್ಪನ್ನ ವ್ಯವಸ್ಥಾಪಕರಾಗಿ ಕೆಲಸ ಮಾಡಿ, ಅಲ್ಲಿಂದ ಹೊರ ಬಂದ ನಂತರ, ಅವರು ಕೆಲಸದ ಹುಡುಕಾಟ ನಡೆಸಿದ್ದಾರೆ. ಏಪ್ರಿಲ್‌ನಲ್ಲಿ ಹೊಸ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸಿದ್ರೂ ಯಾವುದೇ ಕೆಲಸ ಸಿಕ್ಕಿಲ್ಲ, ಕೊನೆಗೆ ಕಸ್ಟಮ್ ಜಿಪಿಟಿ ಮೊರೆ ಹೋಗಿದ್ದಾರೆ.
ChatGPTಯನ್ನು ತನ್ನ ವೈಯಕ್ತಿ ವಿಚಾರಗಳಿಗೆ ಅಂದರೆ ಪಾಕವಿಧಾನದ ತರಬೇತಿಯಿಂದ ಹಿಡಿದು ಪ್ರಯಾಣದ ವಿವರಗಳು ಮತ್ತು ವ್ಯಾಯಾಮ ಯೋಜನೆ ಇದಕ್ಕೆ ಮಾತ್ರ ಬಳಸುತ್ತಿದ್ದೆ, ಆದರೆ ಇದು ನಮ್ಮ ವೃತ್ತಿ ಜೀವನದ ವಿಚಾರಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ನಾನು ಮೊದಲು ನನ್ನ ಕೆಲಸದ ಬಗ್ಗೆ ಅಲ್ಲಿ ಹೇಳಿದೆ, ನನಗೆ ಯಾವ ರೀತಿಯ ಕೆಲಸ ಬೇಕು ಎಂಬುದನ್ನು ಅಲ್ಲಿ ಉಲ್ಲೇಖಿಸಿದೆ. ಅದು ನನ್ನ ರೆಸ್ಯೂಮ್, ಲಿಂಕ್ಡ್‌ಇನ್ ಪ್ರೊಫೈಲ್, ಯೋಜನೆಗಳ ವಿವರಗಳನ್ನು ಹಾಕುವಂತೆ ಹೇಳಿತ್ತು. 90 ನಿಮಿಷಗಳಲ್ಲಿ ಅದು ನನಗೆ ಬೇಕಾದ ಎಲ್ಲ ವರದಿಯನ್ನು ನೀಡಿತ್ತು. ನಂತರ ಲಿಂಕ್ಡ್‌ಇನ್ ಸಂದೇಶಗಳನ್ನು ಬರೆಯಲು ಹಾಗೂ ಕೆಲಸಕ್ಕಾಗಿ ಯಾರನ್ನು ಸಂಪರ್ಕಿಸಬೇಕು ಎಂಬೆಲ್ಲ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿದೆ. ಜತೆಗೆ ಸಂದರ್ಶನದಲ್ಲಿ ಯಾವೆಲ್ಲ ಸಂಭವನೀಯ ಪ್ರಶ್ನೆಗಳನ್ನು ಕೇಳಬಹುದು, ಅದಕ್ಕೆ ಹೇಗೆಲ್ಲ ಉತ್ತರಿಸಿಬೇಕು ಎಂಬ ಬಗ್ಗೆಯೂ ವಿವರಿಸಿದೆ. ಎರಡು ತಿಂಗಳಲ್ಲಿ ನನಗೆ ಕೆಲಸದ ಆಫರ್ಗಳ ಸುರಿಮಳೆಯೇ ಬಂತು, ರೆಡ್ಡಿಟ್, ಇಂಟ್ಯೂಟ್ ಮತ್ತು ಪೇಪಾಲ್ ಸೇರಿದಂತೆ ಇತರ ಕಂಪನಿಗಳಿಂದ ಸಂದರ್ಶನ ಕರೆಗಳು ಬಂದವು ಎಂದು ಹೇಳಿದ್ದಾರೆ.
ಇದನ್ನೂ ಓದಿ: 3,500 ಅಧಿಕಾರಿ ಹುದ್ದೆ ಸೇರಿದಂತೆ ಒಟ್ಟು 18,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು SBI ಸಿದ್ಧತೆ
ಇದೀಗ ಅಮರ್ ಅವರು ಪೇಪಾಲ್‌ನಲ್ಲಿ ಕೆಲಸ ಪಡೆದುಕೊಂಡಿದ್ದಾರೆ. AI ಸಹಾಯಕ ಇನ್ನಷ್ಟು ಬೃಹತ್ ಆಗಿ ಎಲ್ಲರಿಗೂ ಪರಿಚಯಿಸಬೇಕು ಎಂದು ಹೇಳಿದ್ದಾರೆ. ಉದ್ಯೋಗಕ್ಕೆ ಹೇಗೆಲ್ಲ ಅರ್ಜಿ ಸಲ್ಲಿಸಬೇಕು. ಸಂದರ್ಶನಗಳ ಬಗ್ಗೆ ಹಾಗೂ ಸಂದರ್ಶನದಲ್ಲಿ ಕೇಳಬಹುದಾದ ಸಂಭವನೀಯ ಪ್ರಶ್ನೆಗಳನ್ನು ಹಾಗೂ ಹೇಗೆಲ್ಲ ಉತ್ತರಿಸಿಬೇಕು ಎಂಬ ಬಗ್ಗೆಯೂ ಮಾಹಿತಿ ನೀಡುತ್ತದೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ