ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಮಾರಾಟ ಮಾಡುವ ದೇಶವಿದೆ. ಅದು ಯಾವ ದೇಶ ಎಂದು ತಿಳಿದರೆ ನೀವು ಆಶ್ಚರ್ಯ ಪಡುವುದಂತೂ ಖಂಡಿತಾ. ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಸಿಗುವುದು ಏಷ್ಯಾದ ಭೂತಾನ್‌ನಲ್ಲಿ. ಒಬ್ಬ ವ್ಯಕ್ತಿಗೆ ಸೀಮಿತ ಪ್ರಮಾಣದಲ್ಲಿ ಚಿನ್ನ ತರುವ ಅವಕಾಶ ಇದೆ. ಆದರೆ ಭೂತಾನ್‌ನಲ್ಲಿ ಅಷ್ಟು ಕಡಿಮೆ ಬೆಲೆ ಚಿನ್ನ ಮಾರಾಟ ಮಾಡಲು ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಭೂತಾನ್‌ನಲ್ಲಿ ಕಡಿಮೆ ಬೆಲೆಗೆ ಚಿನ್ನವನ್ನು ಮಾರಾಟ ಮಾಡಲು ಹಲವು ಕಾರಣಗಳಿವೆ, ಆದರೆ ಭೂತಾನ್‌ನಲ್ಲಿ ಚಿನ್ನವು ತೆರಿಗೆ ಮುಕ್ತವಾಗಿರುವುದೇ ದೊಡ್ಡ ಕಾರಣ. ಇದಲ್ಲದೆ, ಭೂತಾನ್‌ನಲ್ಲಿ ಚಿನ್ನದ ಮೇಲೆ ಕಡಿಮೆ ಆಮದು ಸುಂಕವಿದೆ. ಭೂತಾನ್ ಮತ್ತು ಭಾರತದ ಕರೆನ್ಸಿಯ ಮೌಲ್ಯವು ಬಹುತೇಕ ಒಂದೇ ಆಗಿರುತ್ತದೆ. ಆದಾಗ್ಯೂ, ನೀವು ಭೂತಾನ್‌ನಿಂದ ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದರೆ ಅದಕ್ಕೆ ಕೆಲವು ಷರತ್ತುಗಳಿವೆ. ವಾಸ್ತವವಾಗಿ, ಚಿನ್ನವನ್ನು ಖರೀದಿಸಲು, ಪ್ರವಾಸಿಗರು ಭೂತಾನ್ ಸರ್ಕಾರವು ಪ್ರಮಾಣೀಕರಿಸಿದ ಹೋಟೆಲ್‌ನಲ್ಲಿ ಕನಿಷ್ಠ ಒಂದು ರಾತ್ರಿ ತಂಗಬೇಕು.
ಇದಲ್ಲದೇ ಪ್ರವಾಸಿಗರು ಚಿನ್ನ ಖರೀದಿಸಲು ಅಮೆರಿಕದ ಡಾಲರ್ ತರಬೇಕು. ಪ್ರವಾಸಿಗರು ಸುಸ್ಥಿರ ಅಭಿವೃದ್ಧಿ ಶುಲ್ಕವನ್ನು (ಎಸ್‌ಡಿಎಫ್) ಪಾವತಿಸಬೇಕು. ಭಾರತೀಯರಾದರೆ ಒಬ್ಬ ವ್ಯಕ್ತಿಗೆ ದಿನಕ್ಕೆ 1,200 ರೂನಿಂದ 1,800 ರೂ ಪಾವತಿಸಬೇಕು. ಇನ್ನು, ಚಿನ್ನ ಬೇಕೆನ್ನುವವರು ಭೂತಾನ್‌ನ ಥಿಂಫು ಮತ್ತು ಫ್ಯೂಂಟ್ಶೋಲಿಂಗ್ ಪಟ್ಟಣಗಳಿಗೆ ಹೋಗಬೇಕು. ಭೂತಾನ್‌ನಲ್ಲಿ 24 ಕ್ಯಾರೆಟ್ನ 10 ಗ್ರಾಮ್ ಚಿನ್ನವನ್ನು 43,000 ರುಪಾಯಿಗೆ ಖರೀದಿಸಬಹುದು.
ಇದನ್ನೂ ಓದಿ: 119 ಕೋಟಿ ಖರ್ಚು ಮಾಡಿ ಹೊಸ ‘ನಗರ’ ನಿರ್ಮಿಸಿದ ಯೂಟ್ಯೂಬರ್
ಸುಂಕ ರಹಿತ ಚಿನ್ನವನ್ನು ಭೂತಾನ್‌ನ ಸುಂಕ ರಹಿತ ಅಂಗಡಿಗಳಿಂದ ಖರೀದಿಸಬಹುದು. ಈ ಅಂಗಡಿಗಳು ಸಾಮಾನ್ಯವಾಗಿ ಐಷಾರಾಮಿ ವಸ್ತುಗಳನ್ನು ಮಾರಾಟ ಮಾಡುತ್ತವೆ ಮತ್ತು ಹಣಕಾಸು ಸಚಿವಾಲಯದ ಒಡೆತನದಲ್ಲಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ