20 ವರ್ಷಗಳ ಹಿಂದೆ ಮಾವೋವಾದಿಗಳ ಬೆದರಿಕೆಯಿಂದ ಮುಚ್ಚಿದ್ದ ರಾಮಮಂದಿರ, ಇದೀಗ ಮತ್ತೆ ರೀಓಪನ್

ಒಟ್ಟಿನಲ್ಲಿ ಎರಡು ದಶಕಗಳ ಹಿಂದೆ ಮಾವೋವಾದಿಗಳಿಂದ ಮುಚ್ಚಿದ್ದ ರಾಮಮಂದಿರ ಸಿಆರ್ ಪಿಎಫ್ ನೆರವಿನಿಂದ ಕೊನೆಗೂ ತೆರೆದುಕೊಂಡಿದೆ. 21 ವರ್ಷಗಳಿಂದ ಮುಚ್ಚಿದ್ದ ರಾಮಮಂದಿರವನ್ನು ತೆರೆಯಲು ಕ್ರಮಕೈಗೊಂಡ ಸಿಆರ್‌ಪಿಎಫ್ ಅಧಿಕಾರಿಗಳಿಗೆ ಕೇರಳಪೆಂಡ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

20 ವರ್ಷಗಳ  ಹಿಂದೆ ಮಾವೋವಾದಿಗಳ ಬೆದರಿಕೆಯಿಂದ ಮುಚ್ಚಿದ್ದ ರಾಮಮಂದಿರ, ಇದೀಗ ಮತ್ತೆ ರೀಓಪನ್
Chhattisgarh Sukma Ram Mandir Reopen

Updated on: Apr 10, 2024 | 10:43 AM

ಛತ್ತೀಸ್‌ಗಢ: ನೂರಾರು ವರ್ಷಗಳ ಧಾರ್ಮಿಕ, ರಾಜಕೀಯ, ಕಾನೂನು ಹೋರಾಟದ 500 ವರ್ಷಗಳ ನಂತರ ರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿರುವುದು ಈಗಾಗಲೇ ತಿಳಿದಿರುವ ವಿಷಯ. ಇದೀಗಾ ಕಳೆದ 21 ವರ್ಷಗಳಿಂದ ಮುಚ್ಚಿದ್ದ ಛತ್ತೀಸ್‌ಗಢದ ಸುಖ್ಮಾ ಜಿಲ್ಲೆಯ ರಾಮಮಂದಿರವನ್ನು ಮತ್ತೆ ತೆರೆದಿದ್ದು, ಗ್ರಾಮದ ಪ್ರತೀ ಮನೆಯಲ್ಲೂ ಸಂಭ್ರಮ ಮನೆಮಾಡಿದೆ.

1970 ರಲ್ಲಿ ಬಿಹಾರಿ ಮಹಾರಾಜರು ಸುಕ್ಮಾ ಜಿಲ್ಲೆಯ ಲಖಪಾಲ್ ಮತ್ತು ಕೇರಳಪೆಂಡಾ ಗ್ರಾಮಗಳ ಬಳಿ ರಾಮ ಮಂದಿರವನ್ನು ನಿರ್ಮಿಸಿದರು. ಆದರೆ, ಮಾವೋವಾದಿಗಳು 2003ರಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡದ ಕಾರಣ ತಮ್ಮ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದ್ದಂತೆ ದೇವಸ್ಥಾನವನ್ನು ಮುಚ್ಚಿದ್ದರು. ಆದರೆ ಕಳೆದ ವರ್ಷ ಮಾರ್ಚ್‌ನಲ್ಲಿ ಕೇರಳಪೆಂಡಾ ಬಳಿ ಸಿಆರ್‌ಪಿಎಫ್ 74 ನೇ ಬೆಟಾಲಿಯನ್‌ಗಾಗಿ ಲಖಾಪಾಲ್ ಶಿಬಿರವನ್ನು ಸ್ಥಾಪಿಸಿದ್ದರು. ಈ ಕ್ರಮದಲ್ಲಿ ಗ್ರಾಮದಲ್ಲಿರುವ ಪುರಾತನ ರಾಮ ಮಂದಿರದ ಬಗ್ಗೆ ಗ್ರಾಮಸ್ಥರು ಸಿಆರ್ ಪಿಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಸಿಆರ್‌ಪಿಎಫ್ ಯೋಧರು ದೇವಾಲಯವನ್ನು ಮತ್ತೆ ತೆರೆದು ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮಗನಿಗಾಗಿ ಉರುಳು ಸೇವೆ ಮೂಲಕ ಚಾಮುಂಡಿ ಬೆಟ್ಟ ಹತ್ತಿದ ವೃದ್ಧ ತಂದೆ

ಸಿಆರ್‌ಪಿಎಫ್ ಯೋಧರು ರಾಮ ಮಂದಿರದ ಹಾಕಿದ್ದ ಬೀಗ ತೆರೆದು ದೇವಸ್ಥಾನದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚಗೊಳಿಸಿ ಆ ಗ್ರಾಮದ ಜನರ ಸಹಕಾರದಿಂದ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ದೇವಸ್ಥಾನವನ್ನು ಗ್ರಾಮದ ಹಿರಿಯರಿಗೆ ಹಸ್ತಾಂತರಿಸಿದ್ದಾರೆ. ಇದಲ್ಲದೆ, ಮಾವೋವಾದಿ ಪ್ರಾಬಲ್ಯದ ಪ್ರದೇಶದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಸಿಆರ್‌ಪಿಎಫ್ ಯೋಧರು ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಕ್ರಮದಲ್ಲಿ ಸಿಆರ್‌ಪಿಎಫ್ ಯೋಧರು ದೇವಸ್ಥಾನದ ಬಳಿಯಿದ್ದ ಮಾವೋವಾದಿಗಳ ಸ್ತೂಪವನ್ನೂ ಧ್ವಂಸಗೊಳಿಸಿದ್ದಾರೆ.

ಒಟ್ಟಿನಲ್ಲಿ ಎರಡು ದಶಕಗಳ ಹಿಂದೆ ಮಾವೋವಾದಿಗಳಿಂದ ಮುಚ್ಚಿದ್ದ ರಾಮಮಂದಿರ ಸಿಆರ್ ಪಿಎಫ್ ನೆರವಿನಿಂದ ಕೊನೆಗೂ ತೆರೆದುಕೊಂಡಿದೆ. 21 ವರ್ಷಗಳಿಂದ ಮುಚ್ಚಿದ್ದ ರಾಮಮಂದಿರವನ್ನು ತೆರೆಯಲು ಕ್ರಮಕೈಗೊಂಡ ಸಿಆರ್‌ಪಿಎಫ್ ಅಧಿಕಾರಿಗಳಿಗೆ ಕೇರಳಪೆಂಡ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us