Viral: ಕತ್ರೀನಾರನ್ನೇ ಸೋಲಿಸಿದಿರಿ ಮೇಡಮ್​! ಸಲ್ಮಾನ್​ ಭಾಯ್​ ಈ ಕಡೆ ಸ್ವಲ್ಪ ನೋಡಿ ಎನ್ನುತ್ತಿರುವ ನೆಟ್ಟಿಗರು

| Updated By: Digi Tech Desk

Updated on: Jun 16, 2023 | 2:42 PM

Agneepath : ಈಕೆಯ ಚರ್ಮಕಾಂತಿ, ಮೈಕಟ್ಟು ಗಮನಿಸಿ. ಈಕೆ ಆಹಾರ ಮತ್ತು ವ್ಯಾಯಾಮದ ಬಗ್ಗೆ ಎಷ್ಟು ಕಟ್ಟುನಿಟ್ಟಾಗಿದ್ದಾಳೆ ಎಂಬುದು ಅರಿವಿಗೆ ಬರುತ್ತದೆ. ನಿಜಕ್ಕೂ ಈಕೆ ಶ್ರದ್ಧಾವಂತ ನಟಿ ಎಂದು ಕೆಲವರು ಶ್ಲಾಘಿಸಿದ್ದಾರೆ.

Viral: ಕತ್ರೀನಾರನ್ನೇ ಸೋಲಿಸಿದಿರಿ ಮೇಡಮ್​! ಸಲ್ಮಾನ್​ ಭಾಯ್​ ಈ ಕಡೆ ಸ್ವಲ್ಪ ನೋಡಿ ಎನ್ನುತ್ತಿರುವ ನೆಟ್ಟಿಗರು
ಅಗ್ನಿಪಥದ ಚಿಕ್ನಿ ಚಮೇಲಿ ರೀಲ್​ ನಲ್ಲಿ ಕನಿಷ್ಕಾ ಶರ್ಮಾ
Follow us on

Katrina Kaif : 2011ರಲ್ಲಿ ಬಿಡುಗಡೆಯಾದ ಅಗ್ನೀಪಥ (Agneepath) ಸಿನೆಮಾದ ಚಿಕ್ನಿ ಚಮೇಲಿ (Chikni Chameli) ಹಾಡಿಗೆ ಹೃತಿಕ್​ ರೋಷನ್​ ಮತ್ತು ಕತ್ರೀನಾ ಕೈಫ್ ಅಭಿನಯಿಸಿದ್ದಾರೆ. ಶ್ರೇಯಾ ಘೋಷಾಲ್ (Shreya Ghoshal) ಸುಶ್ರಾವ್ಯವಾಗಿ ಹಾಡಿದ್ದಾರೆ. ಇದೀಗ ವೈರಲ್ ಆಗುತ್ತಿರುವ ಇದೇ ಹಾಡಿನ ರೀಲ್​ಗೆ ನಟಿ ಕನಿಷ್ಕಾ ಶರ್ಮಾ ಅತ್ಯಾಕರ್ಷಕವಾಗಿ ಡ್ಯಾನ್ಸ್ ಮಾಡಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು, ಕತ್ರೀನಾಗಿಂತ ಮಸ್ತ್ ಡ್ಯಾನ್ಸ್​ ಇದು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈತನಕ ಈ ವಿಡಿಯೋ ಅನ್ನು ಮಿಲಿಯನ್​ ಜನರು ನೋಡಿದ್ದಾರೆ. 3.6 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದಾರೆ. ಎಷ್ಟು ಸಲ ನೋಡಿದೆನೋ ಈ ರೀಲ್​ ಅನ್ನು, ಲೆಕ್ಕವನ್ನೇ ಇಟ್ಟಿಲ್ಲ. ನಾನು 50ಕ್ಕೂ ಹೆಚ್ಚು ಬಾರಿ ನೋಡಿದ್ದೆನೆ. ಇದು ನನಗೆ ಪರಿಶುದ್ಧ ಪ್ರೀತಿಯ ತಂಗಾಳಿಯನ್ನು ಬೀಸುತ್ತಿದೆ. ಇದು ಸಕಾರಾತ್ಮಕವಾಗಿದೆ. ಈ ನರ್ತಕಿ ನಿಜಕ್ಕೂ ಅದ್ಭುತ ಮೋಡಿ ಮಾಡುತ್ತಿದ್ದಾರೆ. ಕನಿಷ್ಕಾ ನಿಮ್ಮ ಭವಿಷ್ಯ ಚೆನ್ನಾಗಿರಲಿ… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral: ವಿಶ್ವದ ಮೊಟ್ಟಮೊದಲ ನೀರು ಚಹಾ ಕಾಫಿ ಬಿಸ್ಕೆಟ್​ ಎಟಿಎಂ ಹೈದರಾಬಾದಿನಲ್ಲಿ ಆರಂಭ

ನೀವು ಕತ್ರೀನಾರನ್ನೂ ಸೋಲಿಸಿದಿರಿ ಮೇಡಮ್​. ಸಲ್ಮಾನ್​ ಭಾಯ್​ ಸ್ವಲ್ಪ ಈ ಕಡೆ ನೋಡಿ. ಈ ನಟಿ ನನ್ನ ಹೃದಯವನ್ನೇ ಕದ್ದೊಯ್ದಳು. ಈಕೆಯ ಚರ್ಮಕಾಂತಿ, ಮೈಕಟ್ಟು ಗಮನಿಸಿ. ಈಕೆ ಆಹಾರ ಮತ್ತು ವ್ಯಾಯಾಮದ ಬಗ್ಗೆ ಎಷ್ಟು ಕಟ್ಟುನಿಟ್ಟಾಗಿದ್ದಾಳೆ ಎಂಬುದು ಅರಿವಿಗೆ ಬರುತ್ತದೆ. ನಿಜಕ್ಕೂ ಈಕೆ ಶ್ರದ್ಧಾವಂತ ನಟಿ ಎಂದು ಕೆಲವರು ಶ್ಲಾಘಿಸಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 1:11 pm, Fri, 16 June 23