ಅಂಗಾಂಗ ದಾನ ಒಪ್ಪಂದದ ಬಳಿಕ ಮದ್ವೆ: ಈ ಜೋಡಿಯ ಪ್ರೀತಿಯಲ್ಲಿ ಕರಗಿ ಹೋಯ್ತು ಕ್ಯಾನ್ಸರ್​

ಚೀನಾದಲ್ಲಿ ನಡೆದ ವಿಸ್ಮಯಕಾರಿ ಮದುವೆಯ ಕಥೆ ಇದು. ಯುರೇಮಿಯಾದಿಂದ ಬಳಲುತ್ತಿದ್ದ ಯುವತಿಯೊಬ್ಬರು, ಕ್ಯಾನ್ಸರ್ ರೋಗಿಯನ್ನು ಮೂತ್ರಪಿಂಡ ದಾನ ಒಪ್ಪಂದದ ಮೆರೆಗೆ ಮದುವೆಯಾಗಿದ್ದಾರೆ. ಆರಂಭದಲ್ಲಿ ಒಪ್ಪಂದವಾಗಿದ್ದ ಈ ಮದುವೆ, ನಂತರದಲ್ಲಿ ನಿಜವಾದ ಪ್ರೀತಿಗೆ ತಿರುಗಿದೆ. ಈ ಅಸಾಮಾನ್ಯ ದಂಪತಿ ತಮ್ಮ ಕಾಯಿಲೆಗಳನ್ನು ಮೆಟ್ಟಿ ನಿಂತು, ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರೇಮಕಥೆ ವೈರಲ್ ಆಗಿದೆ.

ಅಂಗಾಂಗ ದಾನ ಒಪ್ಪಂದದ ಬಳಿಕ ಮದ್ವೆ: ಈ ಜೋಡಿಯ ಪ್ರೀತಿಯಲ್ಲಿ ಕರಗಿ ಹೋಯ್ತು ಕ್ಯಾನ್ಸರ್​
ಸಾಂದರ್ಭಿಕ ಚಿತ್ರ

Updated on: Oct 28, 2025 | 5:47 PM

ಚೀನಾದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ. ಹೊಸ ಹೊಸ ವಿಚಾರಗಳು ಹಾಗೂ ವಿಚಿತ್ರ ಸಂಗತಿಗಳಿಂದ ಸುದ್ದಿಯಾಗುತ್ತ ಇರುತ್ತದೆ. ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಚೀನಾದಲ್ಲಿ ನಡೆದ ವಿಚಿತ್ರ ಮದುವೆಯ ಬಗ್ಗೆ ವೈರಲ್​​ ಆಗಿದೆ. ಒಂದು ಒಪ್ಪಂದಕ್ಕಾಗಿ (China contract marriage) ಈ ಮದುವೆ ಮಾಡಿಕೊಂಡು ಕೊನೆಗೆ ಅದು ಇಬ್ಬರ ನಡುವೆ ಪ್ರೀತಿ ಹುಟ್ಟಲು ಕಾರಣವಾಗಿದೆ. ಅಷ್ಟಕ್ಕೂ ಆ ಒಪ್ಪಂದ ಏನು? ಇಲ್ಲಿದೆ ನೋಡಿ. ಚೀನಾದ ಯುವತಿಯೊಬ್ಬರು ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದಾರೆ. ಈ ವಿವಾಹ ಮಾಡಿಕೊಳ್ಳುವುದಕ್ಕೂ ಒಂದು ಒಪ್ಪಂದ ಮಾಡಿಕೊಂಡಿದ್ದಾರೆ. ಕ್ಯಾನ್ಸರ್​​​ನಿಂದ ಬಳಲುತ್ತಿರುವ ಈ ವ್ಯಕ್ತಿ ಮರಣ ಹೊಂದಿದ ನಂತರ ಅವರ ಮೂತ್ರಪಿಂಡವನ್ನು ಈ ಯುವತಿಗೆ ನೀಡಬೇಕು. ಏಕೆಂದರೆ ಈ ಯುವತಿ ಯುರೇಮಿಯಾದಿಂದ ಬಳಲುತ್ತಿದ್ದಾರೆ. ಆದರೆ ಇದೀಗ ಈ ಒಪ್ಪಂದದ ಮದುವೆ ನಿಜವಾದ ಪ್ರೀತಿಗೆ ತಿರುಗಿದೆ. ಈ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಮ್ಯಾರೇಜ್ ಅಂಡ್ ಫ್ಯಾಮಿಲಿ ಎಂಬ ನಿಯತಕಾಲಿಕೆ ಪ್ರಕಾರ, ಶಾಂಕ್ಸಿ ಪ್ರಾಂತ್ಯದ 24 ವರ್ಷದ ವಾಂಗ್ ಕ್ಸಿಯಾವೊ ಎಂಬ ಯುವತಿಗೆ ಯುರೇಮಿಯಾ ಇರುವುದು ಪತ್ತೆಯಾಯಿತು. ಇದನ್ನು ಸರಿಯಾಗಬೇಕಾದರೆ ಮೂತ್ರಪಿಂಡವನ್ನು ಕಸಿ ಮಾಡಬೇಕು. ಒಂದು ವೇಳೆ ಮಾಡದಿದ್ದರೆ ಅವರು ಒಂದು ವರ್ಷದೊಳಗೆ ಸಾವನ್ನಪ್ಪುತ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಈ ಯುವತಿಯ ಕುಟುಂಬದಲ್ಲಿ ಇವರಿಗೆ ಹೊಂದಾಣಿಕೆ ಆಗುವ ಮೂತ್ರಪಿಂಡ ಸಿಗಲಿಲ್ಲ, ಇದೇ ವೇಳೆ ಪೇಪರ್​​ನಲ್ಲಿ ಒಂದು ಜಾಹೀರಾತು ಬಂದಿತ್ತು, ನಾನು ಕ್ಯಾನ್ಸರ್​​ ವ್ಯಕ್ತಿ ನನ್ನನ್ನು ಮದುವೆಯಾದರೆ ಹಣ ಹಾಗೂ ನನ್ನ ಆಸ್ತಿಯನ್ನು ನೀಡುತ್ತೇನೆ ಎಂದು ಜಾಹೀರಾತು ನೀಡಿದ್ದರು. ಇದನ್ನು ನೋಡಿ ವಾಂಗ್ ಕ್ಸಿಯಾವೊ ಅವರು ಆ ವ್ಯಕ್ತಿಯನ್ನು ಸಂಪರ್ಕಿಸಿ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ನಿಮ್ಮ ಸಾವಿನ ನಂತರ ನನಗೆ ಮೂತ್ರಪಿಂಡವನ್ನು ದಾನ ಮಾಡಬೇಕು ಎಂದು. ಇದಕ್ಕೆ ಒಪ್ಪಿ ಒಪ್ಪಂದ ಮಾಡಿಕೊಂಡು ಮದುವೆಯಾಗಿದ್ದಾರೆ.

ಇದನ್ನೂ ಓದಿ: ಮತ್ತೆ ಕೆಲಸದ ಅವಧಿ ಬಗ್ಗೆ ಶುರುವಾಯ್ತು ಚರ್ಚೆ: ವಾರಕ್ಕೆ 80 ಗಂಟೆ ಕೆಲಸ ಮಾಡುವವರು ಬೇಕೆಂದ ಬೆಂಗಳೂರು ಉದ್ಯಮಿ!

ಜುಲೈ 2013ರಲ್ಲಿ ಇಬ್ಬರು ಕೂಡ ಯಾರಿಗೂ ತಿಳಿಯದಂತೆ ಮಾದುವೆಯಾಗಿದ್ದಾರೆ. ಈ ಒಪ್ಪಂದದ ಪ್ರಕಾರ ಮದುವೆಯಾಗಿರುವುದನ್ನು ಯಾರಿಗೂ ಹೇಳಬಾರದು, ಹಾಗೂ ಹಣಕಾಸಿನ ವಿಚಾರಗಳನ್ನು ಬಗ್ಗೆಯೂ ಗುಟ್ಟಾಗಿರಬೇಕು ಎಂದು ಹೇಳಿಕೊಂಡಿದ್ದಾರೆ. ಇದರ ಜತೆಗೆ ಈ ವ್ಯಕ್ತಿಯ ಮರಣ ನಂತರ ಅವರ ಮೂತ್ರಪಿಂಡವನ್ನು ವಾಂಗ್ ಕ್ಸಿಯಾವೊಗೆ ನೀಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾರೆ. ಮನುಷ್ಯ ನಿರ್ಧಾರವೇ ಒಂದು ದೈವದ ಇಚ್ಛೆಯೇ ಬೇರೆ ಆಗಿತ್ತು. ಈ ಒಪ್ಪಂದದ ಮದುವೆ ಪ್ರೀತಿಗೆ ತಿರುಗಿದೆ. ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸಲು ಶುರು ಮಾಡಿದ್ದಾರೆ. ಅವರ ನಡುವೆ ಇದ್ದ ಸಲುಗೆ, ಕಾಳಜಿ, ಪ್ರೀತಿ ಇಬ್ಬರನ್ನು ಒಂದು ಮಾಡಿದೆ.ಜತೆಗೆ ಇಬ್ಬರು ಸೇರಿ ಬೀದಿ ಬದಿಯಲ್ಲಿ ಹೂವಿನ ಅಂಗಡಿ ಮಾಡಿಕೊಂಡು ಸಂತೋಷದ ಜೀವನವನ್ನು ನಡೆಸಿದ್ದಾರೆ. ದಿನಗಳು ಹೋದಂತೆ ಇಬ್ಬರ ನಡುವೆ ಸಕಾರಾತ್ಮಕ ವಿಚಾರಗಳು ಬೆಳೆದು ತಮಗೆ ಬಂದ ಕಾಯಿಲೆಯನ್ನು ದೂರು ಮಾಡಿಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ