
ಚೀನಾ (China) ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿ ಆಗುತ್ತ ಇರುತ್ತದೆ. ಇದೀಗ ಮತ್ತೆ ಜನಸಂಖ್ಯೆ ಹೆಚ್ಚಿಸುವ ವಿಚಾರವಾಗಿ ಸುದ್ದಿಯಾಗಿದೆ. ಹಲವು ದಶಕಗಳ ಹಿಂದೆ ಭಾರತಕ್ಕೆ ಪೈಪೋಟಿ ನೀಡಿ, ಜನಸಂಖ್ಯೆಯಲ್ಲಿ ನಂಬರ್ ಒನ್ ಇತ್ತು. ಆದರೆ ಇದೀಗ ಭಾರತ ಮೊದಲ ಸ್ಥಾನದಲ್ಲಿದೆ. ಹಾಗಾಗಿ ತನ್ನ ದೇಶದ ಜನಸಂಖ್ಯೆಯನ್ನು ಹೆಚ್ಚಿಸಲು ಹೊಸ ಉಪಾಯವನ್ನು ಮಾಡಿದೆ. ಈಗ ಸರ್ಕಾರವು ರಾಜ್ಯದಲ್ಲಿ ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸಲು ಜನನ ನಿಯಂತ್ರಣ ಔಷಧಿಗಳನ್ನು ನಿಷೇಧಿಸಲು ಮುಂದಾಗಿದೆ. ಹಾಗಾಗಿ ಕಾಂಡೋಮ್, ಗರ್ಭನಿರೋಧಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಚೀನಾದಲ್ಲಿ ಜನವರಿಂದ ಕಾಂಡೋಮ್‌ಗಳು ಹಾಗೂ ಇತರ ಗರ್ಭನಿರೋಧಕ ಔಷಧಿಗಳ ಮೇಲೆ ಶೇ.13ರಷ್ಟು ವ್ಯಾಟ್ ವಿಧಿಸಲು ನಿರ್ಧರಿಸಿದೆ. ಚೀನಾ ಮೂರು ದಶಕಗಳ ನಂತರ ಇದೇ ಮೊದಲ ಬಾರಿ ಈ ವಸ್ತುಗಳ ಮೇಲೆ ತೆರಿಗೆ ವಿಧಿಸಿದೆ ಎಂದು ಹೇಳಲಾಗಿದೆ. ಚೀನಾದ ಜನನ ಪ್ರಮಾಣವು ಕಳೆದ ಮೂರು ವರ್ಷಗಳಿಂದ ಕುಸಿಯುತ್ತಿದೆ ಮತ್ತು 2024ರಲ್ಲಿ ಕೇವಲ 9.54 ಲಕ್ಷ ಶಿಶುಗಳು ಜನಿಸಿವೆ, ಇದು ಒಂದು ದಶಕದ ಹಿಂದೆ ದಾಖಲಾದ 18.8 ಲಕ್ಷ ಜನನಗಳಲ್ಲಿ ಅರ್ಧದಷ್ಟಿದೆ.
ಜನಸಂಖ್ಯಾ ಕುಸಿತವನ್ನು ನಿಭಾಯಿಸಲು, ಚೀನಾ ಈ ಹೊಸ ನಿಯಮವನ್ನು ಪರಿಚಯಿಸಿದೆ.ಕಾಂಡೋಮ್‌ಗಳು ಮತ್ತು ಇತರ ಎಲ್ಲಾ ಗರ್ಭನಿರೋಧಕ ಉತ್ಪನ್ನಗಳಿಗೆ ಜನವರಿಯಿಂದ ನವೀಕರಿಸಿದ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕಾನೂನಿನಡಿಯಲ್ಲಿ 13% ತೆರಿಗೆ ವಿಧಿಸಲಾಗುತ್ತದೆ. ಇದಕ್ಕೂ ಮೊದಲು ಈ ನಿಯಮ ಇರಲಿಲ್ಲ. 1993ರಲ್ಲಿ ಜನಸಂಖ್ಯೆಯಲ್ಲಿ ಮುಂದಿದ್ದ ಚೀನಾ ಈ ವಸ್ತುಗಳ ಮೇಲೆ ತೆರಿಗೆಯಲ್ಲಿ ಮೀನಾಯಿತಿ ನೀಡಿತ್ತು.
ಇದನ್ನೂ ಓದಿ: ಇಂಡಿಗೋ ವಿಮಾನ ಎಡವಟ್ಟು: ದೆಹಲಿಯಿಂದ ಕೊಚ್ಚಿಯಲ್ಲಿ ಬಂದು ಇಳಿದ್ರೂ ತಲುಪಲಿಲ್ಲ ಮಹಿಳೆಯ ಸೂಟ್‌ಕೇಸ್
ಚೀನಾದಲ್ಲಿ ಮಕ್ಕಳನ್ನು ಬೆಳೆಸಲು ತುಂಬಾ ವೆಚ್ಚ ಆಗುತ್ತದೆ ಎಂಬ ಭಯ ಅಲ್ಲಿನ ಯುವ ದಂಪತಿಗಳಲ್ಲಿ ಇದೆ. ಬೀಜಿಂಗ್ ಮೂಲದ ಯುವ ಜನಸಂಖ್ಯಾ ಸಂಶೋಧನಾ ಸಂಸ್ಥೆ 2024 ರಲ್ಲಿ ನಡೆಸಿದ ಅಧ್ಯಯದ ಪ್ರಕಾರ, 18 ವರ್ಷ ವಯಸ್ಸಿನವರೆಗೆ ಮಗುವನ್ನು ಬೆಳೆಸಲು ಸುಮಾರು 5.38 ಲಕ್ಷ ಯುವಾನ್ (ಸುಮಾರು 76,000 ಡಾಲರ್) ವೆಚ್ಚವಾಗುತ್ತದೆ ಎಂದು ಅಂದಾಜಿಸಿದೆ, ಇದರಿಂದಾಗಿ ಚೀನಾವು ಮಕ್ಕಳ ಪಾಲನೆಗೆ ವಿಶ್ವದ ಅತ್ಯಂತ ದುಬಾರಿ ಸ್ಥಳಗಳಲ್ಲಿ ಒಂದಾಗಿದೆ ಎಂದು ಹೇಳಿದೆ. ಈ ಕಾರಣಕ್ಕೆ ಅಲ್ಲಿನ ಜನ ಮಕ್ಕಳು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸರ್ಕಾರ ಗಣನೀಯವಾಗಿ ಜನಸಂಖ್ಯೆ ಇಳಿಯುವುದನ್ನು ತಡೆಯಲು ಈ ಕ್ರಮವನ್ನು ತಂದಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ