ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ಕಾಂಡೋಮ್ ಪತ್ತೆ! ಕಾರಣ ಕೇಳಿದ್ರೆ ಶಾಕ್​​ ಆಗ್ತೀರಾ

ಕೊಲಂಬಿಯಾದ ಮೆಡೆಲಿನ್ ವಿಮಾನ ನಿಲ್ದಾಣದಲ್ಲಿ ನಾಲ್ವರು ಅಮೆರಿಕನ್ ಪ್ರವಾಸಿಗರನ್ನು ಬಂಧಿಸಲಾಗಿದೆ. ಅವರ ಲಗೇಜ್‌ನಲ್ಲಿ 100ಕ್ಕೂ ಹೆಚ್ಚು ಕಾಂಡೋಮ್ ಪ್ಯಾಕೆಟ್‌ಗಳು ಪತ್ತೆಯಾದ ನಂತರ, ಲೈಂಗಿಕ ಪ್ರವಾಸೋದ್ಯಮದಲ್ಲಿ ಭಾಗವಹಿಸುವ ಉದ್ದೇಶದ ಶಂಕೆಯ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಿ, ಕಾರಣ ತಿಳಿದು ವಾಪಸ್ ಅವರ ದೇಶಕ್ಕೆ ಕಳುಹಿಸಿದ್ದಾರೆ. ಕೊಲಂಬಿಯಾ ಸರ್ಕಾರವು ಲೈಂಗಿಕ ಶೋಷಣೆ ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.

ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ಕಾಂಡೋಮ್ ಪತ್ತೆ! ಕಾರಣ ಕೇಳಿದ್ರೆ ಶಾಕ್​​ ಆಗ್ತೀರಾ
ಸಾಂದರ್ಭಿಕ ಚಿತ್ರ

Updated on: Nov 27, 2025 | 4:52 PM

ಕೊಲಂಬಿಯಾದ (Colombia) ಮೆಡೆಲಿನ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ ನಾಲ್ಕು ಜನ ಪ್ರವಾಸಿಗರನ್ನು ಬಂಧನ ಮಾಡಲಾಗಿತ್ತು. ಈ ನಾಲ್ಕು ಜನರ ಮೇಲೆ ವಿಮಾನ ನಿಲ್ದಾಣ ಅಧಿಕಾರಿಗಳು ಅನುಮಾನ ಪಟ್ಟು ಬಂಧಿಸಿದ್ದರು ಎಂದು ಹೇಳಲಾಗಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್​​​​​​​ ತಪಾಸಣೆ ಮಾಡುತ್ತಿದ್ದ ವೇಳೆ, ಈ ನಾಲ್ಕು ಜನರ ಬ್ಯಾಗ್​​​​​​​​ನಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡು ಬಂದಿದೆ. ಅಧಿಕಾರಿಗಳು ಈ ಬಗ್ಗೆ ನಾಲ್ಕು ಪ್ರವಾಸಿಗರನ್ನು ಪ್ರಶ್ನಿಸಿದ್ದಾರೆ. ಆದರೆ ಅಧಿಕಾರಿಗಳ ಪ್ರಶ್ನೆಗೆ ಸರಿಯಾದ ಉತ್ತರವನ್ನು ಈ ನಾಲ್ಕು ಜನ ನೀಡಿಲ್ಲ. ಇದರಿಂದ ಅನುಮಾನ ಬಂದು ನಾಲ್ವರನ್ನು ಬಂಧಿಸಿದ್ದಾರೆ. ನಂತರ ಅವರ ಲಗೇಜ್​​​​​​​ ಪರಿಶೀಲನೆ ನಡೆಸಿದಾಗ 100ಕ್ಕೂ ಹೆಚ್ಚು ಕಾಂಡೋಮ್ ಪ್ಯಾಕೆಟ್​ಗಳು ಪತ್ತೆಯಾಗಿವೆ.

ಲೈಂಗಿಕ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಇವರು ಇಷ್ಟೊಂದು ಕಾಂಡೋಮ್​​​ಗಳನ್ನು ತಂದಿದ್ದಾರೆ ಎಂದು ಹೇಳಲಾಗಿದೆ. ಇದೀಗ ಅಧಿಕಾರಿಗಳು ಈ ನಾಲ್ಕು ಜನರನ್ನು ಅವರನ್ನು ಅವರ ಊರಿಗೆ ವಾಪಸ್​​ ಕಳಿಸಿದ್ದು, ಇದರಲ್ಲಿ ಮೂವರನ್ನು ಪನಾಮಕ್ಕೆ ಹಾಗೂ ಮತ್ತೊಬ್ಬರನ್ನು ಮಿಯಾಮಿಗೆ ಕಳುಹಿಸಲಾಗಿದೆ. ಇನ್ನು ಅಧಿಕಾರಿಗಳು ಇಂತಹ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ದೇಶದ ಒಳಗೆ ಬರಲು ಬಿಡುವುದಿಲ್ಲ ಹಾಗೂ ಆಂಟಿಯೋಕ್ವಿಯಾದಲ್ಲಿ ವಲಸೆ ನಿಯಂತ್ರಣಗಳನ್ನು ಬಿಗಿಗೊಳಿಸಿದ್ದು,  ಲೈಂಗಿಕ ಪ್ರವಾಸೋದ್ಯಮದ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಇಟಲಿ ರಾಯಭಾರಿ ಹೆಸರಿಸಿದ ಬೆಂಗಳೂರಿನ ಬೆಸ್ಟ್ 9 ಹೋಟೆಲ್​ಗಳು ಯಾವುವು ಗೊತ್ತೇ?

ಇಂತಹ ವಸ್ತುಗಳನ್ನು ದೇಶದ ಒಳಗೆ ತರುವುದನ್ನು ನಿಷೇಧಿಸಲಾಗಿದೆ. 2024ರಿಂದ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದ ಸುಮಾರು 102 ಜನರು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.ಈ ವರ್ಷ ಇಲ್ಲಿಯವರೆಗೆ, ಸುಮಾರು 70 ಶಂಕಿತ ಲೈಂಗಿಕ ಪ್ರವಾಸಿಗರು ಕೊಲಂಬಿಯಾಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಅಮೇರಿಕದ ನಾಗರಿಕರು ಎಂದು ಹೇಳಲಾಗಿದೆ. ಕೊಲಂಬಿಯಾ ಸರ್ಕಾರವು ಲೈಂಗಿಕ ಪ್ರವಾಸೋದ್ಯಮ ಮತ್ತು ಶೋಷಣೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಘಟನೆಗಳು ಹೆಚ್ಚು ಕೇಳಿ ಬರುತ್ತಿದೆ. ದೇಶದ ಮಕ್ಕಳು ಮತ್ತು ನಾಗರಿಕರನ್ನು ಇಂತಹ ಕೃತ್ಯದಲ್ಲಿ ಬಳಸದಂತೆ ಪ್ರಬಲ ಕಾನೂನು ರೂಪಿಸಲಾಗುವುದು. ಹಾಗೂ ಅವರನ್ನು ಇದರಿಂದ ರಕ್ಷಿಸಲಾಗುವುದು ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:49 pm, Thu, 27 November 25