AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಟಲಿ ರಾಯಭಾರಿ ಹೆಸರಿಸಿದ ಬೆಂಗಳೂರಿನ ಬೆಸ್ಟ್ 9 ಹೋಟೆಲ್​ಗಳು ಯಾವುವು ಗೊತ್ತೇ?

ಇಟಲಿಯ ಕಾನ್ಸುಲ್ ಜನರಲ್ ಜಿಯಾಂಡೊಮೆನಿಕೊ ಮಿಲಾನೊ ಅವರು ಬೆಂಗಳೂರಿನ ತಮ್ಮ ನೆಚ್ಚಿನ ಟಾಪ್ 9 ಇಟಾಲಿಯನ್ ರೆಸ್ಟೋರೆಂಟ್‌ಗಳನ್ನು ಪಟ್ಟಿ ಮಾಡಿದ್ದಾರೆ. "ವಿಶ್ವ ಇಟಾಲಿಯನ್ ಪಾಕಪದ್ಧತಿಯ ವಾರ" ಕಾರ್ಯಕ್ರಮದಲ್ಲಿ ಅವರು ಈ ಸ್ಥಳಗಳನ್ನು ಹೆಸರಿಸಿದ್ದು, ಇಟಾಲಿಯನ್ ಆಹಾರ ಪ್ರಿಯರಿಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಆಲ್ಟೊ ವಿನೋ, ಇಟಾಲಿಯಾ ದಿ ಪಾರ್ಕ್ ಸೇರಿದಂತೆ ಪ್ರಮುಖ ರೆಸ್ಟೋರೆಂಟ್‌ಗಳು ಈ ಪಟ್ಟಿಯಲ್ಲಿ ಸೇರಿವೆ.

ಇಟಲಿ ರಾಯಭಾರಿ ಹೆಸರಿಸಿದ ಬೆಂಗಳೂರಿನ ಬೆಸ್ಟ್ 9 ಹೋಟೆಲ್​ಗಳು ಯಾವುವು ಗೊತ್ತೇ?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Nov 27, 2025 | 3:57 PM

Share

ಇಟಲಿಯ ರಾಜತಾಂತ್ರಿಕ ಜಿಯಾಂಡೊಮೆನಿಕೊ ಮಿಲಾನೊ (Giandomenico Milano) “ನಾನು ಪ್ರತಿದಿನ ಮಸಾಲೆ ದೋಸೆ ತಿನ್ನಬಲ್ಲೆ, ಬೆಂಗಳೂರಿನಲ್ಲಿ ಅದು ನನ್ನ ನೆಚ್ಚಿನ ಉಪಹಾರ” ಎಂದು ಈ ಹಿಂದೆ ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿತ್ತು. ಇದೀಗ ಮತ್ತೆ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದ್ದಾರೆ. ಬೆಂಗಳೂರಿನಲ್ಲಿರುವ ಇಟಲಿಯ ಕಾನ್ಸುಲ್ ಜನರಲ್ ಜಿಯಾಂಡೊಮೆನಿಕೊ ಮಿಲಾನೊ, ಬೆಂಗಳೂರಿನ ಬೆಸ್ಟ್ 9 ಹೋಟೆಲ್​ಗಳ ಬಗ್ಗೆ ಹೇಳಿದ್ದಾರೆ. ವಿಶ್ವದ ಇಟಾಲಿಯನ್ ಪಾಕಪದ್ಧತಿಯ ವಾರ ಎಂಬ ಕಾರ್ಯಕ್ರಮದಲ್ಲಿ ಈ ಬಗ್ಗೆ ಹೇಳಿದ್ದರು. ಬೆಂಗಳೂರಿನಲ್ಲಿರುವ ಇಟಾಲಿಯನ್ ರೆಸ್ಟೋರೆಂಟ್‌ ಯಾವುದು ಎಂಬುದನ್ನು ಇಲ್ಲಿ ತಿಳಿಸಿದೆ.

ಇಟಲಿ ಆಹಾರಗಳನ್ನು ಸೇವನೆ ಮಾಡಬೇಕೆಂದರೆ ಅವರು ಬೆಂಗಳೂರಿನ ಈ ಹೋಟೆಲ್​​ಗಳಿಗೆ ಹೋಗುತ್ತಾರೆ. ಈ ಬಗ್ಗೆ ಸೆರೆನಾ ಎಂಬುವವರು ತಮ್ಮ ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ. ಅವರು ಈ ವಿಡಿಯೋದಲ್ಲಿ ಹೇಳಿರುವ ಪ್ರಕಾರ, ಇಟಾಲಿಯನ್ ಫುಡ್ ವೀಕ್ ಕಾರ್ಯಕ್ರಮದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅತ್ಯುತ್ತಮ ಇಟಾಲಿಯನ್ ಆಹಾರವನ್ನು ನೀಡುವ ರೆಸ್ಟೋರೆಂಟ್‌ಗಳನ್ನು ಅವರು ಪಟ್ಟಿ ಮಾಡಿದ್ದಾರೆ. ಆಲ್ಟೊ ವಿನೋ, ಇಟಾಲಿಯಾ ದಿ ಪಾರ್ಕ್, ಚಿಯಾಂಟಿ, ಕ್ಯಾಪ್ರೆಸ್ ಅಟ್ ಶಾಂಗ್ರಿ-ಲಾ, ಟೊಸ್ಕಾನೊ, ಟಿಯಾಮೊ, ರೋಸ್ಮರಿನೊ, ಪಿನೋಚ್ಚಿಯೊ ರಿಸ್ಟೊರಾಂಟೆ ಮತ್ತು ಲಾ ಜಿಯೋಯಾ ಇವುಗಳು ಇಟಾಲಿಯನ್​​​​​ ಫುಡ್​​​ ನೀಡುವ ಬೆಂಗಳೂರಿನ ಪ್ರಸಿದ್ಧ ರೆಸ್ಟೋರೆಂಟ್​​​ಗಳು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೊಟ್ಟೆ ಹಸಿದಾಗ ಬರುವ ಶಬ್ದ ಕೇಳಿ ಫುಡ್​​​ ಆರ್ಡರ್ ಮಾಡುವ ಎಐ ಸಾಧನ ಕಂಡುಹಿಡಿದ ಮಂಗಳೂರಿನ ಯುವಕ

ಇನ್ನು ನೆಟ್ಟಿಗರು ಈ ಪೋಸ್ಟ್​​​ಗೆ ಪ್ರತಿಕ್ರಿಯಿಸಿದ್ದಾರೆ. ಒಬ್ಬ ನೆಟ್ಟಿಗ, ಇಲ್ಲ ಬೊಲೊಗ್ನಾ ಅತ್ಯುತ್ತಮ ರೆಸ್ಟೋರೆಂಟ್​​​ ಎಂದು ಹೇಳಿದ್ದಾರೆ. ಇದನ್ನು ಯಾಕೆ ಇಲ್ಲಿ ಉಲ್ಲೇಖಿಸಿಲ್ಲ ಎಂದು ಕೇಳಿದ್ದಾರೆ. ಇದಕ್ಕೆ ಮತ್ತೊಬ್ಬ ನೆಟ್ಟಿಗ, ಹೌದು ಬೊಲೊಗ್ನಾ ರೆಸ್ಟೋರೆಂಟ್​​​ ತುಂಬಾ ಒಳ್ಳೆಯ ರೆಸ್ಟೋರೆಂಟ್​​​ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು