ಪರಿಚಯವಾದ 4 ಗಂಟೆಯಲ್ಲಿ ಮದುವೆ, 18 ದಿನದಲ್ಲಿ ದಿವಾಳಿಯಾದ ವ್ಯಕ್ತಿ

ಡೇಟಿಂಗ್ ಆ್ಯಪ್‌ಗಳಿಂದ ಗಂಡ -ಹೆಂಡತಿಯ ಸಂಬಂಧಗಳ ಸ್ವರೂಪ ಬದಲಾಗಿದೆ. ಚೀನಾದ 40 ವರ್ಷದ ವ್ಯಕ್ತಿಯೊಬ್ಬರು ಬ್ಲೈಂಡ್ ಡೇಟ್ ಮೂಲಕ ಪರಿಚಯವಾದ ಮಹಿಳೆಯನ್ನು ಕೇವಲ 4 ಗಂಟೆಯಲ್ಲಿ ಮದುವೆಯಾಗಿ, ತಮ್ಮ ಸಂಪೂರ್ಣ ಸಂಪತ್ತನ್ನು ಕಳೆದುಕೊಂಡಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಆಕೆ ಹಣದೊಂದಿಗೆ ಪರಾರಿಯಾಗಿದ್ದಾಳೆ. ಈ ಘಟನೆ ಆನ್‌ಲೈನ್ ಡೇಟಿಂಗ್‌ ಎಷ್ಟು ಅಪಾಯವಾಗಿದೆ ಎಂಬುದನ್ನು ಹೇಳುತ್ತದೆ.

ಪರಿಚಯವಾದ 4 ಗಂಟೆಯಲ್ಲಿ ಮದುವೆ, 18 ದಿನದಲ್ಲಿ ದಿವಾಳಿಯಾದ ವ್ಯಕ್ತಿ
ಸಾಂದರ್ಭಿಕ ಚಿತ್ರ

Updated on: Dec 02, 2025 | 3:30 PM

ಇಂದಿನ ಕಾಲದಲ್ಲಿ ಡೇಟಿಂಗ್​​ ಆ್ಯಪ್​​ಗಳಿಂದ (Dating app scam)  ಪ್ರೀತಿ, ಮದುವೆಗೆ ಯಾವುದೇ ಬೆಲೆ ಇಲ್ಲ. ಅದರಲ್ಲೂ ಭಾರತದಲ್ಲಿ ಮದುವೆಗೆ ಹೆಚ್ಚು ಮಹತ್ವ ಇತ್ತು. ಆದರೆ ಇದೀಗ ಇಲ್ಲಿ ಕೂಡ  ಈ ಡೇಟಿಂಗ್​​ ಆ್ಯಪ್​​ಗಳಿಂದ ಬದಲಾವಣೆಯಾಗಿದೆ. ಇನ್ನು ವಿದೇಶಿಗರ ಮದುವೆಯಲ್ಲೂ ಬದಲಾವಣೆಗಳು ಆಗಿವೆ. ಇದೀಗ ಇಲ್ಲೊಂದು ಸುದ್ದಿ ಭಾರೀ ವೈರಲ್​​ ಆಗಿದ್ದು, ಒಂದು ಡೇಟಿಂಗ್​​ ಆ್ಯಪ್​​​ನಿಂದ ಪರಿಚಯವಾದ ಮಹಿಳೆಯನ್ನು ಮದುವೆಯಾಗಿ ತನ್ನ ಸಂಪತ್ತನ್ನು ಕಳೆದುಕೊಂಡಿದ್ದಾರೆ. ಈ ಘಟನೆ ಚೀನಾದ ಹೆಂಗ್ಯಾಂಗ್ ನಗರದಲ್ಲಿ ನಡೆದಿದೆ. 40 ವರ್ಷದ ವ್ಯಕ್ತಿಯೊಬ್ಬರು ಬ್ಲೈಂಡ್ ಡೇಟ್​​​ನಲ್ಲಿ ಮಹಿಳೆಯೊಬ್ಬಳನ್ನು ನಾಲ್ಕು ಗಂಟೆಯಲ್ಲಿ ಪರಿಚಯ ಮಾಡಿಕೊಂಡು, ಮದುವೆಯಾಗಿದ್ದಾರೆ. ಮದುವೆಯಾದ ಒಂದೇ ವಾರದಲ್ಲಿ ಗಂಡನ ಎಲ್ಲ ಹಣ ಹಾಗೂ ಹೊಡಿಕೆಯನ್ನು ಖಾಲಿ ಮಾಡಿದ್ದಾಳೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ವರದಿಗಳ ಪ್ರಕಾರ, 40 ವರ್ಷದ ಹುವಾಂಗ್ ಝೊಂಗ್ಚೆಂಗ್ ಎಂಬ ವ್ಯಕ್ತಿ ಬ್ಲೈಂಡ್ ಡೇಟ್​​ ಆ್ಯಪ್​​​ನಲ್ಲಿ ಮಹಿಳೆಯೊಬ್ಬಳನ್ನು ಪ್ರೀತಿಸಿ, 4 ಗಂಟೆಯಲ್ಲಿ ಮದುವೆಯಾಗಿದ್ದಾರೆ. ಮದುವೆಯಾದ ನಂತರ ಆಕೆಯ ನಿಜ ಬಣ್ಣ ಬಯಲಾಗಿದೆ. ಮಹಿಳೆಯನ್ನು ನಂಬಿ ಎಲ್ಲವನ್ನು ನೀಡಿದ್ದಾರೆ. ಪ್ರೀತಿಯ ಅಮಲಿನಲ್ಲಿ ಆಕೆ ಕೇಳಿದ್ದೆಲ್ಲ ನೀಡಿದ್ದಾರೆ. ಮದುವೆಯ ನಂತರ ಹಣಕ್ಕಾಗಿ ಬೇಡಿಕೆ ಕೂಡ ಇಟ್ಟಿದ್ದಾಳೆ. 30 ಲಕ್ಷ ರೂ ಆಕೆಗೆ ಹುವಾಂಗ್ ಝೊಂಗ್ಚೆಂಗ್ ನೀಡಿದ್ದಾರೆ. ಅದನ್ನು 18 ದಿನದಲ್ಲೇ ದುರುಪಯೋಗ ಮಾಡಿದ್ದಾಳೆ. ಅಷ್ಟು ವರ್ಷ ಮಾಡಿದ ಎಲ್ಲ ಉಳಿತಾಯ ಹಾಗೂ ಹೂಡಿಕೆ ಕೂಡ ಕಳೆದುಕೊಂಡಿದ್ದಾರೆ. ಮೊದಲ ರಾತ್ರಿ ಕಳೆದ ನಂತರ, ಮಹಿಳೆಯ ನಡವಳಿಕೆ ಇದ್ದಕ್ಕಿದ್ದಂತೆ ಬದಲಾಗಿದೆ. ಗಂಡ ಮತ್ತು ಹೆಂಡತಿಯ ನಡುವೆ ಯಾವುದೇ ಅನ್ಯೋನ್ಯತೆ ಇರಲಿಲ್ಲ, ಪ್ರೀತಿ ಇರಲಿಲ್ಲ, ಕೇವಲ ಹಣದ ಲೆಕ್ಕಾಚಾರ ಮಾತ್ರ ಆಕೆಯ ತಲೆಯಲ್ಲಿ ಇತ್ತು.

ಇದನ್ನೂ ಓದಿ: ‘ನಾನು ನಾಳೆ ನನ್ನ ಕೆಲಸವನ್ನು ಬಿಡುತ್ತಿದ್ದೇನೆ’: ಕಂಪನಿ ನೀಡುವ ಹಿಂಸೆಗೆ ಬೇಸತ್ತ ಯುವಕ

ಹುವಾಂಗ್ ಹೇಳಿರುವ ಪ್ರಕಾರ, “ಮದುವೆಯಾದ ಮೊದಲು ಒಂದು ಹೋಟೆಲ್‌ನಲ್ಲಿ ಉಳಿಕೊಂಡೆವು, ಅದು ನಮ್ಮಿಬ್ಬರ ನಡುವೆ ನಡೆದ ಮೊದಲ ಪ್ರೀತಿಯ ಕ್ಷಣ, ಆ ನಂತರ ಆ ಪ್ರೀತಿ ಹಣದ ವ್ಯಾಮೋಹಕ್ಕೆ ಬದಲಾಯಿತು. ಹಣದ ವಿಚಾರಕ್ಕೆ ಪ್ರತಿದಿನ ಜಗಳ, ಒಂದು ದಿನವೂ ನಾನು ನೆಮ್ಮದಿಯಿಂದ ಇರಲಿಲ್ಲ. ಹಣ ಸಂಪಾದಿಸಲು ಊರು ಬಿಟ್ಟು ಊರಿಗೆ ಹೋಗುತ್ತಿದ್ದೆ, ಪ್ರತಿದಿನ ಹಣಕ್ಕಾಗಿ ಕಾಡಿಸುತ್ತಿದ್ದಳು. ಹಣಕ್ಕಾಗಿ ಮಾತ್ರ ನನ್ನ ಜತೆಗೆ ಮಾತನಾಡುತ್ತಿದ್ದಳು, ಆದರೆ ಈಗ ನನ್ನಲ್ಲಿ ಹಣ ಖಾಲಿಯಾಗಿದೆ. ಮಾನಸಿಕವಾಗಿ ಹಿಂಸಿಸಲು ಪ್ರಾರಂಭಿಸಿದ್ದಾಳೆ. ಮುಂದೆ ಹೇಗೆ ಜೀವನ ಕಳೆಯುವುದು ಎಂಬ ಭಯ ಶುರುವಾಗಿದೆ” ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ