AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ನಾಳೆ ನನ್ನ ಕೆಲಸವನ್ನು ಬಿಡುತ್ತಿದ್ದೇನೆ’: ಕಂಪನಿ ನೀಡುವ ಹಿಂಸೆಗೆ ಬೇಸತ್ತ ಯುವಕ

ಇಂದಿನ ಯುವಜನತೆ ಕಾರ್ಪೊರೇಟ್ ಉದ್ಯೋಗದಲ್ಲಿ ಹೆಚ್ಚಿದ ಕೆಲಸದ ಒತ್ತಡದಿಂದ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನ 22 ವರ್ಷದ ಅನ್ಶುಲ್ ಉತ್ತಯ್ಯ ಇದೇ ಕಾರಣಕ್ಕೆ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಅವರ ಈ ವಿಡಿಯೋ ವೈರಲ್ ಆಗಿದೆ. ಉದ್ಯೋಗದ ನಿರಸಕ್ತಿ, ಸಮಯದ ಕೊರತೆ ಮತ್ತು ಭವಿಷ್ಯದ ಯೋಜನೆಗಳು ಅವರ ನಿರ್ಧಾರಕ್ಕೆ ಕಾರಣವಾಗಿವೆ. ಇದು ಯುವಜನರ ಉದ್ಯೋಗದ ಆಯ್ಕೆ ಮತ್ತು ಜೀವನ ಸಮತೋಲನದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

'ನಾನು ನಾಳೆ ನನ್ನ ಕೆಲಸವನ್ನು ಬಿಡುತ್ತಿದ್ದೇನೆ': ಕಂಪನಿ ನೀಡುವ ಹಿಂಸೆಗೆ ಬೇಸತ್ತ ಯುವಕ
ವಿಡಿಯೋ ವೈರಲ್​​​
TV9 Web
| Edited By: |

Updated on: Dec 02, 2025 | 2:08 PM

Share

ಬೆಂಗಳೂರು, ಡಿ.2: ಇಂದಿನ ಯುವ ಜನರಿಗೆ ಉದ್ಯೋಗದಲ್ಲಿ ನೆಮ್ಮದಿ ಇಲ್ಲ. ಏಕೆಂದರೆ ಕಂಪನಿಗಳಲ್ಲಿ ಹೆಚ್ಚುತ್ತಿರುವ ಕೆಲಸದ ಒತ್ತಡ. ಈ ಕಾಪೋರೇಟ್​​​ ಕಂಪನಿಗಳಲ್ಲಿ (Corporate Stress) ಸ್ಯಾಲರಿಗೆ ತಕ್ಕಂತೆ ಕೆಲಸ ಇಲ್ಲ. ಕೆಲಸ ಹೆಚ್ಚು, ಸಂಬಳ ಕಡಿಮೆ ಎಂಬ ಆರೋಪಗಳು ಇದೆ. ಕೆಲಸ ಒತ್ತಡದಿಂದ ಯುವಕರ ಜೀವನ ಹಾಳಾಗುತ್ತಿದೆ ಎಂದು ಸೋಶಿಯಲ್​​ ಮೀಡಿಯಾದಲ್ಲಿ ಅದೆಷ್ಟೋ ಮೀಮ್ಸ್​​​ಗಳು ವೈರಲ್​​ ಆಗುತ್ತಿದೆ. ಇದರ ನಡುವೆ ಈ ವಿಡಿಯೋವೊಂದು ಭಾರೀ ವೈರಲ್​​ ಆಗಿದೆ. ಬೆಂಗಳೂರಿನ ಉದ್ಯೋಗಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಸ್ಸು ಗೆದ್ದಿದ್ದಾರೆ. 22 ವರ್ಷದ ಅನ್ಶುಲ್ ಉತ್ತಯ್ಯ ಸೋಮವಾರದಂದು ಈ ವಿಡಿಯೋವನ್ನು ಹಂಚಿಕೊಂಡು ಸೋಶಿಯಲ್​​​​ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ತಾನು ಮಾಡುತ್ತಿರುವ ಕೆಲಸಕ್ಕೆ ರಾಜೀನಾಮೆ ನೀಡುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್​​ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ನಾನು ನಾಳೆ ನನ್ನ ಕೆಲಸವನ್ನು ಬಿಡುತ್ತಿದ್ದೇನೆ. ಕೆಲಸ ಬಿಟ್ಟ ನಂತರ ಮುಂದೆ ಏನು ಮಾಡಬೇಕು ಎಂದು ತಿಳಿದಿಲ್ಲ. ನಾನು ಮಾಡುವ ಕೆಲಸವನ್ನು ನಾನು ದ್ವೇಷಿಸುತ್ತೇನೆ. ನನ್ನ ಜೀವನದಲ್ಲಿ ಎದುರಿಸುತ್ತಿರುವ ಈ ಕೆಟ್ಟ ಕ್ಷಣವನ್ನು ದೂರು ಮಾಡುವೆ. ಆಸ್ಟ್ರೇಲಿಯಾದ ಎರಡು ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದೇನೆ. ಆದರೆ ಅದನ್ನು ಬಿಟ್ಟು ಈ ಕೆಲಸಕ್ಕೆ ಬಂದೆ. ಎರಡನ್ನು ಜತೆಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಒಂದನ್ನು ಆಯ್ಕೆ ಮಾಡಿಕೊಂಡೆ. ಇಂದು ನಾನು ಪೂರ್ಣಾವಧಿ ಕೆಲಸ ಮಾಡುತ್ತೇನೆ, ಆದರೆ ಅದು ನನಗೆ ಇಷ್ಟವಿಲ್ಲ.  ಕೆಲಸ ನನಗೆ ತುಂಬಾ ಬೇಸರ ತಂದಿದೆ. ಈ ಕೆಲಸ ದೊಡ್ಡ ತಲೆನೋವು ನನಗೆ. ಇನ್ಮುಂದೆ ಇದನ್ನು ಮುಂದುವರಿಸಲು ಸಾಧ್ಯವಿಲ್ಲ. ಇದರಿಂದ ನನ್ನ ಸಮಯ ಕೂಡ ವ್ಯರ್ಥವಾಗಿದೆ. ಬೆಳಿಗ್ಗೆ 7:45ಕ್ಕೆ ಎದ್ದು, 10.00 ಗಂಟೆಯೊಳಗೆ ಆಫೀಸ್​​​ಗೆ ಹೋಗಬೇಕು. ಇದು ನನಗೆ ದೊಡ್ಡ ಹಿಂಸೆ ನೀಡುತ್ತಿದೆ. ಹೀಗಾಗಿ ನನಗೆ ಹೆಚ್ಚು ಸಮಯ ಕೂಡ ಸಿಗುತ್ತಿಲ್ಲ. ಆದರೆ ಒಂದು ಕಡೆ ಭಯ ಕೂಡ ಆಗುತ್ತಿದೆ. ಸ್ಥಿರವಾದ ಕೆಲಸವಿಲ್ಲ ಹಾಗೂ ಆದಾಯವಿಲ್ಲ. ಮುಂದೆ ಹೇಗೆ ಎಂಬ ಯೋಚನೆ ಉಂಟಾಗಿದೆ. ಆದರೆ ಕೆಲಸ ಬಿಡುವುದು ನನಗೆ ಅನಿವಾರ್ಯ ಎಂದು ಅನ್ಶುಲ್ ಉತ್ತಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಈ ದೇವಸ್ಥಾನದಲ್ಲಿ ಪಿಜ್ಜಾ, ಪಾನಿಪುರಿಯೇ ಪ್ರಸಾದ, ಇದರ ಹಿಂದಿದೆ ಪ್ರಮುಖ ಕಾರಣ

ವೈರಲ್​​​ ಪೋಸ್ಟ್​​ ಇಲ್ಲಿದೆ ನೋಡಿ:

ಇನ್ನು ಮಗನ ಈ ನಿರ್ಧಾರದ ಬಗ್ಗೆ ಅನ್ಶುಲ್ ಉತ್ತಯ್ಯ ಅವರ ತಂದೆ -ತಾಯಿಗೆ ಖುಷಿ ತಂದಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಅನ್ಶುಲ್ ಉತ್ತಯ್ಯ ಅವರು ಈ ವಿಡಿಯೋ ಹಂಚಿಕೊಳ್ಳುವ ಮೊದಲು 10,000 ಫಾಲೋರ್ಸ್​​​​ಗಳನ್ನು ಹೊಂದಿದ್ದರು. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ20 ಸಾವಿರ ಫಾಲೋರ್ಸ್​ಗಳನ್ನು ಗಳಿಸಿದ್ದಾರೆ. ಈ ವಿಡಿಯೋ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅವರು ಮೂರು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವೊಂದು ವಿಷಯಗಳ ಬಗ್ಗೆ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದರು. ಹಾಗಾಗಿ ಕೆಲಸವನ್ನು ಬಿಟ್ಟು ತಮ್ಮ ಪೂರ್ತಿ ಸಮಯನ್ನು ಇನ್ಸ್ಟಾಗ್ರಾಮ್​​ಗೆ ನೀಡಲು ಬಯಸಿದ್ದಾರೆ. ಇದೀಗ ಅನ್ಶುಲ್ ಉತ್ತಯ್ಯ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಕಮೆಂಟ್​​ ಬಂದಿದೆ. ಒಬ್ಬರು ಬೆಂಗಳೂರಿನಲ್ಲಿ ಶೀತ ಹಾಗೂ ಹವಾಮಾನ ವಾತಾವರಣ ಇದೆ.ಇದರ ಮಧ್ಯೆ ಇದೊಂದು ದುಃಖಕರ ವಿಚಾರ ಎಂದು ತಮಾಷೆಯಾಗಿ ಹೇಳಿದ್ದಾರೆ. ಅರ್ಪಿತಾ ಶರ್ಮಾ ಎಂಬುವವರು, ನನ್ನ ಕಡೆಯಿಂದ ಸಂಪೂರ್ಣ ಬೆಂಬಲ ಮತ್ತು ನಿಮಗೆ ದೊಡ್ಡ ಅಭಿನಂದನೆಗಳು ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ