AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ದೇವಸ್ಥಾನದಲ್ಲಿ ಪಿಜ್ಜಾ, ಪಾನಿಪುರಿಯೇ ಪ್ರಸಾದ, ಇದರ ಹಿಂದಿದೆ ಪ್ರಮುಖ ಕಾರಣ

ಜಗತ್ತು ಆಧುನಿಕತೆಯತ್ತ ಸಾಗುತ್ತಿದ್ದಂತೆ, ದೇವಾಲಯಗಳಲ್ಲೂ ಬದಲಾವಣೆ ಶುರುವಾಗಿದೆ. ಗುಜರಾತ್‌ನ ರಾಜ್‌ಕೋಟ್ ಮತ್ತು ಚೆನ್ನೈ ಬಳಿಯ ದೇವಾಲಯಗಳಲ್ಲಿ ಮಕ್ಕಳು ಇಷ್ಟಪಡುವ ಪಿಜ್ಜಾ, ಬರ್ಗರ್, ಪಾನಿಪುರಿಯನ್ನು ಪ್ರಸಾದವಾಗಿ ನೀಡಲಾಗುತ್ತಿದೆ. ಸಾಂಪ್ರದಾಯಿಕ ಪ್ರಸಾದ ತಿನ್ನಲು ಮಕ್ಕಳು ನಿರಾಕರಿಸಿದಾಗ, ಅವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಈ ಹೊಸ ಸಂಪ್ರದಾಯ ಹುಟ್ಟಿಕೊಂಡಿದೆ. ಈ ವೈರಲ್ ಸುದ್ದಿ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಈ ದೇವಸ್ಥಾನದಲ್ಲಿ ಪಿಜ್ಜಾ, ಪಾನಿಪುರಿಯೇ ಪ್ರಸಾದ, ಇದರ ಹಿಂದಿದೆ ಪ್ರಮುಖ ಕಾರಣ
ವೈರಲ್​​ ಪೋಸ್ಟ್​​
ಅಕ್ಷಯ್​ ಪಲ್ಲಮಜಲು​​
|

Updated on: Dec 01, 2025 | 1:17 PM

Share

ಜಗತ್ತು ಆಧುನಿಕತೆ ಕಡೆ ಸಾಗುತ್ತಿದೆ. ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕು. ಅದು ದೇವರು ವಿಷಯದಲ್ಲೂ ಮಾಡಿರುವುದು ಒಂದು ವಿಪರ್ಯಾಸ. ದೇವಾಲಯದಲ್ಲಿ ನೀಡುವ ಪ್ರಸಾದದಲ್ಲೂ ಆಧುನಿಕತೆ (Modern Temples) ತರಲಾಗಿದೆ. ದೇವಾಲಯದಲ್ಲಿ ಸಾಮಾನ್ಯವಾಗಿ ತೆಂಗಿನಕಾಯಿ, ಲಡ್ಡು, ಪಾಯಸ ಅಥವಾ ಪುಳಿಯೋಗರೆಯನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಆದರೆ ಈ ದೇವಾಲಯದಲ್ಲಿ ಅದಕ್ಕೆ ವಿರುದ್ಧವಾಗಿದೆ. ದಶಕಗಳಿಂದ, ಗುಜರಾತ್‌ನ ರಾಜ್‌ಕೋಟ್ ಮತ್ತು ಚೆನ್ನೈನಲ್ಲಿರುವ ಈ ಎರಡು ಪ್ರಸಿದ್ಧ ದೇವಾಲಯಗಳಲ್ಲಿ ಪಿಜ್ಜಾ, ಸ್ಯಾಂಡ್‌ವಿಚ್‌, ಬರ್ಗರ್‌, ಪಾನಿಪುರಿ ಮತ್ತು ತಂಪು ಪಾನೀಯಗಳನ್ನು ಪ್ರಸಾದವಾಗಿ ವಿತರಿಸಲಾಗುತ್ತಿದೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಇದನ್ನು ಪ್ರಸಾದವಾಗಿ ನೀಡಲು ಒಂದು ಪ್ರಮುಖ ಕಾರಣವಿದೆ. ಮಕ್ಕಳ ಮೇಲಿನ ಪ್ರೀತಿ ಮತ್ತು ಅವರ ದೀರ್ಘಾಯುಷ್ಯಕ್ಕಾಗಿ ಪೋಷಕರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ರಪುತಾನಾ ಗ್ರಾಮದಲ್ಲಿ 65-70 ವರ್ಷಗಳ ಹಿಂದಿನ ಜೀವಿಕಾ ಮಾತಾಜಿ ದೇವಾಲಯದಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ. ತಾಯಂದಿರು ತಮ್ಮ ಮಕ್ಕಳ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ವಿಶೇಷ ಪ್ರಾರ್ಥನೆಗಳನ್ನು ಈ ದೇವಾಲಯದಲ್ಲಿ ಸಲ್ಲಿಸಲಾಗುತ್ತದೆ. ಈ ಹಿಂದೆ ದೇವಾಲಯದಲ್ಲಿ ತೆಂಗಿನಕಾಯಿ ಮತ್ತು ಸಕ್ಕರೆಯಿಂದ ಮಾಡಿದ ಸರಳ ಪ್ರಸಾದ ನೀಡಲಾಗುತ್ತಿತ್ತು. ಆದರೆ ದೇವಾಲಯಕ್ಕೆ ಬರುವ ಮಕ್ಕಳು ಈ ಪ್ರಸಾದವನ್ನ ತಿನ್ನಲು ನಿರಾಕರಿಸಿದ್ದಾರೆ. ಅದಕ್ಕಾಗಿ ಮಕ್ಕಳು ಸಂತೋಷದಿಂದ ದೇವಾಲಯಕ್ಕೆ ಬಂದು ಪ್ರಸಾದವನ್ನು ಸ್ವೀಕರಿಸುವಂತೆ ದೇವಾಲಯ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮಕ್ಕಳು ಇಷ್ಟಪಡುವ ಪಿಜ್ಜಾ, ಬರ್ಗರ್, ಸ್ಯಾಂಡ್‌ವಿಚ್ ಮತ್ತು ಪಾನಿಪುರಿಯನ್ನು ಪ್ರಸಾದವಾಗಿ ನೀಡಲು ಆಡಳಿತ ಸಮಿತಿ ಅವಕಾಶವನ್ನು ನೀಡಿದೆ. ಈ ದೇವಾಲಯದಲ್ಲಿ ಭಕ್ತರೇ ಪ್ರಸಾದವನ್ನು ತಂದು ದೇವಿಗೆ ನೀಡಿ, ನಂತರ ಅದನ್ನು ಮಕ್ಕಳಿಗೆ ನೀಡುತ್ತಾರೆ.

ಇದನ್ನೂ ಓದಿ: ನೀತಾ ಅಂಬಾನಿ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಸಿಬ್ಬಂದಿ

ಇನ್ನು ತಮಿಳುನಾಡಿನ ಚೆನ್ನೈ ಬಳಿಯ ಪಡಪ್ಪೈನಲ್ಲಿರುವ ಜೈ ದುರ್ಗಾ ಪೀಠಂ ದೇವಾಲಯದಲ್ಲೂ ಕೂಡ ಈ ಆಚರಣೆ ಇದೆ. ಈ ದೇವಾಲಯವನ್ನು ಹರ್ಬಲ್ ಆಂಕೊಲಾಜಿಸ್ಟ್ ಡಾ. ಕೆ. ಶ್ರೀಧರ್ ಸ್ಥಾಪಿಸಿದ್ದು, ಇಲ್ಲಿಯೂ ಸಹ, ಪಿಜ್ಜಾ, ಬರ್ಗರ್‌ಗಳು, ಸ್ಯಾಂಡ್‌ವಿಚ್‌ಗಳು, ಪಾನಿಪುರಿ ಮತ್ತು ತಂಪು ಪಾನೀಯಗಳನ್ನು ಸಾಮಾನ್ಯವಾಗಿ ದೇವಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಇದಲ್ಲದೆ, ಭಕ್ತರು ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ದೇವಾಲಯದಲ್ಲಿ ಆಚರಣೆ ಮಾಡಲು ರಶೀದಿ ಮಾಡಿಸಿಕೊಳ್ಳಬಹುದು. ಹಾಗೂ ಕೇಕ್​​​ ಕಟ್​​ ಮಾಡಿ ಪ್ರಸಾದವಾಗಿ ನೀಡಬಹುದು. ಈ ದೇವಾಲಯದಲ್ಲಿರುವ ಎಲ್ಲಾ ಪ್ರಸಾದವನ್ನು ದೇವಾಲಯದ ಅಡುಗೆಮನೆಯಲ್ಲಿ ಸ್ವಚ್ಛತೆಯಿಂದ ತಯಾರಿಸಲಾಗುತ್ತದೆ.

ಇದನ್ನೂ ಓದಿ: ನೀತಾ ಅಂಬಾನಿ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಸಿಬ್ಬಂದಿ

ಈ ಸಂಪ್ರದಾಯದ ಹಿಂದಿನ ಕಾರಣವೇನು?

ಈ ಎರಡೂ ದೇವಾಲಯಗಳಲ್ಲಿ ಯಾಕೆ ಈ ರೀತಿಯ ಸಂಪ್ರದಾಯಗಳನ್ನು ಆಚರಣೆ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಅಲ್ಲಿನ ಆಡಳಿತ ಸಮಿತಿ ಉತ್ತರಿಸಿದೆ. ಮಕ್ಕಳ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ, ಹಾಗೂ ಮಕ್ಕಳು ದೇವಸ್ಥಾನಕ್ಕೆ ಬಂದಾಗ, ಅವರು ಸಾಂಪ್ರದಾಯಿಕ ಪ್ರಸಾದವನ್ನು ಇಷ್ಟಪಡುತ್ತಿಲ್ಲ. ಹಾಗಾಗಿ ಇಲ್ಲಿ ದೇವಿಗೆ ದೇವಿಯು ಆಧುನಿಕ ಮಕ್ಕಳ ಆಹಾರವನ್ನು ಸಹ ಸ್ವೀಕರಿಸುತ್ತಾಳೆ ಎಂಬ ನಂಬಿಕೆ ಇಲ್ಲಿದೆ. ಇದರಿಂದಾಗಿ, ಮಕ್ಕಳು ಸಂತೋಷದಿಂದ ದೇವಸ್ಥಾನಕ್ಕೆ ಬರುತ್ತಾರೆ. ತಾಯಿ ಮಾಡಿದ ಪ್ರತಿಜ್ಞೆಯೂ ಈಡೇರುತ್ತದೆ ಎಂದು ಹೇಳಲಾಗಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ