ನೀತಾ ಅಂಬಾನಿ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಸಿಬ್ಬಂದಿ
ನೀತಾ ಅಂಬಾನಿ ಅವರು ಸಿಬ್ಬಂದಿಯನ್ನು ಕುಟುಂಬದಂತೆ ಕಾಣುತ್ತಾರೆ. ಇತ್ತೀಚೆಗೆ, ಒಬ್ಬ ಸಿಬ್ಬಂದಿಯ ಹುಟ್ಟುಹಬ್ಬವನ್ನು ಆಚರಿಸಿ, ಅವರ ಔದಾರ್ಯ ಮತ್ತೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನೀತಾ ಅಂಬಾನಿ ಸಿಬ್ಬಂದಿಯೊಂದಿಗೆ ಕೇಕ್ ಕಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ. ಇದು ಸಿಬ್ಬಂದಿಯ ಬಗೆಗಿನ ಅವರ ಪ್ರೀತಿ ಮತ್ತು ಗೌರವವನ್ನು ಎತ್ತಿ ತೋರಿಸುತ್ತದೆ, ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ.

ನೀತಾ ಅಂಬಾನಿ (Nita Ambani) ದೇಶದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು, ಅದರ ಜತೆಗೆ ಸಾಮಾಜಿಕ ಕಾರ್ಯಗಳಲ್ಲೂ ಅವರು ಮುಂದು, ತಮ್ಮ ಮನೆಯ ಹಾಗೂ ಕಂಪನಿಯ ಕೆಲಸಗಾರರನ್ನು ಮನೆಯವರಂತೆ ನಡೆಸಿಕೊಳ್ಳುತ್ತಾರೆ. ಅಂಬಾನಿ ಮನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಅವರ ಸಿಬ್ಬಂದಿಗಳಿಗೆ ಮೊದಲು ಆಹ್ವಾನ ನೀಡುತ್ತಾರೆ. ಇದೀಗ ಇಲ್ಲೊಂದು ವೈರಲ್ ಆಗಿರುವ ಪೋಸ್ಟ್ ಕೂಡ ಅಂತಹದೇ. ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷರಾಗಿರುವ ನೀತಾ ಅಂಬಾನಿ ಸಿಬ್ಬಂದಿಯೊಬ್ಬರ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಇದೀಗ ಈ ಪೋಸ್ಟ್ ಎಲ್ಲ ಕಡೆ ವೈರಲ್ ಆಗುತ್ತಿದೆ. ಈ ಪೋಸ್ಟ್ನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಹಿಂದೆಯೂ ನೀತಾ ಅಂಬಾನಿ ಇಂತಹ ವಿಚಾರದಲ್ಲಿ ಭಾರೀ ಸುದ್ದಿಯಾಗಿದ್ದರು.
ಇನ್ಸ್ಟಾಗ್ರಾಮ್ನಲ್ಲಿ ಅಂಬಾನಿ ಫ್ಯಾಮಿಲಿಯ ಅಭಿಮಾನಿಯೊಬ್ಬರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ, ನೀತಾ ಅಂಬಾನಿ ಮತ್ತು ಅವರ ಸಿಬ್ಬಂದಿ ಸದಸ್ಯರು ಚಾಕೊಲೇಟ್ ಕೇಕ್ ಇರಿಸಲಾದ ಮೇಜಿನ ಹಿಂದೆ ನಿಂತಿರುವುದ್ನು ನೋಡಬಹುದು. ಸಿಬ್ಬಂದಿ ನೀತಾ ಅಂಬಾನಿಯ ಸಮ್ಮುಖದಲ್ಲೇ ಕೇಕ್ ಕಟ್ ಮಾಡುತ್ತಾರೆ. ಈ ವೇಳೆ ನೀತಾ ಅಂಬಾನಿ ಸಿಬ್ಬಂದಿಯ ಖುಷಿಯನ್ನು ಕಣ್ತುಂಬಿಕೊಳ್ಳುವುದು ಈ ವಿಡಿಯೋದಲ್ಲಿ ನೋಡಬಹುದು. ಈ ಪೋಸ್ಟ್ನ್ನು ಹುಟ್ಟುಹಬ್ಬ ಆಚರಿಸಿಕೊಂಡ ಸಿಬ್ಬಂದಿಗೂ ಟ್ಯಾಗ್ ಮಾಡಲಾಗಿದೆ. ಪೋಸ್ಟ್ ನೋಡಿ ಸಿಬ್ಬಂದಿ ಹೀಗೆ ಕಮೆಂಟ್ ಮಾಡಿದ್ದಾರೆ. “ನನಗೆ ತುಂಬಾ ಸಂತೋಷವಾಗಿದೆ. ನನ್ನ ಹುಟ್ಟುಹಬ್ಬದ ದಿನ ಮೇಡಂ ಬಂದಿರುವುದಕ್ಕೆ ಧನ್ಯವಾದಗಳು ಮೇಡಂ, ಈ ದಿನವನ್ನು ತುಂಬಾ ವಿಶೇಷ ಮಾಡಿದ್ದಕ್ಕೆ ಕೃತಜ್ಞಳಾಗಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಕ್ಕಳಿಗಾಗಿ ಬಸ್ಸಿನಲ್ಲಿ ಆಟಿಕೆ ಸ್ಟೀರಿಂಗ್ ಅಳವಡಿಸಿದ ಬಸ್ ಚಾಲಕ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಈ ಹಿಂದೆಯೂ ಅವರು ತಮ್ಮ ಸಿಬ್ಬಂದಿಗಳ ಹಾಗೂ ಅವರ ಹುಟ್ಟುಹಬ್ಬವನ್ನು ಸಿಬ್ಬಂದಿಗಳ ಜತೆಗೆ ಆಚರಿಸಿಕೊಂಡ ಎಷ್ಟೋ ವಿಡಿಯೋಗಳು ವೈರಲ್ ಆಗಿತ್ತು. ಇನ್ನು ಈ ವಿಡಿಯೋವನ್ನು ನೋಡಿ ನೆಟ್ಟಿಗರು ಕೂಡ ಕಮೆಂಟ್ ಮಾಡಿದ್ದಾರೆ. ನೀತಾ ಅಂಬಾನಿ ತಮ್ಮ ಸಿಬ್ಬಂದಿಗಳನ್ನು ತುಂಬಾ ಗೌರವಿಸುತ್ತಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಕಂಪನಿಯ ಅಥವಾ ಮನೆಯ ಸಿಬ್ಬಂದಿಗಳನ್ನು ಅವರು ತುಂಬ ಆತ್ಮೀಯವಾಗಿ ಕಾಣುತ್ತಾರೆ. ಯಾವುದೇ ಸಂಭ್ರಮ ಇದ್ರು ಅವರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 am, Mon, 1 December 25




