AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಸ್ನೇಹಿತನ ಅರಶಿನ ಶಾಸ್ತ್ರಕ್ಕೆ ಬ್ಲಿಂಕಿಟ್ ಸಮವಸ್ತ್ರ ಧರಿಸಿ ಹೋದ ಯುವಕ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳನ್ನು ನೋಡಿದಾಗ ನಗು ತಡೆಯೋಕೆ ಆಗಲ್ಲ. ಈ ವಿಡಿಯೋ ನೋಡಿದ್ರೆ ನೀವು ಹೊಟ್ಟೆ ಹುಣ್ಣಾಗುವಂತೆ ನಗ್ತೀರಾ. ಇಲ್ಲೊಬ್ಬ ಯುವಕನು ಸ್ನೇಹಿತನ ಅರಶಿನ ಶಾಸ್ತ್ರಕ್ಕೆ ಬ್ಲಿಂಕಿಟ್ ಸಮವಸ್ತ್ರ ಧರಿಸಿ ಹೋಗಿದ್ದಾನೆ. ಈ ಯುವಕನ ಡ್ರೆಸ್ಸಿಂಗ್‌ ಆಯ್ಕೆಯನ್ನು ಕಂಡು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

Video: ಸ್ನೇಹಿತನ ಅರಶಿನ ಶಾಸ್ತ್ರಕ್ಕೆ ಬ್ಲಿಂಕಿಟ್ ಸಮವಸ್ತ್ರ ಧರಿಸಿ ಹೋದ ಯುವಕ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on: Dec 01, 2025 | 12:47 PM

Share

ಮದುವೆ (marriage) ಎಂದರೆ ಸಂಭ್ರಮ. ಮದ್ವೆ ಶಾಸ್ತ್ರಗಳನ್ನು ಮನೆ ಮಂದಿ ಸಂಭ್ರಮಿಸುವುದನ್ನು ನೀವು ನೋಡಿರುತ್ತೀರಿ. ಈಗಂತೂ ಅರಶಿನ ಶಾಸ್ತ್ರಕ್ಕೆ ಮನೆ ಮಂದಿಯೆಲ್ಲರೂ ಎಲ್ಲೋ ಕಲರ್‌ ಥೀಮ್‌ನಲ್ಲೇ ರೆಡಿ ಆಗ್ತಾರೆ. ಆದರೆ ಇಲ್ಲೊಬ್ಬ ಯುವಕನು ಸ್ನೇಹಿತನ ಹಳದಿ ಶಾಸ್ತ್ರಕ್ಕೆ ಸ್ವಲ್ಪ ಡಿಫರೆಂಟ್ ಆಗಿಯೇ ಬಂದಿದ್ದಾನೆ. ಹಳದಿ ಬಣ್ಣದ ಉಡುಗೆ ಇಲ್ಲವೆಂದು ಬ್ಲಿಂಕಿಟ್ ಸಮವಸ್ತ್ರ ಧರಿಸಿ ಎಂಟ್ರಿ ಕೊಟ್ಟಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಧ್ರುವ್ ಜೈನ್ (Dhruva Jain) ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಹಲ್ದಿಗೆ ಹಳದಿ ಬಣ್ಣವನ್ನು ಧರಿಸಿ ಎಂದು ಅವರು ಹೇಳಿದರು ಎಂಬುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ. ಕೆಲವು ಕ್ಷಣಗಳ ನಂತರ, ಜೈನ್ ಹಳದಿ ಬ್ಲಿಂಕಿಟ್ ಫುಡ್ ಡೆಲಿವರಿ ಏಜೆಂಟ್‌ನ ಟಿ ಶರ್ಟ್ ಧರಿಸಿ ಸ್ಥಳಕ್ಕೆ ಹೋಗುತ್ತಿರುವುದನ್ನು ನೋಡಬಹುದು. ಇತರರು ಸಾಂಪ್ರದಾಯಿಕ ಹಳದಿ ಬಟ್ಟೆಗಳನ್ನು ಧರಿಸಿರುವುದನ್ನು ಕಾಣಬಹುದು. ಈ ಯುವಕ ವಧು ಮತ್ತು ವಧುವಿನ ಬಳಿಗೆ ನಡೆದುಕೊಂಡು ಹೋಗುತ್ತಿದ್ದಂತೆ, ಇಬ್ಬರೂ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದು, ಆ ಬಳಿಕ ಈತನ ಉಡುಗೆ ಕಂಡು ಜೋರಾಗಿ ನಗುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

View this post on Instagram

A post shared by Dhruv Jain (@jain.win_guy)

ಇದನ್ನೂ ಓದಿ:ಪದೇ ಪದೇ ಬಿಸಿನೀರು ಕೇಳಿದ್ದಕ್ಕೆ ವರನನ್ನು ಹುಚ್ಚ ಎಂದ ವಧು: ರಣರಂಗವಾಯಿತು ಮದುವೆ ಮಂಟಪ

ಈ ವಿಡಿಯೋ ಐದು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಸ್ಟ್ ಹಳದಿ ಡ್ರೆಸ್ಸಿಂಗ್ ಅವಾರ್ಡ್ ನಿಮಗೆ ಸಲ್ಲುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಬ್ಲಿಂಕಿಟ್ ಈ ಯುವಕನನ್ನು ಮಾರ್ಕೆಟಿಂಗ್‌ಗೆ ನೇಮಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು, ದುಡ್ಡು ಉಳಿತು, ಕಾರ್ಯಕ್ರಮಕ್ಕೆ ಮಿಸ್ ಮಾಡಿದ್ದಂಗೆ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ