Viral: ಎಂಥಾ ಕಾಲ ಬಂತು ನೋಡಿ… ತಂದೆಯನ್ನೇ ಮದುವೆಯಾದ ಮಗಳು

| Updated By: ಅಕ್ಷತಾ ವರ್ಕಾಡಿ

Updated on: Dec 01, 2024 | 12:26 PM

ತಂದೆ ಮಗಳ ಸಂಬಂಧ ಎನ್ನುವಂತಹದ್ದು ಒಂದು ಪವಿತ್ರವಾದ ಬಂಧ. ಆದ್ರೆ ಇಲ್ಲೊಬ್ಬಳು ಯುವತಿ ತನ್ನ ತಂದೆಯನ್ನೇ ಮದುವೆಯಾಗುವ ಮೂಲಕ ಈ ಪವಿತ್ರ ಸಂಬಂಧಕ್ಕೆ ಕಳಂಕ ತರುವಂತಹ ಕೆಲಸ ಮಾಡಿದ್ದಾಳೆ. ಈ ಮದುವೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯುವತಿಯ ಈ ನಡೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಪವಿತ್ರವಾದ ಸಂಬಂಧಗಳಲ್ಲಿ ತಂದೆ ಮಗಳ ಸಂಬಂಧವೂ ಒಂದು. ಇಂತಹ ಪವಿತ್ರ ಬಂಧಕ್ಕೆ ಯಾರು ಕೂಡಾ ಕಳಂಕ ತರುವಂತಹ ಕೆಲಸ ಮಾಡಲಾರರು. ಆದ್ರೆ ಇಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು, ಯುವತಿಯೊಬ್ಬಳು ತನ್ನ ತಂದೆಯನ್ನೇ ಮದುವೆಯಾಗುವ ಮೂಲಕ ಅಪ್ಪ-ಮಗಳ ಸಂಬಂಧಕ್ಕೆ ಕಳಂಕ ತಂದಿದ್ದಾಳೆ. ಈ ಮದುವೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯುವತಿಯ ಈ ನಡೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಇಲ್ಲೊಂದು ಅಘಾತಕಾರಿ ಘಟನೆ ನಡೆದಿದ್ದು, 24 ರ ಹರೆಯದ ಯುವತಿಯೊಬ್ಬಳು 50 ವರ್ಷ ವಯಸ್ಸಿನ ತನ್ನ ತಂದೆಯನ್ನು ಮದುವೆಯಾಗಿದ್ದಾಳೆ. ಜನರು ನಮ್ಮ ಬೆನ್ನ ಹಿಂದೆ ನಮ್ಮ ಸಂಬಂಧದ ಬಗ್ಗೆ ಸಾವಿರ ಮಾತನಾಡುತ್ತಾರೆ ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲಾ, ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದವರಿಗೆ ನಮ್ಮ ಮದುವೆ ಉತ್ತರವಾಗಿದೆ ಎಂದು ಆಕೆ ಹೇಳಿದ್ದಾಳೆ. ಈ ಯುವತಿ ಯಾರು, ಆಕೆಯ ತಂದೆ ಯಾರು, ಎಲ್ಲಿಂದ ಬಂದವರು ಈ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ಜೈ ಸಿಂಗ್ ಯಾದವ್ (Jaysingh YadavSP) ಎಂಬವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ಆಗುತ್ತಿರುವ ಈ ವಿಡಿಯೋ ಟಿಕ್‌ಟಾಕ್‌ನ ಕ್ಲಿಪ್ ಆಗಿದ್ದು, ಇದು 2020ಕ್ಕೂ ಮುಂಚಿನ ಪ್ರಕರಣ ಎಂದು ಹೇಳಲಾಗುತ್ತಿದೆ. ವಿಡಿಯೋದಲ್ಲಿ ತಂದೆಯನ್ನು ಮದುವೆಯಾದ ಬಳಿಕ ಯುವತಿ ಧೈರ್ಯವಾಗಿ ನನ್ನ ತಂದೆಯನ್ನು ಮದುವೆಯಾಗಿರುವುದಕ್ಕಾಗಿ ಸಂತೋಷವಾಗಿದೆ. ನಮ್ಮ ಸಂಬಂಧ ಏನು ಎಂದು ಜಗತ್ತಿಗೆ ತೋರಿಸಿದ್ದೇವೆ. ನಮ್ಮ ಸಂಬಂಧಕ್ಕೆ ಯಾರೂ ಬೆಂಬಲ ನೀಡಲಿಲ್ಲ. ಆದರೆ ನಾವು ಮದುವೆಯಾಗಿದ್ದೇವೆ ಎಂದು ಹೇಳುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ನಡುರಸ್ತೆಯಲ್ಲೇ ಅಪ್ಪ ಮಗಳ ಕ್ಯೂಟ್ ಡಾನ್ಸ್, ಎಷ್ಟು ಚೆಂದ ನೋಡಿ

ನವೆಂಬರ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಅವರೆಲ್ಲ ವೈರಲ್ ಆಗಲು ರೀಲ್ಸ್ ಮಾಡುತ್ತಾರೆ, ವಾಸ್ತವದಲ್ಲಿ ಈ ರೀತಿ ಏನೂ ನಡೆದಿರುವುದಿಲ್ಲ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ ನಿಮ್ಮಂಥವರು ಸಮಾಜಕ್ಕೆ ಕಳಂಕ’ ಎಂದು ಕಿಡಿ ಕಾರಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ