Viral: ಥ್ಯಾಂಕ್ಸ್ ಗಿವಿಂಗ್ ಹಬ್ಬದ ಸಲುವಾಗಿ ಟಾಯ್ಲೆಟ್ ಬೇಸಿನ್ನಲ್ಲಿ ಕೋಳಿ ಭಕ್ಷ್ಯ ತಯಾರಿಸಿದ ಯುವತಿ; ವಿಡಿಯೋ ವೈರಲ್
ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಬಗೆಯ ಚಿತ್ರ ವಿಚಿತ್ರ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಥ್ಯಾಂಕ್ಸ್ ಗಿವಿಂಗ್ ಹಬ್ಬಕ್ಕೆ ಯುವತಿಯೊಬ್ಬಳು ಟಾಯ್ಲೆಟ್ ಬೇಸಿನ್ ಅಲ್ಲಿ ಟರ್ಕಿ ಕೋಳಿಯ ಭಕ್ಷ್ಯವನ್ನು ತಯಾರಿಸಿದ್ದಾಳೆ. ಈಕೆಯ ಈ ಅವಸ್ಥೆಗೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಯುರೋಪ್ ಸೇರಿದಂತೆ ಇನ್ನಿತರ ಫಾರಿನ್ ದೇಶಗಳಲ್ಲಿ ಥ್ಯಾಂಕ್ಸ್ ಗಿವಿಂಗ್ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದಿನ ವರ್ಷದಲ್ಲಿ ಉತ್ತಮ ಬೆಳೆಯನ್ನು ನೀಡಿದ ದೇವರಿಗೆ ಧನ್ಯವಾದಗಳನ್ನು ಅರ್ಪಿಸುವ ಸಲುವಾಗಿ ಈ ಸುಗ್ಗಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಹಬ್ಬದಲ್ಲಿ ವಿಶೇಷವಾಗಿ ಟರ್ಕಿ ಕೋಳಿಯೊಳಗೆ ಮಸಾಲೆಗಳೊಂದಿಗೆ ಹಿಸುಕಿದ ಆಲೂಗಡ್ಡೆ ಇತರೆ ಮಸಾಲೆ ಪದಾರ್ಥಗಳನ್ನು ತುಂಬಿಸಿ ಮ್ಯಾರಿನೇಡ್ ಮಾಡಿ ಭಕ್ಷ್ಯವನ್ನು ತಯಾರಿಸಲಾಗುತ್ತದೆ. ಇಲ್ಲೊಬ್ಬಳು ಯುವತಿ ಈ ಭಕ್ಷ್ಯವನ್ನು ಟಾಯ್ಲೆಟ್ ಬೇಸಿನ್ ಅಲ್ಲಿ ತಯಾರಿಸಿದ್ದಾಳೆ. ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಥ್ಯಾಂಕ್ಸ್ ಗಿವಿಂಗ್ ಹಬ್ಬದಲ್ಲಿ ಥ್ಯಾಂಕ್ಸಿ ವಿಂಗ್ ಎಂಬ ಟರ್ಕಿ ಕೋಳಿಯ ಭಕ್ಷ್ಯವನ್ನು ಮಾಡುವಂತಹ ಸಂಪ್ರದಾಯವಿದೆ. ಈ ಬಾರಿಯ ಹಬ್ಬಕ್ಕೆ ಇನ್ಫ್ಲುಯೆನ್ಸರ್ ಕೇಟ್ ಹೆಂಟ್ಜೆಲ್ಮನ್ ಟಾಯ್ಲೆಟ್ ಬೇಸಿನ್ನಲ್ಲಿ ಈ ರೆಸಿಪಿಯನ್ನು ತಯಾರಿಸಿದ್ದಾಳೆ.
ಈ ಕುರಿತ ವಿಡಿಯೋವನ್ನು ಕೇಟ್ ಹೆಂಟ್ಜೆಲ್ಮನ್ (katewilltryanything) ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆಕೆ ಟಾಯ್ಲೆಟ್ ಬೇಸಿನ್ ನಲ್ಲಿಯೇ ಟರ್ಕಿ ಕೋಳಿಯನ್ನಿಟ್ಟು ಅದರೊಳಗೆ ಟೊಮ್ಯಾಟೋ, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ತುಂಬಿಸಿ ಅದರ ಮೇಲೆ ಮಸಾಲೆ ತುಂಬಿಸುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಎಂಥಾ ಕಾಲ ಬಂತು ನೋಡಿ… ತಂದೆಯನ್ನೇ ಮದುವೆಯಾದ ಮಗಳು
ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 7.1 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದನ್ನು ಶೌಚಾಲಯದಲ್ಲಿ ಮಾಡುವ ಅವಶ್ಯಕತೆ ಏನಿತ್ತು’ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಎಷ್ಟೋ ಜನರಿಗೆ ಆಹಾರದ ಅವಶ್ಯಕತೆ ಇರುವ ಈ ಸಮಯದಲ್ಲಿ ನೀವು ಆಹಾರವನ್ನು ಏಕೆ ವ್ಯರ್ಥ ಮಾಡುತ್ತಿದ್ದೀರಿ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ