Viral: ಮೆಟ್ರೋದಲ್ಲಿ ಸೀಟ್ ಸಿಕ್ಕಿಲ್ಲ ಎಂದು ಟೆನ್ಶನ್ ಯಾಕೆ, ಈ ರೀತಿ ಟ್ರಿಕ್ಸ್ ಪಕ್ಕಾ ವರ್ಕ್ ಆಗುತ್ತೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 04, 2025 | 3:14 PM

ಬಸ್ಸು, ರೈಲು ಹಾಗೂ ಮೆಟ್ರೋಗಳಲ್ಲಿ ಸೀಟಿಗಾಗಿ ಪ್ರಯಾಣಿಕರ ನಡುವೆ ನಡೆಯುವ ಜಗಳದ ಬಗ್ಗೆ ಹೇಳಿ ಪ್ರಯೋಜನವಿಲ್ಲ. ಕೆಲವೊಮ್ಮೆ ಈ ಜಗಳಗಳು ತಾರಕಕ್ಕೆ ಏರಿ ಹೊಡೆದಾಟದಲ್ಲೇ ಅಂತ್ಯವಾಗುತ್ತದೆ. ಆದರೆ ಇದೀಗ ರೆಡ್ಡಿಟ್ ಬಳಕೆದಾರರೊಬ್ಬರು, ದೆಹಲಿ ಮೆಟ್ರೋದಲ್ಲಿ ಸೀಟು ಗಿಟ್ಟಿಸಿಕೊಳ್ಳಲು ಬೆಸ್ಟ್ ಐಡಿಯಾ ಹಾಗೂ ಟ್ರಿಕ್ಸ್ ಇದ್ದರೆ ತಿಳಿಸಿ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಶೇರ್ ಮಾಡಿಕೊಳ್ಳುತ್ತಿದ್ದಂತೆ ಬಳಕೆದಾರರು ತರಹೇವಾರಿ ಕಾಮೆಂಟ್ ಗಳ ಮೂಲಕ ತಮ್ಮ ಐಡಿಯಾಗಳನ್ನು ತಿಳಿಸಿದ್ದಾರೆ.

Viral: ಮೆಟ್ರೋದಲ್ಲಿ ಸೀಟ್ ಸಿಕ್ಕಿಲ್ಲ ಎಂದು ಟೆನ್ಶನ್ ಯಾಕೆ, ಈ ರೀತಿ ಟ್ರಿಕ್ಸ್ ಪಕ್ಕಾ ವರ್ಕ್ ಆಗುತ್ತೆ
Trending News
Follow us on

ಮೆಟ್ರೋ (metro) ಜನರ ಜೀವನದ ಭಾಗವಾಗಿದೆ. ದೆಹಲಿ (dehli) ಯಂತಹ ದೊಡ್ಡ ದೊಡ್ಡ ನಗರಗಳಲ್ಲಿ ದೈನಂದಿನ ಓಡಾಟಕ್ಕಾಗಿ ಹೆಚ್ಚಿನವರು ಈ ಮೆಟ್ರೋವನ್ನೇ ಅವಲಂಬಿಸಿರುತ್ತಾರೆ. ಅದರಲ್ಲಿಯೂ ಈ ದೆಹಲಿ ಮೆಟ್ರೋದಲ್ಲಿ ಮಾತ್ರ ಕಿಕ್ಕಿರಿದ ಜನಸಾಗರದಲ್ಲಿ ಉಸಿರಾಡಲು ಕಷ್ಟ ಎನ್ನುವಂತಾಗುತ್ತದೆ. ಇನ್ನು ಸೀಟು ಗಿಟ್ಟಿಸಿಕೊಳ್ಳುವುದು ದೂರದ ಮಾತು ಬಿಡಿ. ಆದರೆ ಇದೀಗ ರೆಡ್ಡಿಟ್ (reddit) ನಲ್ಲಿ ಬಳಕೆದಾರರೊಬ್ಬರು, ದೆಹಲಿ ಮೆಟ್ರೋದಲ್ಲಿ ಸೀಟು ಗಿಟ್ಟಿಸಿಕೊಳ್ಳುವ ಟ್ರಿಕ್ಸ್ ಕೇಳಿದ್ದಾರೆ. ಇದಕ್ಕೆ ನೂರಾರು ಸಲಹೆಗಳೊಂದಿಗೆ ಕೆಲವರು ಯಾರು ಕೂಡ ಊಹೆ ಮಾಡದ ಟ್ರಿಕ್ಸ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

r/dehli ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬಳಕೆದಾರರೊಬ್ಬರು, ‘ಜನಜಂಗುಳಿ ಇರುವ ದೆಹಲಿ ಮೆಟ್ರೋದಲ್ಲಿ ಸೀಟು ಪಡೆಯಲು ಸುಲಭ ಉಪಾಯಗಳು ಹಾಗೂ ಟ್ರಿಕ್ಸ್ ಗಳು’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಶೇರ್ ಮಾಡಿದ ಕ್ಷಣಾರ್ಧದಲ್ಲಿ ನೆಟ್ಟಿಗರು ಸಲಹೆಗಳನ್ನು ಹೇಳಲು ಶುರು ಮಾಡಿದ್ದಾರೆ. ಹೌದು, ಒಬ್ಬ ಬಳಕೆದಾರರು, ‘ಅಳುವುದಕ್ಕೆ ಪ್ರಾರಂಭಿಸಿ, ಇದು ಎಲ್ಲಾ ಸಮಯದಲ್ಲಿ ಕೆಲಸ ಮಾಡುತ್ತದೆ’ ಎಂದಿದ್ದಾರೆ. ಇನ್ನೊಬ್ಬರು, ‘ಭಾವನಾತ್ಮಕ ತಂತ್ರಗಳು ಇಲ್ಲಿ ನೂರಕ್ಕೆ ನೂರರಷ್ಟು ಕೆಲಸ ಮಾಡಬಹುದು’ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಆಹಾ! ಈ ಒಂದೂವರೆ ವರ್ಷದ ಪುಟಾಣಿ ಬಾಯಿಂದ ಎಬಿಸಿಡಿ ಕೇಳುವುದೇ ಎಷ್ಟು ಚಂದ ಅಲ್ವಾ

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ

ಮತ್ತೊಬ್ಬರು, ‘ನೀವು ಗಮನಿಸಿದ್ದೀರಬಹುದು, ವೃದ್ಧರು ದೀರ್ಘಕಾಲ ಪ್ರಯಾಣ ಮಾಡಲಾರರು. ಇನ್ನು ವಿದ್ಯಾರ್ಥಿಗಳು ಕ್ರಾಸ್ ರೋಡ್ ನಿಲ್ದಾಣಗಳಲ್ಲಿಯೇ ಹೆಚ್ಚು ಇಳಿಯುತ್ತಾರೆ. ಅದಲ್ಲದೇ ಕೆಲವರು ಇಯರ್ ಫೋನ್, ಪುಸ್ತಕಗಳನ್ನು ಬ್ಯಾಗ್ ಯೊಳಗೆ ಇಡುತ್ತಿದ್ದರೆ ಅವರದ್ದು ಮುಂದಿನ ನಿಲ್ದಾಣ ಎನ್ನುವುದು ತಿಳಿಯುತ್ತದೆ. ಈ ವೇಳೆಯಲ್ಲಿ ಅವರ ಬಳಿಯೇ ಹೋಗಿ ನಿಂತುಕೊಳ್ಳಿ, ನಿಮಗೆ ನೂರಕ್ಕೆ ನೂರು ಶೇಕಡಾ ಸೀಟ್ ಸಿಗುತ್ತದೆ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ವಾಂತಿ ಬಂದರೆ ನಟಿಸಿ ಮೂರ್ಛೆ ಹೋಗಿ, ತುರ್ತು ಆರೋಗ್ಯ ಸ್ಥಿತಿಯಿಂದಾಗಿ ನಿಮಗೆ ಸೀಟು ಖಾತರಿಯಾಗುತ್ತದೆ’ ಎಂದು ತಿಳಿಸಿದ್ದಾರೆ. ಕೆಲವರು, ‘ನಿಮ್ಮ ಎದುರಿಗಿರುವ ವ್ಯಕ್ತಿಯ ಬಳಿ ಯಾವ ನಿಲ್ದಾಣದಲ್ಲಿ ಇಳಿದು ಹೋಗುತ್ತೀರಿ ಎಂದು ಕೇಳಿ ಕನ್ಫರ್ಮ್ ಮಾಡಿಕೊಳ್ಳಿ’ ಎಂದರೆ, ಅನೇಕರು, ‘ಸೀಟಿಗಾಗಿ ಜಗಳ ಮಾಡಲು ಆರಂಭಿಸಿ’ ಹೀಗೆ ನೂರಾರು ಸಲಹೆಗಳನ್ನು ನೀಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ