AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಆಹಾ! ಈ ಒಂದೂವರೆ ವರ್ಷದ ಪುಟಾಣಿ ಬಾಯಿಂದ ಎಬಿಸಿಡಿ ಕೇಳುವುದೇ ಎಷ್ಟು ಚಂದ ಅಲ್ವಾ

ಮಕ್ಕಳು ಏನು ಮಾಡಿದರೂ ಕೂಡ ಚಂದನೇ, ಮಕ್ಕಳ ತರಲೆ ತುಂಟಾಟಗಳನ್ನು ಕಣ್ತುಂಬಿಕೊಳ್ಳುವುದೇ ಖುಷಿ. ಈ ಪುಟಾಣಿ ಮಕ್ಕಳಿಗೆ ಸಂಬಂಧಿಸಿದ ಮುದ್ದು ಮುದ್ದಾದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತದೆ. ಇದೀಗ ವೈರಲ್ ವಿಡಿಯೋದಲ್ಲಿ ಒಂದೂವರೆ ವರ್ಷದ ಪುಟಾಣಿ ಕಂದಮ್ಮ ಇಂಗ್ಲೀಷ್ ಅಕ್ಷರಮಾಲೆಗಳನ್ನು ಸಲೀಸಾಗಿ ಓದುತ್ತಿದೆ. ಪುಟಾಣಿ ಮಗುವಿನ ಸ್ಪಷ್ಟ ಉಚ್ಚರಣೆ ಸೋಶಿಯಲ್ ಮೀಡಿಯಾ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Viral : ಆಹಾ! ಈ ಒಂದೂವರೆ ವರ್ಷದ ಪುಟಾಣಿ ಬಾಯಿಂದ ಎಬಿಸಿಡಿ ಕೇಳುವುದೇ ಎಷ್ಟು ಚಂದ ಅಲ್ವಾ
ವೈರಲ್​​ ವಿಡಿಯೋ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on:Apr 04, 2025 | 2:14 PM

Share

ಪುಟಾಣಿ ಮಕ್ಕಳ (little kids) ಮುದ್ದು ಮುದ್ದಾದ ಮುಗ್ಧ ಮಾತು ನೋಡುವುದೇ ಖುಷಿ ಕೊಡುತ್ತದೆ. ಈ ಜಗತ್ತಿನ ಯಾವ ಪರಿವೆ ಇಲ್ಲದೇ ಅವರಿಗೆ ತೋಚಿದ್ದನ್ನು ಮಾಡುವ, ಹೇಳುವ, ತುಂಟಾವಾಡುವ ಪುಟಾಣಿ ಕಂದಮ್ಮ (kids) ಮನೆಯಲ್ಲಿದ್ದರೆ ಅದಕ್ಕಿಂತ ಇನ್ನೇನು ಬೇಕು. ಅದರಲ್ಲಿಯೂ ಈಗಿನ ಕಾಲದ ಮಕ್ಕಳು ಯಾವುದರಲ್ಲಿ ಕಮ್ಮಿ ಹೇಳಿ, ಎಲ್ಲವನ್ನು ಸಲೀಸಾಗಿ ಕಲಿತು ಬಿಡುವ ಮಕ್ಕಳ ಬುದ್ಧಿವಂತಿಕೆ (Intelligent) ಗೆ ಒಂದು ಕ್ಷಣ ತಲೆಬಾಗಲೇಬೇಕು. ಇದಕ್ಕೆ ಈ ವಿಡಿಯೋ ಸಾಕ್ಷಿ ಎನ್ನುವಂತಿದ್ದು, ಇದರಲ್ಲಿ ಒಂದರಿಂದ ಒಂದೂವರೆ ವರ್ಷದೊಳಗಿನ ಮಗುವೊಂದು ಇಂಗ್ಲಿಷ್ ವರ್ಣಮಾಲೆ (English alphabet) ಯ ಅಕ್ಷರ (letters) ಗಳನ್ನು ಗುರುತಿಸಿ ತಪ್ಪಿಲ್ಲದೇ ಉಚ್ಚರಿಸುತ್ತಿದೆ. ಈ ವಿಡಿಯೋ ನೆಟ್ಟಿಗರ ಮನಸ್ಸು ಗೆದ್ದು ಕೊಂಡಿದ್ದು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

Bestchinesevideo ಹೆಸರಿನ ಖಾತೆಯಲ್ಲಿ ಪುಟಾಣಿ ಕಂದಮ್ಮನ ವಿಡಿಯೋ ಹಂಚಿಕೊಳ್ಳಲಾಗಿದೆ. ಒಂದೂವರೆ ವರ್ಷದೊಳಗಿನ ಪುಟಾಣಿ ಮಗುವೊಂದು ಕುಳಿತಿದ್ದು ಅದರ ಮುಂದೆ ಪುಸ್ತಕವನ್ನು ಇಡಲಾಗಿದೆ. ಮಗುವಿನ ಮುಂದಿರುವ ಪುಸ್ತಕದಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಒಂದೊಂದಾಗಿ ಬರೆಯಲಾಗುತ್ತಿದೆ. ಮಗು ಅದನ್ನು ಸೂಕ್ಷ್ಮವಾಗಿ ಗಮನಿಸಿ ತಪ್ಪಿಲ್ಲದೇ ಉಚ್ಚರಿಸುತ್ತಿದೆ. ಈ ವಿಡಿಯೋದಲ್ಲಿ ಎ, ಸಿ, ಒ, ಎಂ, ಪಿ, ಬಿ, ಡಿ, ಇ, ಎಫ್ ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿದ್ದು ಎಲ್ಲವನ್ನು ತಪ್ಪಿಲ್ಲದೇ ಸ್ಪಷ್ಟವಾಗಿ ಉಚ್ಚರಿಸುತ್ತಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು

ಇದನ್ನೂ ಓದಿ: ಅಡುಗೆಮನೆ ಗೋಡೆ ಏರಿ ಮನೆಯೊಳಗೆ ಬರಲು ಪ್ರಯತ್ನಿಸುತ್ತಿರುವ ಸಿಂಹ, ಎದೆ ಝಲ್ಲೆನಿಸುತ್ತೆ ಈ ದೃಶ್ಯ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಈ ಪುಟಾಣಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಇದು ನಿಜವಾಗಿಯೂ ಬುದ್ಧಿವಂತ ಮಗು’ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ನಮ್ಮ ಮನೆಯ ಪಕ್ಕದ ಮನೆಯಲ್ಲಿ ಒಂದು ಮಗುವಿದೆ. ಅದಕ್ಕೆ ಮೂರು ವರ್ಷವಾಗಿದ್ದರೂ ಒಂದು ಪದವನ್ನು ಉಚ್ಚರಿಸುವುದಿಲ್ಲ’ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. ಇನ್ನೊಬ್ಬರು, ‘ಈ ಮಗು ತಾಯಿಯ ಗರ್ಭದಲ್ಲಿರುವಾಗಲೇ ಎಬಿಸಿಡಿ ಕಲಿತಂತೆ ಕಾಣುತ್ತಿದೆ’ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Fri, 4 April 25