AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅಡುಗೆಮನೆ ಗೋಡೆ ಏರಿ ಮನೆಯೊಳಗೆ ಬರಲು ಪ್ರಯತ್ನಿಸುತ್ತಿರುವ ಸಿಂಹ, ಎದೆ ಝಲ್ಲೆನಿಸುತ್ತೆ ಈ ದೃಶ್ಯ

ಕ್ರೂರ ಕಾಡು ಪ್ರಾಣಿಗಳು ಅರಸಿಕೊಂಡು ನಾಡಿಗೆ ಬರುತ್ತಿರುತ್ತವೆ. ಇದೇ ವೇಳೆಯಲ್ಲಿ ಜನರ ಮೇಲೆ ದಾಳಿ ನಡೆಸಿರುವಂತಹ ಅದೆಷ್ಟೋ ಸುದ್ದಿಗಳನ್ನು ಆಗಾಗ ಕೇಳಿರುತ್ತಿರುತ್ತೇವೆ. ಇದೀಗ ಆಹಾರ ಅರಸಿ ನಾಡಿಗೆ ಬಂದ ಸಿಂಹವೊಂದು ಮನೆಯೊಂದರ ಒಳಗೆ ನುಗ್ಗಿ ಅಡುಗೆ ಮನೆಯ ಗೋಡೆಯ ಮೇಲೆ ಕುಳಿತಿರುವ ದೃಶ್ಯವೊಂದು ವೈರಲ್ ಆಗಿದೆ. ಈ ವಿಡಿಯೋ ಎಲ್ಲರನ್ನು ಭಯಭೀತರನ್ನಾಗಿಸಿದ್ದು, ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

Viral: ಅಡುಗೆಮನೆ ಗೋಡೆ ಏರಿ ಮನೆಯೊಳಗೆ ಬರಲು ಪ್ರಯತ್ನಿಸುತ್ತಿರುವ ಸಿಂಹ, ಎದೆ ಝಲ್ಲೆನಿಸುತ್ತೆ ಈ ದೃಶ್ಯ
ವೈರಲ್​​ ವಿಡಿಯೋ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 04, 2025 | 12:40 PM

Share

ಗುಜರಾತ್, ಏಪ್ರಿಲ್ 4: ಕಾಡಿನ ರಾಜ ಸಿಂಹ (lion) ಈ ಹೆಸರು ಕೇಳಿದರೇನೇ ಮೈ ಎಲ್ಲಾ ನಡುಕ ಶುರುವಾಗುತ್ತದೆ. ಒಂದು ಕ್ಷಣ ಘರ್ಜನೆ ಕೇಳಿದರೆ ಸಾಕು ಎದೆ ಬಡಿತ ಜೋರಾಗುತ್ತದೆ. ಹೌದು, ಬಲಿಷ್ಟ ಪ್ರಾಣಿಯೆನಿಸಿರುವ ಸಿಂಹವು ಬೇಟೆಗಾಗಿ ಇತರ ಪ್ರಾಣಿಗಳ ದಾಳಿ (attack) ಮಾಡುವ ವಿಡಿಯೋಗಳು ಆಗಾಗ ಗಮನ ಸೆಳೆಯುತ್ತಿರುತ್ತವೆ. ಈ ಸಿಂಹ ನಿಮ್ಮ ಎದುರಿಗೆ ಬಂದು ಕುಳಿತರೆ ಹೇಗಿರಬಹುದು ಊಹಿಸಿಕೊಳ್ಳಿ. ಆ ಕ್ಷಣವನ್ನು ಊಹಿಸಿಕೊಂಡರೆ ಬಾಯಿಂದ ಮಾತೇ ಬರುವುದಿಲ್ಲ. ಆದರೆ ಈ ವಿಡಿಯೋದಲ್ಲಿ ಮನೆಯೊಂದರ ಅಡುಗೆ ಮನೆಯ ಗೋಡೆಯ ಮೇಲೆ ಅಡಗಿ ಕುಳಿತುಕೊಂಡಿದೆ. ಗುಜರಾತ್‌ (gujarat) ನ ಅಮ್ರೇಲಿ (amreli) ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮನೆಯಲ್ಲಿ ವಾಸವಿದ್ದವರು ಈ ಭಯಾನಕ ದೃಶ್ಯ ನೋಡಿ ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ.

Wildfreelions ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಅಡುಗೆ ಮನೆಯ ಗೋಡೆಯ ಮೇಲೆ ಕುಳಿತ ಸಿಂಹದ ಮೇಲೆ ಟಾರ್ಜ್ ಬೆಳಕನ್ನು ಹಾಕುತ್ತಿರುವುದನ್ನು ಕಾಣಬಹುದು. ಕತ್ತಲಲ್ಲಿ ಸಿಂಹದ ಕಣ್ಣುಗಳು ಫಳಫಳನೇ ಮಿಂಚುತ್ತಿದೆ. ಅಡುಗೆ ಮನೆಯ ಗೋಡೆಯ ಮೇಲಿಂದ ನುಸುಳುತ್ತಾ ಮನೆಯೊಳಗೆ ಪ್ರಯತ್ನಿಸುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
Image
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
Image
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವರದಿಯ ಪ್ರಕಾರ, ಈ ಸಿಂಹವು ಪಕ್ಕದ ಕಾಡಿನಿಂದ ಆಹಾರ ಅರಸಿಕೊಂಡು ಬಂದಿದ್ದು ಜನರ ಕಂಡು ಭಯಗೊಂಡು ಅಡುಗೆ ಮನೆಯ ಗೋಡೆಯ ಮೇಲಿಂದ ಮನೆಯೊಳಗೆ ಬರಲು ಪ್ರಯತ್ನಿಸಿದೆ. ಆದರೆ ಈ ಸಿಂಹವು ಯಾರ ಮೇಲೂ ದಾಳಿ ಮಾಡದೇ ಮರಳಿ ಕಾಡಿಗೆ ತೆರಳಿದೆ ಎಂದು ತಿಳಿದು ಬಂದಿದೆ. ಈ ವಿಡಿಯೋವು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: ಎಐ ಘಿಬ್ಲಿಗೆ ವೈಯುಕ್ತಿಕ ಫೋಟೋ ಅಪ್‌ಲೋಡ್ ಮಾಡ್ತಿದ್ದೀರಾ? ಇದು ಎಷ್ಟು ಸೇಫ್? ಇಲ್ಲಿದೆ ತಜ್ಞರ ಎಚ್ಚರಿಕೆ

ಬಳಕೆದಾರರೊಬ್ಬರು, ‘ಸಿಂಹದ ಎದುರಿಗೆ ನಿಂತು ಅದರ ಮುಖಕ್ಕೆ ಟಾರ್ಚ್ ಹಾಕುವುದಕ್ಕೂ ಗುಂಡಿಗೆ ಬೇಕು ಎಂದಿದ್ದಾರೆ. ಮತ್ತೊಬ್ಬರು, ‘ಇದು ನಿಜಕ್ಕೂ ಅಪಾಯಕಾರಿಯಾಗಿದೆ’ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. ಮತ್ತೊಬ್ಬರು, ‘ಕಾಡು ಪ್ರಾಣಿಗಳು ನಾಡಿಗೆ ಬರುವ ಸಂಖ್ಯೆ ಹೆಚ್ಚಾಗಿದೆ. ಈ ಪ್ರಾಣಿಗಳ ಸುರಕ್ಷತೆಯೊಂದಿಗೆ ಜನರ ಸುರಕ್ಷತೆಗೂ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ’ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ