AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಅದು ನಮ್ಮ ತಪ್ಪು, ನಾವೇ ಜವಾಬ್ದಾರಿ ಹೊರುತ್ತೇವೆ : 70 ಉದ್ಯೋಗಿಗಳಿಗೆ ಹೊಸ ಉದ್ಯೋಗ ನೀಡಿದ ಬೆಂಗಳೂರಿನ ಸಿಇಒ

ಸೋಶಿಯಲ್ ಮೀಡಿಯಾದಲ್ಲಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರು ಹಂಚಿಕೊಳ್ಳುವ ಸ್ಟೋರಿಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ಪೋಸ್ಟ್ ನಲ್ಲಿ ಬೆಂಗಳೂರು ಮೂಲದ ಸಿಇಒ ಒಬ್ಬರು, ತಮ್ಮ ಕಂಪನಿಯು 70 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದ ವೇಳೆಯಲ್ಲಿ ತಮಗಾದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ತಾವು ಅವರಿಗೆ ಬೇರೆ ಉದ್ಯೋಗ ಹುಡುಕಲು ಸಹಾಯ ಮಾಡಿರುವ ಬಗ್ಗೆ ಉಲ್ಲೇಖಿಸಿದ್ದು, ಈ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Viral : ಅದು ನಮ್ಮ ತಪ್ಪು, ನಾವೇ ಜವಾಬ್ದಾರಿ ಹೊರುತ್ತೇವೆ : 70 ಉದ್ಯೋಗಿಗಳಿಗೆ ಹೊಸ ಉದ್ಯೋಗ ನೀಡಿದ ಬೆಂಗಳೂರಿನ ಸಿಇಒ
ಹರ್ಷ್ ಪೋಖರ್ಣ
ಸಾಯಿನಂದಾ
| Edited By: |

Updated on: Apr 03, 2025 | 5:28 PM

Share

ಬಹುತೇಕ ಐಟಿ ಬಿಟಿ ಸಂಸ್ಥೆಗಳು, ಖಾಸಗಿ ಕಂಪೆನಿ (Private Company) ಗಳು ಏಕಾಏಕಿ ಸಂಸ್ಥೆಯಲ್ಲಿರುವ ಕೆಲಸಗಾರರನ್ನು ಅಮಾನತು ಮಾಡುವ ಕೆಲಸಕ್ಕೆ ಕೈ ಹಾಕುತ್ತಾರೆ. ಕಂಪೆನಿಯ ಈ ರೀತಿ ನಿರ್ಧಾರಗಳಿಂದ ಉದ್ಯೋಗಸ್ಥರಲ್ಲಿ ಮುಂದೇನು ಎನ್ನುವ ಪ್ರಶ್ನೆಯೊಂದು ಕಾಡುತ್ತದೆ. ಈ ವೇಳೆಯಲ್ಲಿ ಕಂಪನಿಗಳು ಉದ್ಯೋಗಗಿಗಳ ಭವಿಷ್ಯದ ಬಗ್ಗೆ ಯೋಚಿಸುವುದು ತೀರಾ ಕಡಿಮೆಯೇ ಎನ್ನಬಹುದು. ಆದರೆ ಇದೀಗ ಬೆಂಗಳೂರಿ (Bengaluru) ನ ಓಕ್‌ಕ್ರೆಡಿಟ್‌ನ ಸಿಇಒ ಮತ್ತು ಸಂಸ್ಥಾಪಕ ಹರ್ಷ್ ಪೋಖರ್ಣ (OKCredit CEO and founder Harsh Pokharna) ಕನಿಷ್ಠ 70 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದು, ಈ ಪ್ರಕ್ರಿಯೆಯೂ ಎಷ್ಟು ಕಷ್ಟ ಇತ್ತು ಎಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವಿವರಿಸಿದ್ದಾರೆ. ಈ ವೇಳೆಯಲ್ಲಿ ಕೆಲಸದಿಂದ ಅಮಾನತುಗೊಂಡ ಕೆಲಸಗಾರರಿಗೆ ಯಾವ ರೀತಿ ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿದೆ ಎಂದು ವಿವರಿಸಿದ್ದಾರೆ.

ಹೌದು, ಬೆಂಗಳೂರು ಮೂಲದ ಸಿಇಒ ಹರ್ಷ್ ಪೋಖರ್ಣ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, 18 ತಿಂಗಳ ಹಿಂದೆ, ನಾವು ಸರಿಸುಮಾರು 70 ಜನರನ್ನು ಕೆಲಸದಿಂದ ತೆಗೆದುಹಾಕಿದ್ದೇವೆ. ಆ ಪ್ರಕ್ರಿಯೆ ಹೇಗಿತ್ತು, ಅದಕ್ಕಾಗಿ ನಾವೆಲ್ಲರೂ ತುಂಬಾ ಕೆಲಸ ಮಾಡಿದ್ದೇವೆ. ಅವಮಾತುಗೊಂಡವರು ಬೇರೆ ಕಂಪೆನಿಗಳಲ್ಲಿ ವೇಗವಾಗಿಯೇ ನೇಮಕಗೊಂಡಿದ್ದಾರೆ. ಅದು ನನ್ನ ತಪ್ಪು, ಒಬ್ಬ ಸಂಸ್ಥಾಪಕನಾಗಿ ನಾನು ಮಾಡಿದ ಅತ್ಯಂತ ಕಠಿಣ ಕೆಲಸಗಳಲ್ಲಿ ಇದು ಒಂದಾಗಿದೆ. ಆದರೆ ನಾನು ಅದನ್ನು ಸರಿಯಾದ ರೀತಿಯಲ್ಲಿ ಮಾಡಲು ಪ್ರಯತ್ನಿಸಿದ್ದೇನೆ. ನಾವು 70 ಉದ್ಯೋಗಿಗಳಲ್ಲಿ ಪ್ರತಿಯೊಬ್ಬರಿಯೊಂದಿಗೆ ಸಂಭಾಷಣೆ ನಡೆಸಿ ಅವರನ್ನು ಏಕೆ ಕೆಲಸದಿಂದ ತೆಗೆದುಹಾಕಬೇಕಾಯಿತು ಎಂಬುದನ್ನು ವಿವರವಾಗಿ ವಿವರಿಸಿದ್ದೇವೆ.

ವೈರಲ್​​​ ಪೋಸ್ಟ್​​ ಇಲ್ಲಿದೆ ನೋಡಿ:

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
Image
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
Image
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ನಾವು ಅವರಿಗೆ 3 ತಿಂಗಳ ನೋಟಿಸ್ ನೀಡಿದ್ದು, ನೋಟಿಸ್ ಅವಧಿ ಮುಗಿಯುವ ಮೊದಲು 67 ಉದ್ಯೋಗಿಗಳು ಬೇರೆ ಕಂಪೆನಿಗಳಲ್ಲಿ ಉದ್ಯೋಗ ಪಡೆಯುವಂತೆ ಮಾಡಿದ್ದೆವು. ಇನ್ನು ಕೆಲಸ ಸಿಗದ ಮೂವರಿಗೆ ಎರಡು ತಿಂಗಳ ಹೆಚ್ಚುವರಿ ಸಂಬಳವನ್ನು ನೀಡಿದ್ದೇವೆ. ನೀವು ಯಾರನ್ನಾದರೂ ನೇಮಿಸಿಕೊಳ್ಳುವಾಗ ಅವರನ್ನು ನಿಮ್ಮ ಕುಟುಂಬ ಎಂದು ಭಾವಿಸಿದರೆ, ಅವರು ಉದ್ಯೋಗದಿಂದ ತೆಗೆಯುವಾಗ ಅವರನ್ನು ನಿಮ್ಮ ಕುಟುಂಬದವರಂತೆ ನೋಡಿಕೊಳ್ಳಿ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಎಐ ಘಿಬ್ಲಿಗೆ ವೈಯುಕ್ತಿಕ ಫೋಟೋ ಅಪ್‌ಲೋಡ್ ಮಾಡ್ತಿದ್ದೀರಾ? ಇದು ಎಷ್ಟು ಸೇಫ್? ಇಲ್ಲಿದೆ ತಜ್ಞರ ಎಚ್ಚರಿಕೆ

ಏಪ್ರಿಲ್ 2 ರಂದು ಲಿಂಕ್ಡ್‌ಇನ್‌ನಲ್ಲಿ ಶೇರ್ ಮಾಡಲಾದ ಪೋಸ್ಟ್ ವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ವ್ಯವಹಾರದಲ್ಲಿ ತಪ್ಪುಗಳು ಸಂಭವಿಸುವುದು ಸಹಜ. ಆದರೆ ಸಿಇಒ ಹಾಗೂ ಕಂಪನಿಯ ಮೇಲೆ ನಂಬಿಕೆ ಇಡುವ ಉದ್ಯೋಗಿಗಳು ಇದರ ಹೊರೆಯನ್ನು ಹೊರಬೇಕಾಗಿಲ್ಲ. ಹೊಸ ಅವಕಾಶಗಳನ್ನು ಹುಡುಕುವಲ್ಲಿ ಅವರನ್ನು ಬೆಂಬಲಿಸುವ ಮೂಲಕ ನೀವು ಸರಿಯಾದ ಕೆಲಸವನ್ನು ಮಾಡಿದ್ದೀರಿ. ನಿಮಗೆ ಹ್ಯಾಟ್ಸ್ ಆಫ್!’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ನಿಮ್ಮ ಮೇಲಿನ ಗೌರವವು ಇನ್ನು ಹೆಚ್ಚಾಯಿತು. ಹೊಸ ಸಂಸ್ಥೆಯನ್ನು ಹುಟ್ಟುಹಾಕುವವರಿಗೆ ನೀವೇ ಮಾದರಿ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ಈ ಪ್ರಕ್ರಿಯೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದ್ದಕ್ಕೆ ನಿಮ್ಮ ಮೇಲೆ ಗೌರವ ಹೆಚ್ಚಾಯಿತು. ಹೆಚ್ಚಿನವರು ನಿಮ್ಮ ಈ ಕೆಲಸವನ್ನು ಅನುಸರಿಸಬೇಕು” ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು