AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CWG 2026: ಟ್ರಿಪಲ್ ಜಂಪ್​ನಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದ ಚಿತ್ರಾವೆಲ್, ಸೆಲ್ವ ಪ್ರಭು

Commonwealth Games 2026: 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಭೇಟೆ ಭರದಿಂದ ಸಾಗಿದೆ. 10ನೇ ದಿನದಂದು ಬಾಕ್ಸಿಂಗ್‌ನಲ್ಲಿ ಪ್ರೀತಿ ಪನ್ವಾರ್, ಜಾಸ್ಮಿನ್ ಲಂಬೋರಿಯಾ ಚಿನ್ನ ಗೆದ್ದರೆ, ಅಥ್ಲೇಟಿಕ್ಸ್‌ನ ಟ್ರಿಪಲ್ ಜಂಪ್‌ನಲ್ಲಿ ಪ್ರವೀಣ್ ಚಿತ್ರಾವೆಲ್ ಬೆಳ್ಳಿ ಹಾಗೂ ಸೆಲ್ವ ಪ್ರಭು ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದರು. ಈ ಮೂಲಕ ಭಾರತದ ಪದಕಗಳ ಪಟ್ಟಿಗೆ ಮತ್ತಷ್ಟು ಸೇರ್ಪಡೆಯಾಗಿದೆ.

CWG 2026: ಟ್ರಿಪಲ್ ಜಂಪ್​ನಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದ ಚಿತ್ರಾವೆಲ್, ಸೆಲ್ವ ಪ್ರಭು
Chithravel, Selva Prabhu
ಪೃಥ್ವಿಶಂಕರ
|

Updated on:Aug 01, 2026 | 6:07 PM

Share

2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games 2026) ಭಾರತದ ಪದಕಗಳ ಭೇಟೆ ಮುಂದುವರೆದಿದೆ. ಕ್ರೀಡಾಕೂಟದ 10 ನೇ ದಿನದಂದು ಭಾರತ ಒಂದರ ಮೇಲೊಂದು ಪದಕಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಹೆಚ್ಚಿನ ಪದಕಗಳು ಸಿಗುವುದು ಈ ಮೊದಲೇ ಖಚಿತವಾಗಿತ್ತು. ಇದೀಗ ಬಾಕ್ಸಿಂಗ್ ಜೊತೆಗೆ ಅಥ್ಲೇಟಿಕ್ಸ್​ನಲ್ಲೂ ಭಾರತಕ್ಕೆ 2 ಪದಕಗಳು ಲಭಿಸಿವೆ. ಭಾರತೀಯ ಅಥ್ಲೀಟ್‌ಗಳಾದ ಪ್ರವೀಣ್ ಚಿತ್ರಾವೆಲ್ (Praveen Chithravel) ಮತ್ತು ಸೆಲ್ವ ಪ್ರಭು ತಿರುಮಾರನ್ (Selva Prabhu) ಅವರು ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಎರಡೆರಡು ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಚಿತ್ರಾವೆಲ್ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 16.58 ಮೀಟರ್‌ ಜಿಗಿತದೊಂದಿಗೆ ಬೆಳ್ಳಿ ಪದಕ ಗೆದ್ದರೆ, ಸೆಲ್ವ ಪ್ರಭು 16.52 ಮೀಟರ್‌ ಜಿಗಿತದೊಂದಿಗೆ ಮೂರನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಮುತ್ತಿಕ್ಕಿದರು.

ಬೆಳ್ಳಿ ಗೆದ್ದ ಚಿತ್ರಾವೆಲ್

ಚಿತ್ರಾವೆಲ್ ಮೊದಲ ಮೂರು ಸುತ್ತುಗಳ ನಂತರ ಐದನೇ ಸ್ಥಾನದಲ್ಲಿದ್ದರು. ತಮ್ಮ ಮೊದಲ ಪ್ರಯತ್ನದಲ್ಲಿ 16.05 ಮೀಟರ್ ಜಿಗಿದ ಚಿತ್ರಾವೆಲ್ ಮೂರನೇ ಸುತ್ತಿನಲ್ಲಿ 16.31 ಮೀಟರ್‌ ದೂರ ಜಿಗಿಯುವ ಮೂಲಕ ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಂಡರು. ನಂತರ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 16.58 ಮೀಟರ್ ಜಿಗಿತದೊಂದಿಗೆ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.

ಕಂಚಿಗೆ ಕೊರಳೊಡ್ಡಿದ ಸೆಲ್ವ ಪ್ರಭು

ಇತ್ತ ಸೆಲ್ವ ಪ್ರಭು ತಮ್ಮ ಎರಡನೇ ಪ್ರಯತ್ನದಲ್ಲಿ 16.17 ಮೀಟರ್ ದೂರದೊಂದಿಗೆ ಕಂಚಿನ ಪದಕದ ಸ್ಥಾನವನ್ನು ಪಡೆದುಕೊಂಡರು. ಮೂರನೇ ಸುತ್ತಿನಲ್ಲಿ 16.43 ಮೀಟರ್‌ ದೂರ ಜಿಗಿಯುವ ಮೂಲಕ ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಂಡರು. ನಂತರ 16.52 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ತಮ್ಮ ಸರದಿಯನ್ನು ಮುಗಿಸುವುದರ ಜೊತೆಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

CWG 2026: ಬಾಕ್ಸಿಂಗ್​ನಲ್ಲಿ ಭಾರತಕ್ಕೆ 2ನೇ ಚಿನ್ನ; 57 ಕೆಜಿ ವಿಭಾಗದಲ್ಲಿ ಬಂಗಾರ ಗೆದ್ದ ಜಾಸ್ಮಿನ್ ಲಂಬೋರಿಯಾ

ಬಾಕ್ಸಿಂಗ್​ನಲ್ಲಿ 2 ಚಿನ್ನ

ಇದಕ್ಕೂ ಮೊದಲು ಮಹಿಳೆಯರ 54 ಕೆಜಿ ವಿಭಾಗದಲ್ಲಿ ಭಾರತೀಯ ಬಾಕ್ಸರ್ ಪ್ರೀತಿ ಪನ್ವಾರ್ ಚಿನ್ನ ಗೆದ್ದರೆ, ಸ್ವಲ್ಪ ಸಮಯದ ನಂತರ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಜಾಸ್ಮಿನ್ ಲಂಬೋರಿಯಾ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಇದು ಭಾರತಕ್ಕೆ ದಿನದ ಎರಡನೇ ಬಾಕ್ಸಿಂಗ್ ಚಿನ್ನವನ್ನು ತಂದುಕೊಟ್ಟಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Sat, 1 August 26

Follow Us