46 ವರ್ಷಗಳ ಸೇವೆಯಿಂದ ನಿವೃತ್ತಿ: ಬೀಳ್ಕೊಡುಗೆಯ ದಿನ ಕಣ್ಣೀರು ಹಾಕಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಜೀವನ್‌ ಸಿಂಗ್‌ ತಿತಿಯಾಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 04, 2025 | 5:40 PM

ಕೆಲಸದ ಬಗೆಗಿನ ಸಮರ್ಪಣೆ ಮತ್ತು ರೋಗಿಗಳ ಬಗೆಗಿನ ಸಹಾನುಭೂತಿಗೆ ಹೆಸರುವಾಸಿಯಾದ ಪ್ರಸಿದ್ಧ ನೇತ್ರತಜ್ಞ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಜೀವನ್‌ ಸಿಂಗ್‌ ತಿತಿಯಾಲ್‌ ವರ್ಷಗಳ ಸಮರ್ಪಿತ ಸೇವೆಯ ಬಳಿಕ ಇದೀಗ ನಿವೃತ್ತಿಯನ್ನು ಹೊಂದಿದ್ದು, ದೆಹಲಿಯ ಏಮ್ಸ್‌ನಲ್ಲಿ ಬೀಳ್ಕೊಡುಗೆಯ ಸಮಯದಲ್ಲಿ ಅವರು ಸಹದ್ಯೋಗಿಗಳನ್ನು ಬಿಗಿದಪ್ಪಿ ಕಣ್ಣೀರು ಹಾಕಿದ್ದಾರೆ. ಈ ಭಾವನಾತ್ಮಕ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ನಿವೃತ್ತಿಯ ದಿನ ಹತ್ತಿರ ಬಂದಂತೆ ಹೆಚ್ಚಿನವರು ಬೇಸರ ಮಾಡಿಕೊಳ್ಳುತ್ತಾರೆ. ಕೆಲಸದ ಸ್ಥಳ, ಸಹದ್ಯೋಗಿಗಳನ್ನೆಲ್ಲಾ ಬಿಟ್ಟು ಹೋಗ್ಬೇಕಲ್ಲಾ ಎಂದು ದುಃಖ ಪಡ್ತಾರೆ. ಅದರಲ್ಲೂ ನಿವೃತ್ತಿಯ ದಿನ ಭಾವುಕರಾಗಿ ಕಣ್ಣೀರನ್ನೇ ಹಾಕ್ತಾರೆ. ಅದೇ ರೀತಿ ವೈದ್ಯರೊಬ್ಬರು ನಿವೃತ್ತಿಯ ದಿನ ಕಣ್ಣೀರು ಹಾಕಿದ್ದಾರೆ. ವರ್ಷಗಳ ಸಮರ್ಪಿತ ಸೇವೆಯ ನಂತರ ಪ್ರಸಿದ್ಧ ನೇತ್ರತಜ್ಞ ಹಾಗೂ ಪದ್ಮಶ್ರೀ ಪುರಸ್ಕೃತ ವೈದ್ಯ ಡಾ. ಜೀವನ್‌ ಸಿಂಗ್‌ ತಿತಿಯಾಲ್‌ ನಿವೃತ್ತರಾಗಿದ್ದು, ದೆಹಲಿಯ ಏಮ್ಸ್‌ನಲ್ಲಿ ಬೀಳ್ಕೊಡುಗೆಯ ಸಮಯದಲ್ಲಿ ಅವರು ಸಹದ್ಯೋಗಿಗಳನ್ನು ಬಿಗಿದಪ್ಪಿ ಅತ್ತಿದ್ದಾರೆ. ಈ ಭಾವನಾತ್ಮಕ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ದೆಹಲಿಯ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ (AIIMS) ನ ಪ್ರಸಿದ್ಧ ನೇತ್ರ ತಜ್ಞ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಜೀವನ್‌ ಸಿಂಗ್‌ ತಿತಿಯಾಲ್‌ ತಮ್ಮ ಸುದೀರ್ಘ 46 ವರ್ಷಗಳ ಸೇವೆಯಿಂದ ನಿವೃತ್ತಿಯನ್ನು ಹೊಂದಿದ್ದು, ಬೀಳ್ಕೊಡುಗೆಯ ದಿನ ತಮ್ಮ ಭಾವನೆಯನ್ನು ತಡೆದುಕೊಳ್ಳಲು ಸಾಧ್ಯವಾಗದೆ ದುಃಖದಲ್ಲಿ ಸಹದ್ಯೋಗಿಗಳನ್ನು ಬಿಗಿದಪ್ಪಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಚಪಾತಿ ಮಾಡುವುದರಿಂದ ಹಿಡಿದು ಪಾತ್ರೆ ತೊಳೆಯುವವರೆಗೆ ಹೆಣ್ಮಕ್ಕಳಿಗಿಂತ ಸೂಪರ್ ಆಗಿ ಮನೆ ಕೆಲಸ ಮಾಡುವ ಕೋತಿಯಿದು

ಬೀಳ್ಕೊಡುಗೆಯ ದಿನ ಡಾ. ಜೀವನ್‌ ಸಿಂಗ್‌ ತಿತಿಯಾಲ್‌ ಭಾವುಕರಾಗಿ ಸಹದ್ಯೋಗಿಗಳನ್ನು ಬಿಗಿದಪ್ಪಿ ಕಣ್ಣೀರು ಹಾಕಿದ್ದಾರೆ. ಈ ಕುರಿತ ಭಾವನಾತ್ಮಕ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಈ ದೃಶ್ಯವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ