
ಶ್ವಾನ ಪ್ರೇಮಿಗಳು (dog lover) ಬೀದಿ ನಾಯಿಗಳಿಗೆ ಆಹಾರ ಹಾಕಿ ಹಸಿವನ್ನು ನೀಗಿಸುವ ಪ್ರಯತ್ನ ಮಾಡುತ್ತಾರೆ. ಅದರ ದೆಹಲಿಯ ರಿಕ್ಷಾ ಚಾಲಕನೊಬ್ಬ ಬೀದಿ ನಾಯಿಗಳನ್ನು ತನ್ನ ರಿಕ್ಷಾ ಹತ್ತಿಸಿ ಬೀದಿ ಸುತ್ತಿಸಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ದೃಶ್ಯ ನೋಡಿದ ನೆಟ್ಟಿಗರು ಈ ವ್ಯಕ್ತಿಗೆ ಮೂಕ ಪ್ರಾಣಿಗಳ ಮೇಲಿರುವ ಪ್ರೀತಿಗೆ ಫುಲ್ ಫಿದಾ ಆಗಿದ್ದಾರೆ.
ಬಾಡಿ ಬಿಲ್ಡರ್ ರಾಕಿ ದಾಸ್ (Bodybuilder Rocky Dass) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ದೆಹಲಿಯ ರಿಕ್ಷಾ ಚಾಲಕನೊಬ್ಬ ಬೀದಿ ಶ್ವಾನಗಳನ್ನು ತನ್ನ ವಾಹನದಲ್ಲಿ ಕೂರಿಸಿಕೊಂಡು ಬೀದಿ ಸುತ್ತಿದ್ದಾನೆ. ಈ ಶ್ವಾನಗಳು ಕೂಡ ಆರಾಮಾಗಿ ಕುಳಿತುಕೊಂಡು ಸುತ್ತಲೂ ನೋಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ದುಡಿಮೆಯಲ್ಲಿ ಆಟೋ ಡ್ರೈವರ್‌ಗೆ ಜತೆಯಾಗುವ ಶ್ವಾನ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಪ್ರಾಣಿಗಳಿಗೆ ಈ ರಿಕ್ಷಾವಾಲನ ಮೇಲೆ ಎಷ್ಟು ನಂಬಿಕೆ ನೋಡಿ ಎಂದಿದ್ದಾರೆ. ಇನ್ನೊಬ್ಬರು, ಈ ಪ್ರಾಣಿಗಳಿಗೆ ಪ್ರೀತಿ ತೋರಿದರೆ ಜೀವನ ಪರ್ಯಂತ ಜತೆಗೆ ಇರುತ್ತವೆ ಎಂದು ಹೇಳಿದ್ದಾರೆ. ಕೆಲವರು ಹಾರ್ಟ್ ಸಿಂಬಲ್ ಕಳುಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ