ಪ್ಯಾರೀಸ್​ ಟೂರ್​​ ವಿಥ್​ ಅಜ್ಜಿ; ದಂತವೈದ್ಯರ ಈ ನಡೆಗೆ ಭಾವುಕರಾಗುತ್ತಿರುವ ನೆಟ್ಟಿಗರು

Paris Trip : ಕುಟುಂಬವನ್ನು ಕಟ್ಟಲು ಶ್ರಮಿಸುವ ಹಿರಿಯರಿಗಾಗಿ ಕಿರಿಯರು ಇಂಥ ಖುಷಿ ಸಂಗತಿಗಳಿಗೆ ಅವರನ್ನು ಹತ್ತಿರವಾಗಿಸಬೇಕು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯ?

ಪ್ಯಾರೀಸ್​ ಟೂರ್​​ ವಿಥ್​ ಅಜ್ಜಿ; ದಂತವೈದ್ಯರ ಈ ನಡೆಗೆ ಭಾವುಕರಾಗುತ್ತಿರುವ ನೆಟ್ಟಿಗರು
ಮೊಮ್ಮಗನೊಂದಿಗೆ ಪ್ಯಾರೀಸ್​ ಪ್ರವಾಸದಲ್ಲಿ ಅಜ್ಜಿ
Edited By: ಶ್ರೀದೇವಿ ಕಳಸದ

Updated on: May 23, 2023 | 10:27 AM

Viral Video : ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಕನಸುಗಳು ಗರಿಗೆದರುತ್ತವೆ. ಓದು ಮಗಿಯುತ್ತಿದ್ದಂತೆ ನೌಕರಿ ಹಿಡಿದು ಕನಸನ್ನು ನನಸು ಮಾಡಿಕೊಳ್ಳಲು ಮನಸ್ಸು ಹಾತೊರೆಯುತ್ತದೆ. ತಾನು ತನ್ನ ಖುಷಿ ತನ್ನ ಆಸೆಗಳತ್ತ ಮನಸ್ಸು ಹುರಿಗೊಳ್ಳುತ್ತದೆ. ಹೀಗಿರುವಾಗ ಮನೆಯಲ್ಲಿರುವ ಮುಪ್ಪಾನುಮುದುಕರ ಕಡೆಗೆ ಗಮನ ಹೋಗುತ್ತದೆಯೇ? ಆದರೆ ಈ ಕೆಳಗಿನ ವಿಡಿಯೋ ನೋಡಿ. ದಂತವೈದ್ಯನಾಗಿರುವ ಮೊಮ್ಮಗ ತನ್ನ ಅಜ್ಜಿಯನ್ನು ಪ್ಯಾರೀಸ್​ ಪ್ರವಾಸ ಮಾಡಿಸಿದ್ದಾನೆ.

ನಿಮ್ಮ ನಡೆ ನಮ್ಮನ್ನು ಭಾವುಕರನ್ನಾಗಿಸುತ್ತಿದೆ ನೀವು ಅನೇಕರಿಗೆ ಮಾದರಿ ಎಂದು ನೆಟ್ಟಿಗರು ಶುಭಾಶಯ ತಿಳಿಸುತ್ತಿದ್ದಾರೆ ಡಾ. ಉಸಾಮಾ ಅಹಮ್ಮದ್​ಗೆ. ನಿಮ್ಮ ಈ ಕಾಳಜಿ, ಪ್ರೀತಿಯ ಮುಂದೆ ಯಾವ ಮಾತೂ ಸೋಲುತ್ತಿವೆ ಎನ್ನುತ್ತಿದ್ಧಾರೆ ಕೆಲವರು. ಮೇ 14ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ಈತನಕ 3 ಮಿಲಿಯನ್​ಗಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಇದನ್ನೂ ಓದಿ : Viral Video: ಈಕೆಯ ಆತ್ಮವಿಶ್ವಾಸವನ್ನು ಗೌರವಿಸಲೇಬೇಕು ಎನ್ನುತ್ತಿರುವ ನೆಟ್ಟಿಗರು

ನೀವು ನಿಜಕ್ಕೂ ಅದೃಷ್ಟವಂತರು. ನನ್ನ ಅಜ್ಜನ ಕನಸನ್ನು ನನಸು ಮಾಡುವ ಮೊದಲೇ ಅವರು ನಿಧನರಾದರು. ನಿಮ್ಮಂಥವರನ್ನು ನಾನು ನಿಜಕ್ಕೂ ಶ್ಲಾಘಿಸುತ್ತೇನೆ ಎಂದು ಒಬ್ಬರು ಹೇಳಿದ್ದಾರೆ. ನಾನೂ ನನ್ನ ಅಜ್ಜಿಗಾಗಿ ಹೀಗೆ ಏನಾದರೂ ಪ್ರವಾಸ ಕೈಗೊಳ್ಳುತ್ತೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಿಮ್ಮ ಅಜ್ಜಿಗೆ ನಮಸ್ಕಾರ ತಿಳಿಸಿ, ಇದು ಹೃದಯಕ್ಕೆ ಹತ್ತಿರವಾದ ವಿಷಯ ಎಂದಿದ್ದಾರೆ ಅನೇಕರು.

ಇದನ್ನೂ ಓದಿ : Viral Video : ಲತಾ ಮಂಗೇಶ್ಕರ್ ‘ಕ್ರಾಂತಿ’ ಹಾಡಿಗೆ ವೃದ್ಧದಂಪತಿ ಲಿಪ್​ ಸಿಂಕ್; 2 ಮಿಲಿಯನ್​ ವೀಕ್ಷಣೆ​

ನಾವೂ ಕೂಡ ನಮ್ಮ ತಂದೆ, ತಾಯಿ ಮತ್ತು ಅಜ್ಜ ಅಜ್ಜಿ ಅಥವಾ ಮನೆಯ ಹಿರಿಯರಿಗಾಗಿ ಹೀಗೆ ಪ್ರವಾಸ ಏರ್ಪಡಬೇಕು ಎಂದು ಅನೇಕರು ಪ್ರತಿಕ್ರಿಯಿಸಿದ್ಧಾರೆ. ಮಕ್ಕಳನ್ನು ಮೊಮ್ಮಕ್ಕಳನ್ನು ಮತ್ತಿಡೀ ಕುಟುಂಬವನ್ನು ಕಟ್ಟಲು ಹಗಲೂ ರಾತ್ರಿ ತಮ್ಮತನವನ್ನೂ ಕಳೆದುಕೊಂಡು ಶ್ರಮಿಸುವ ಹಿರಿಯರನ್ನು ಖುಷಿಪಡಿಸುವ ಕರ್ತವ್ಯ ಪ್ರೀತಿ ಚಿಕ್ಕವರದಲ್ಲವೆ. ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

TV9 Web

TV9 Kannada

Read More
Loading...
Unable to load recommendations.
Follow Us