ಆಪ್ಟಿಕಲ್ ಇಲ್ಯುಶನ್ (Optical illusions) ಗೊಂದಲಕ್ಕೆ ಈಡುಮಾಡುವುದು ಸಹಜ. ಆದರೆ ಅವು ಬುದ್ದಿಗೆ ಗುದ್ದು ನೀಡಿ, ಚುರುಕುತನ ಮೂಡಿಸುತ್ತವೆ. ಸಾಮಾಜಿಕ ಜಾಲತಾಣದಲ್ಲಿ(Social Media) ಇಂತಹ ಭ್ರಮೆ ಹುಟ್ಟಿಸುವ ಫೋಟೋಗಳು, ವಿಡಿಯೋಗಳು ಆಗಾಗ ವೈರಲ್(Viral) ಆಗುತ್ತಲೇ ಇರುತ್ತವೆ. ಬಳಕೆದಾರರು ಈ ರೀತಿಯ ಆಟಗಳಲ್ಲಿ ಭಾಗವಹಿಸಿ ಎಂಜಾಯ್ ಮಾಡುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕಿರು ವಿಡಿಯೋವೊಂದು ನೆಟ್ಟಿಗರ ತಲೆಕೆಡಿಸಿದೆ. ವೃತ್ತದಲ್ಲಿ ಎಷ್ಟು ಸಂಖ್ಯೆಗಳು ಕಾಣಿಸುತ್ತವೆ ಎಂದು ಪತ್ತೆ ಹಚ್ಚುವ ಈ ಆಪ್ಡಟಿಕಲ್ ಇಲ್ಯಶನ್ನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
DO you see a number?
If so, what number? pic.twitter.com/wUK0HBXQZF
— Benonwine (@benonwine) February 16, 2022
Benonwine ಎನ್ನುವ ಟ್ವಿಟರ್ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದೆ. ತಿರುಗು ವೃತ್ತದಲ್ಲಿ ಸಂಖ್ಯೆಗಳು ಕಾಣಿಸುತ್ತಿವೆಯೇ? ಯಾವೆಲ್ಲಾ ಸಂಖ್ಯೆಗಳು ಕಾಣಿಸುತ್ತಿವೆ ಎಂದು ಕ್ಯಾಪ್ಷನ್ ನೀಡುವ ಮೂಲಕ ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ. ಒಂದೊಂದು ಸಲ ಒಂದೊಂದು ನಂಬರ್ ನೋಡುತ್ತಿರುವ ನೆಟ್ಟಿಗರು ನಿಜವಾಗಿ ಕಾಣಿಸುತ್ತಿರುವ ಸಂಖ್ಯೆ ಎಷ್ಟು ಎಂದು ತಲೆಕೆಡಿಸಿಕೊಂಡಿದ್ದಾರೆ.
ಸದ್ಯ ವಿಡಿಯೋ ಹಂಚಿಕೊಂಡ ಒಂದೇ ದಿನದಲ್ಲಿ 1,700ಕ್ಕೂ ಹೆಚ್ಚು ಲೈಕ್ಸ್ಗಳನ್ನು ಗಳಿಸಿದ್ದು, ಕಾಮೆಂಟ್ ಸೆಕ್ಷನ್ನಲ್ಲಿ ಬಳಕೆದಾರರು ಕಂಡ ಸಂಖ್ಯೆಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ ನೀವು ಕೂಡ ಯಾವ ಸಂಖ್ಯೆ ಕಾಣಿಸುತ್ತಿದೆ ಎಂದು ಹೇಳಬಹದು.
ಇದನ್ನೂ ಓದಿ:
Viral Video: ಬಾಯಲ್ಲಿ ಕಚ್ಚಿಕೊಂಡು ಹೊರಟ ಚಿರತೆಯನ್ನು ಕಚ್ಚಿದ ಮರಿ ಹೆಬ್ಬಾವು: ಮುಂದೇನಾಯ್ತು?
Published On - 11:25 am, Sun, 20 February 22