Dog : ಎಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ (International Yoga Day) ಸಂಭ್ರಮ. ಯಾಕೆ ನೀವಷ್ಟೇ ಯೋಗ ಮಾಡಬೇಕು? ನಾನೂ ಯೋಗ ತರಬೇತಿ ಪಡೆದಿದ್ದೇನೆ. ನನಗೂ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಿ ಎಂದು ಈ ನಾಯಿ ಕೇಳುತ್ತಿದೆಯೆ? ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (Indo-Tibetan Border Police) ಆಯೋಜಿಸಿದ್ದ ಈ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಈ ನಾಯಿಯು ಯೋಗಾಸನ ಪ್ರಸ್ತುಪಡಿಸಿದೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
#WATCH | Canine member of the dog unit of ITBP (Indo-Tibetan Border Police) along with ITBP personnel performs Yoga at Pranu Camp in Udhampur, J&K#9thInternationalYogaDay pic.twitter.com/Emz1ixjt0X
ಇದನ್ನೂ ಓದಿ— ANI (@ANI) June 21, 2023
ಈತನಕ ಸುಮಾರು 80,000 ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ನಾಯಿಯ ಮೂಲಕ ಯೋಗ ಪ್ರದರ್ಶನ ಮಾಡಿಸಿ ಯೋಗವನ್ನು ನೀವು ತಮಾಷೆ ಮಾಡುತ್ತಿದ್ದೀರಿ ಎಂದು ಒಬ್ಬರು ಬೇಸರಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದಂದು ಮಾಧ್ಯಮಗಳು ಮತ್ತು ಸರ್ಕಾರವು ಭಾರತದ ಸಾರ್ವಜನಿಕರಿಗೆ ತಿಳಿಸಲು ಬಯಸುವ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ನಾಯಿ ನಿಷ್ಠೆಗೆ ಸಮಾನಾರ್ಥಕವಾಗಿದೆ ಎಂಬ ಅರ್ಥವನ್ನೇನಾದರೂ ಹೊರಡಿಸುತ್ತಿದೆಯೇ? ಎಂದು ಒಬ್ಬರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : Viral: ಪ್ರೀತಿಗೆ ಜಯವಾಗಲಿ!; ದೆಹಲಿ ಮೆಟ್ರೋದ ಈ ಜೋಡಿಯನ್ನು ಹುರಿದುಂಬಿಸುತ್ತಿರುವ ನೆಟ್ಟಿಗರು
ಈ ನಾಯಿಗಳು ನಿಯತ್ತಿನಿಂದ ಕೂಡಿರುತ್ತವೆ ಮತ್ತು ಸಹಾನುಭೂತಿಯನ್ನು ಹೊಂದಿವೆ. ಇವುಗಳಿಗೆ ಒಳ್ಳೆಯದಾಗಲಿ ಎಂದು ಒಬ್ಬರು ಹಾರೈಸಿದ್ದಾರೆ. ಬೊಗಳುವುದೂ ಯೋಗವೇ? ಎಂದು ಒಬ್ಬರು ಪ್ರಶ್ನಿಸಿದ್ದಾರೆ. ನಿನ್ನೆ ನನ್ನ ಗಲ್ಲಿಯೊಳಗಿನ ನಾಯಿಯೂ ಹೀಗೆಯೇ ಮಾಡುತ್ತಿತ್ತು, ಹೀಗೆ ಮಾಡುವುದಕ್ಕೆ ಯೋಗ ಎನ್ನುತ್ತಾರೆ ಎಂದು ಗೊತ್ತಿರಲಿಲ್ಲ ಎಂದು ಮಗದೊಬ್ಬರು ಹೇಳಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:52 pm, Wed, 21 June 23