ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಫುಟ್‌ಬೋರ್ಡ್ ಮೇಲೆ ನಿಂತು ಹುಚ್ಚಾಟ ಮೆರೆಯಬಾರದು ಎಂದು ಎಚ್ಚರಿಕೆ ನೀಡಿದ್ರೂ ಕೂಡಾ ಈ ಕೆಲ ಯುವಕರು ಕ್ಯಾರೇ ಅನ್ನದೆ ರೀಲ್ಸ್ ವಿಡಿಯೋ ಮಾಡುವ ಸಲುವಾಗಿ ಪ್ರಾಣವನ್ನೇ ಪಣಕ್ಕಿಟ್ಟು ರೈಲಿನಲ್ಲಿಯೂ ಡೇಂಜರಸ್ ಸ್ಟಂಟ್‌ಗಳನ್ನು ಮಾಡುತ್ತಿರುತ್ತಾರೆ. ಇಲ್ಲೊಬ್ರು ತಾತ ಕೂಡಾ ಯುವಕರಿಗಿಂತ ನಾನೇನು ಕಮ್ಮಿಯಿಲ್ಲ ಎನ್ನುತ್ತಾ ಅವರು ಕೂಡಾ ಚಲಿಸುತ್ತಿರುವ ರೈಲಿನ ಫುಟ್ ಬೋರ್ಡ್‌ನಲ್ಲಿ ನೇತಾಡುತ್ತಾ ಕಸರತ್ತು ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ವಯಸ್ಸಲ್ಲಿ ಇದೆಲ್ಲಾ ಬೇಕಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
Bigtvtelugu ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರೀಲ್ಸ್‌ಗಾಗಿ ವೃದ್ಧರೊಬ್ಬರು ತಮ್ಮ ಇಳಿ ವಯಸ್ಸಿನಲ್ಲಿ ಡೇಂಜರಸ್ ಸ್ಟಂಟ್ ಮಾಡುತ್ತಿರುವ ದೃಶ್ಯವನನ್ನು ಕಾಣಬಹುದು. ವೇಗವಾಗಿ ಚಲಿಸುತ್ತಿದ್ದ ರೈಲಿನ ಫುಟ್‌ಬೋರ್ಡ್ ಬಳಿ ನಿಂತಿದ್ದ ತಾತಪ್ಪ ಫುಟ್‌ಬೋರ್ಡ್‌ನಲ್ಲಿ ನೇತಾಡುತ್ತಾ ಯುವಕರೂ ನಾಚುವಂತೆ ಚಿತ್ರ ವಿಚಿತ್ರ ಕಸರತ್ತುಗಳನ್ನು ಮಾಡಿದ್ದಾರೆ.
రీల్స్ పిచ్చిలో ప్రాణాలతో చెలగాటం…
రన్నింగ్ ట్రైన్ డోర్ వద్ద స్టంట్స్@BhartiyRailways @RPF_INDIA#Reels #Train #BigTV pic.twitter.com/6SAVOAxFbv
— BIG TV Breaking News (@bigtvtelugu) September 30, 2024
ಸೆಪ್ಟೆಂಬರ್ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಚಲಿಸುತ್ತಿರುವ ರೈಲಿನಲ್ಲಿ ತಾತಪ್ಪ ಯಾವುದೇ ಭಯವಿಲ್ಲದೆ ಸಲೀಸಾಗಿ ಅಪಾಯಕಾರಿ ಸ್ಟಂಟ್ ಮಾಡುವ ದೃಶ್ಯವನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ