Viral: ಹುಷಾರಿಲ್ಲ ಅಂದ್ರೂ ರಜೆ ಕೊಡಲ್ಲ; ಮ್ಯಾನೇಜರ್ ವರ್ತನೆಗೆ ಬೇಸತ್ತು ಖಡಕ್ ರಿಪ್ಲೈ ಕೊಟ್ಟ ಉದ್ಯೋಗಿ

ಕೆಲಸ ಅಂದ್ರೆ ಹಾಗೆನೇ, ಕತ್ತೆ ತರಹ ದುಡಿದ್ರೂ ಬೆಲೆ ಇಲ್ಲ. ಹುಷಾರಿಲ್ಲ ಅಂದ್ರು ರಜೆ ಸಿಗೋದೇ ಇಲ್ಲ. ಇಲ್ಲೊಬ್ಬ ಉದ್ಯೋಗಿಯೂ ಅನಾರೋಗ್ಯದಿಂದಾಗಿ ರಜೆ ಕೇಳಿದ್ದಾರೆ. ಆದರೆ ಮ್ಯಾನೇಜರ್ ರಜೆ ಕೊಡಲ್ಲ ವರ್ಕ್ ಫ್ರಮ್ ಹೋಮ್ ಮಾಡು ಎಂದಿದ್ದಾರೆ. ಇದರಿಂದ ಕೋಪಗೊಂಡ ಉದ್ಯೋಗಿ ಬೇರೆ ಕಂಪನಿಯಲ್ಲಿ ಸಂದರ್ಶನ ಕೊಟ್ಟು ಆಫರ್‌ ಲೆಟರ್‌ ಸಿಕ್ಕಿದೆ. ಆ ಬಳಿಕ ಜಾಬ್‌ ರಿಸೈನ್ ಮಾಡಿ ಮ್ಯಾನೇಜರ್‌ಗೆ ಶಾಕ್ ನೀಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಹುಷಾರಿಲ್ಲ ಅಂದ್ರೂ ರಜೆ ಕೊಡಲ್ಲ; ಮ್ಯಾನೇಜರ್ ವರ್ತನೆಗೆ ಬೇಸತ್ತು ಖಡಕ್ ರಿಪ್ಲೈ ಕೊಟ್ಟ ಉದ್ಯೋಗಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Sep 08, 2026 | 11:21 AM

ಕಾರ್ಪೊರೇಟ್ (corporate) ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕಷ್ಟ ಹೇಳಲಾಗದು. ಒತ್ತಡ ತುಂಬಿದ ಕೆಲಸ, ರಜೆ ಅಂತೂ ಸಿಗೋದೇ ಇಲ್ಲ. ಇಲ್ಲೊಬ್ಬ ಉದ್ಯೋಗಿ ಅನಾರೋಗ್ಯದ ಕಾರಣ ರಜೆ ಕೇಳಿದ್ದು ಮ್ಯಾನೇಜರ್ ರಜೆ ನಿರಾಕರಿಸಿದ್ದಾರೆ. ವರ್ಕ್‌ ಫ್ರಮ್‌ ಹೋಮ್‌ ಆಪ್ಷನ್‌  ನೀಡಿದ್ದಾರೆ. ಆದರೆ, ಮ್ಯಾನೇಜರ್ ವರ್ತನೆಯಿಂದ ಬೇಸತ್ತ ಜೆನ್ ಝೀ ಉದ್ಯೋಗಿ ಮುಟ್ಟಿಕೊಳ್ಳುವಂತೆ ಉತ್ತರ ನೀಡಿದ್ದಾರೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮ್ಯಾನೇಜರ್ ವರ್ತನೆಗೆ ಬೇಸತ್ತ ಉದ್ಯೋಗಿ ರಿಯಾಕ್ಷನ್ ನೋಡಿ

ಶೀತಲ್ (Sheethal) ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ತನ್ನ ಸ್ನೇಹಿತರೊಬ್ಬರು ಮ್ಯಾನೇಜರ್ ಆಗಿ ಕೆಲಸ ಮಾಡುವ ಕಂಪನಿಯಲ್ಲಿ ನಡೆದ ಘಟನೆಯ ಬಗ್ಗೆ ಹೇಳಿದ್ದಾರೆ. ನನ್ನ ಸ್ನೇಹಿತನ ಬಳಿ ಜೆನ್ ಝೀ ಉದ್ಯೋಗಿಯು ಅನಾರೋಗ್ಯದ ಕಾರಣದಿಂದ ರಜೆ ಕೋರಿದ್ದಾರೆ. ಆದರೆ ಮ್ಯಾನೇಜರ್ ವರ್ಕ್ ಫ್ರಮ್ ಹೋಮ್ ಮಾಡಿ ಎಂದಿದ್ದಕ್ಕೆ ಕೋಪಗೊಂಡಿದ್ದಾರೆ. ಎರಡು ದಿನಗಳ ಕಾಲ ರಜೆ ತೆಗೆದುಕೊಂಡು ಈ ಸಮಯದಲ್ಲಿ ಬೇರೊಂದು ಕಂಪನಿಗೆ ಇಂಟರ್ವ್ಯೂ ನೀಡಿದ್ದು ಅವರಿಗೆ ಅಲ್ಲಿ ಕೆಲಸ ಸಿಕ್ಕಿದೆ. ಆ ಬಳಿಕ ಕಂಪನಿಗೆ ಜಾಬ್ ರಿಸೈನ್ ಲೆಟರ್ ಕಳುಹಿಸಿರುವುದನ್ನು ಇಲ್ಲಿ ಉಲ್ಲೇಖಿಸಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ಇದನ್ನೂ ಓದಿ: ಆಫೀಸ್‌ ವರ್ಕ್ ಜತೆಗೆ ವೈಯಕ್ತಿಕ ಕೆಲಸ ನೀಡಿದ್ದ ಮ್ಯಾನೇಜರ್, ಬೇಸರ ವ್ಯಕ್ತಪಡಿಸಿದ ಉದ್ಯೋಗಿ

ಜೆನ್ ಝೀ ಪರವಾಗಿ ನಿಂತ ನೆಟ್ಟಿಗರು

ಈ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ಜೆನ್ ಝೀ ಸಮಸ್ಯೆಯಲ್ಲ. ಸಿಕ್ ಲೀವ್ ಕೊಡದೇ ವರ್ಕ್ ಫ್ರಮ್ ಹೋಮ್ ಮಾಡು ಎಂದ ಮ್ಯಾನೇಜರ್ ಸಮಸ್ಯೆ ಎಂದು ದೂಷಿಸಿದ್ದಾರೆ. ಇನ್ನೊಬ್ಬರು, ಆರೋಗ್ಯಕ್ಕಿಂತ ಮುಖ್ಯ ಬೇರೇನು ಅಲ್ಲ, ಈ ಉದ್ಯೋಗಿ ಮಾಡಿದ್ದು ಸರಿ ಇದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಎರಡು ದಿನದಲ್ಲೇ ಜಾಬ್ ಆಫರ್ ಲೆಟರ್ ಸಿಗುತ್ತದೆ ಅಂತಾದ್ರೆ ಅದು ಯಾವ ರೀತಿಯ ಕೆಲಸ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us