ಪ್ರಕೃತಿ ಸದಾ ಸೋಜಿಗದ ತಾಣ. ಒಂದಲ್ಲ ಒಂದು ವಿಸ್ಮಯವನ್ನು ತನ್ನೊಳಗಿಟ್ಟುಕೊಂಡು ಅಚ್ಚರಿಯನ್ನು ಉಂಟುಮಾಡುತ್ತದೆ. ಇದೀಗ ನೀಲಗಿರಿ ಮರಗಳು (Eucalyptus Tree) ಕಾಮನಬಿಲ್ಲಿನ ಬಣ್ಣದ ತೊಗಟೆಯನ್ನು ಹೊಂದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಎಫ್ಎಸ್ ಅಧಿಕಾರಿ ಸುಸಾಂತ್ ನಂದ ಅವರು ಇದರ ಫೋಟೋವನ್ನು ಹಂಚಿಕೊಂಡಿದ್ದಾರೆ. ನೀಲಗಿರ ಮರವೊಂದು ಕಾಮನಬಿಲ್ಲಿನ ಬಣ್ಣವನ್ನು ಹೊಂದಿರುವುದು ಸದ್ಯ ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ನೈಜವಾಗಿಯೂ ಮರ ಅದೇ ರೀತಿ ಇದೆ ಎಂದು ಹೇಳಲಾಗಿದೆ.
The rainbow eucalyptus is the only eucalyptus tree indigenous to the northern hemisphere and happens to be the most colourful tree in the world.
The rainbow effect is created as the bark peels off throughout each season, revealing the fresh, bright coloured bark below. pic.twitter.com/zlycNQcQjd— Susanta Nanda IFS (@susantananda3) March 15, 2022
ಫೋಟೋ ಹಂಚಿಕೊಂಡ ಸುಸಾಂತ್ ಅವರು ಕಾಮನಬಿಲ್ಲಿನಂತೆ ಕಾಣುವ ನೀಲಗಿರಿ ಮರವು ಉತ್ತರ ಗೋಳಾರ್ಧದಲ್ಲಿ ಸ್ಥಳೀಯವಾಗಿರುವ ಏಕೈಕ ನೀಲಗಿರಿ ಮರವಾಗಿದೆ. ಇದು ವಿಶ್ವದ ಅತ್ಯಂತ ವರ್ಣರಂಜಿತ ಮರವಾಗಿದೆ. ಪ್ರತಿ ಋತುವಿನ ಅಂತ್ಯದಲ್ಲಿಯೂ ತೊಗಟೆಯು ಸಿಪ್ಪೆ ಸುಲಿಯುವುದರಿಂದ ಮಳೆಬಿಲ್ಲಿನಂತೆ ಕಾಣುತ್ತದೆ, ಇದು ಕೆಳಗಿನ ತಾಜಾ, ಗಾಢ ಬಣ್ಣದ ತೊಗಟೆಯನ್ನು ಬಹಿರಂಗಪಡಿಸುತ್ತದೆ” ಎಂದು ಪೋಸ್ಟ್‌ನ ಕ್ಯಾಪ್ಷನ್ನಲ್ಲಿ ಕಾಮನಬಿಲ್ಲಿನ ನೀಲಗಿರಿ ಮರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸುಂದರವಾದ ಮರವನ್ನು ನೋಡಿ ನೆಟ್ಟಿಗರು ವಿಸ್ಮಯಗೊಂಡಿದ್ದಾರೆ. ಇದನ್ನು ಪ್ರಕೃತಿಯ ವಿಶಿಷ್ಟ ಚಿತ್ರ ಎಂದು ಕರೆದಿದ್ದಾರೆ. ಕಾಮನಬಿಲ್ಲಿನ ಯೂಕಲಿಪ್ಟಸ್ ಮರಗಳು ತಗ್ಗು ಪ್ರದೇಶ ಮಳೆಕಾಡಿನಲ್ಲಿ ಸಮುದ್ರ ಮಟ್ಟದಿಂದ 1,800 ಮೀ (5,900 ಅಡಿ) ಎತ್ತರದಲ್ಲಿ ಬೆಳೆಯುತ್ತದೆ. ಇದು ಇಂಡೋನೇಷ್ಯಾ, ಪಪುವಾ ನ್ಯೂ ಗಿನಿಯಾ ಮತ್ತು ಫಿಲಿಪೈನ್ಸ್‌ಗೆ ಸ್ಥಳೀಯವಾಗಿದೆ, ಆದರೆ ಅನೇಕ ಇತರ ದೇಶಗಳಲ್ಲಿ ವ್ಯಾಪಕವಾಗಿ ನೆಡಲಾಗಿದೆ.
ಇದನ್ನೂ ಓದಿ:
Viral Video: ಮೂರು ನಾಗರ ಹಾವುಗಳೊಂದಿಗೆ ಯುವಕನ ಸಾಹಸ: ಸಿಟ್ಟಿಗೆದ್ದು ಕಚ್ಚಿದ ಹಾವು
Published On - 3:40 pm, Thu, 17 March 22