ಬಲವಂತವಾಗಿ ಲಿಪ್​​​ ಕಿಸ್​​​ ಮಾಡಿದ ವ್ಯಕ್ತಿಯ ನಾಲಗೆ ಕಚ್ಚಿ ಗಾಯಗೊಳಿಸಿದ ಮಾಜಿ ಗೆಳತಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿವಾಹಿತ ವ್ಯಕ್ತಿಯೊಬ್ಬ ಮಾಜಿ ಗೆಳತಿಗೆ ಬಲವಂತವಾಗಿ ಮುತ್ತಿಡಲು ಹೋಗಿ ನಾಲಿಗೆ ಕಚ್ಚಿಸಿಕೊಂಡ ಘಟನೆ ವೈರಲ್ ಆಗಿದೆ. 35 ವರ್ಷದ ಚಂಪಿ ಎಂಬ ವ್ಯಕ್ತಿ, ಮದುವೆಯಾಗಿದ್ದರೂ ಮಾಜಿ ಗೆಳತಿಯೊಂದಿಗೆ ಸಂಬಂಧ ಹೊಂದಿದ್ದ. ಆಕೆ ತನ್ನ ಮೇಲೆ ದೌರ್ಜನ್ಯ ಮಾಡಿದಕ್ಕೆ ಆತ್ಮರಕ್ಷಣೆಗಾಗಿ ಆತನ ನಾಲಿಗೆಯನ್ನು ಕಚ್ಚಿದ್ದಾಳೆ. ಈ ಘಟನೆ ಭಾರೀ ಸದ್ದು ಮಾಡುತ್ತಿದೆ.

ಬಲವಂತವಾಗಿ ಲಿಪ್​​​ ಕಿಸ್​​​ ಮಾಡಿದ ವ್ಯಕ್ತಿಯ ನಾಲಗೆ ಕಚ್ಚಿ ಗಾಯಗೊಳಿಸಿದ ಮಾಜಿ ಗೆಳತಿ
ಸಾಂದರ್ಭಿಕ ಚಿತ್ರ

Updated on: Nov 22, 2025 | 2:06 PM

ಉತ್ತರ ಪ್ರದೇಶದಲ್ಲಿ ವಿವಾಹಿತ ವ್ಯಕ್ತಿಯೊಬ್ಬ ಮಾಜಿ ಗೆಳತಿಗೆ ಬಲವಂತವಾಗಿ ಕಿಸ್​​ ಮಾಡಲು ಹೋಗಿ ದೊಡ್ಡ ಅವಾಂತರ ಮಾಡಿಕೊಂಡಿದ್ದಾನೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಮಹಿಳೆಯೊಬ್ಬಳು ತನಗೆ ಬಲವಂತವಾಗಿ ಮುತ್ತಿಟ್ಟ ಮಾಜಿ ಪ್ರೇಮಿಯ ನಾಲಿಗೆಯನ್ನು ಕಚ್ಚಿದ್ದಾಳೆ (ex-girlfriend bites tongue). ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ವಿವಾಹವಾಗಿದ್ದರೂ, ಈ ವ್ಯಕ್ತಿ ಮಾಜಿ ಗೆಳತಿಯೊಂದಿಗೆ ಸಂಬಂಧ ಹೊಂದಿದ್ದ ಎಂದು ಹೇಳಲಾಗಿದೆ. ಈ ವ್ಯಕ್ತಿಯನ್ನು 35 ವರ್ಷದ ಚಂಪಿ ಎಂದು ಗುರುತಿಸಲಾಗಿದೆ.

ಚಂಪಿ ತನಗೆ ಇಷ್ಟವಿಲ್ಲದ ಮಹಿಳೆಯ ಜತೆಗೆ ಮದುವೆಯಾಗಿದ್ದು, ಈ ಬಗ್ಗೆ ತನ್ನ ಪತ್ನಿಗೆ ಮದುವೆಯ ಮೊದಲೇ ಹೇಳಿದ್ದ, ಆದರೆ ಮನೆಯವರ ಒತ್ತಾಯಕ್ಕೆ ಮದುವೆಯಾಗಿದ್ದಾನೆ. ಹಾಗಾಗಿ ಇಬ್ಬರ ನಡುವೆ ಯಾವುದೇ ಅನ್ಯೋನ್ಯತೆ ಇಲ್ಲದ ಕಾರಣ ಇಬ್ಬರು ದೂರವಾಗಲು ನಿರ್ಧರಿಸಿದರು. ಈ ವೇಳೆ ಚಂಪಿ ತನ್ನ ಮಾಜಿ ಪ್ರೇಯಸಿಯಿಂದ ದೂರು ಆಗಿರುವ ಕೊರಗಿನಲ್ಲಿದ್ದ, ಮದುವೆಯಾಗಿದ್ದರೂ ಚಂಪಿಗೆ ಅವಳನ್ನು ಬಿಡುವ ಮನಸ್ಸು ಇರಲಿಲ್ಲ. ಹಾಗಾಗಿ ಅವಳ ಸುತ್ತ ಸುತ್ತುತ್ತಿದ್ದ, ಆಗ್ಗಾಗೆ ಅವಳನ್ನು ಭೇಟಿ ಕೂಡ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ನಡೆಯುತ್ತಿದೆ ಇಂಡೋ-ಅಮೆರಿಕನ್ ಉದ್ಯಮಿಗಳ ಅದ್ದೂರಿ ವಿವಾಹ, ಟ್ರಂಪ್​​​​​​ ಮಗ ಸೇರಿದಂತೆ 40 ದೇಶಗಳ ವಿಐಪಿಗಳು ಭಾಗಿ

ಸೋಮವಾರ ಮಧ್ಯಾಹ್ನ ಚಂಪಿಯ ಮಾಜಿ ಗೆಳತಿ ಕೊಳದ ಬಳಿಗೆ ಹೋಗುತ್ತಿದ್ದ ವೇಳೆ, ಒಂಟಿಯಾಗಿರುವುದನ್ನು ನೋಡಿ. ಅವಳನ್ನು ಹಿಂಬಾಲಿಸಿ ಕೊಳದವರೆಗೆ ಹೋಗಿದ್ದಾನೆ. ಅಲ್ಲಿ ಅವಳನ್ನು ಹಿಡಿದು ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಚಂಪಿಯ ಕೈಯಿಂದ ಆಕೆ ತಪ್ಪಿಸಿಕೊಳ್ಳು ಪ್ರಯತ್ನಿಸಿದ್ದಾಳೆ. ಅದರೂ ಬಿಡದೇ ಬಲವಂತವಾಗಿ ಆಕೆಯ ತುಟಿಗೆ ಕಿಸ್​​ ಮಾಡಿದ್ದಾನೆ. ಈ ವೇಳೆ ಮಹಿಳೆ ಚಂಪಿಯ ನಾಲಿಗೆಯನ್ನು ಬಲವಾಗಿ ಕಚ್ಚಿ, ನಾಲಿಗೆಯ ಒಂದು ಭಾಗವನ್ನು ಹಲ್ಲಿನಿಂದ ಕತ್ತರಿಸಿದ್ದಾಳೆ. ಚಂಪಿ ತಕ್ಷಣ ಆಕೆಯನ್ನು ಬಿಟ್ಟು, ಕೂಗಾಡಲು ಶುರು ಮಾಡಿದ್ದಾನೆ. ಬಾಯಿ ತುಂಬಾ ರಕ್ತ ಬರಲು ಶುರುವಾಗಿತ್ತು. ಈ ವೇಳೆ ಗ್ರಾಮಸ್ಥರು ಸ್ಥಳಕ್ಕೆ ಬಂದು ನೋಡಿದಾಗ ಚಂಪಿ ನೋವಿನಿಂದ ನರಳಾಡಿದ್ದಾನೆ. ಈ ಬಗ್ಗೆ ಚಂಪಿಯ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಚಂಪಿಯನ್ನು ಗ್ರಾಮಸ್ಥರು ತಕ್ಷಣ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆದರೆ ಚಂಪಿಯನ್ನು ಹಚ್ಚಿನ ಚಿಕಿತ್ಸೆಗಾಗಿ ವೈದ್ಯರು ಕಾನ್ಪುರದ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲು ಶಿಫಾರಸು ಮಾಡಿದರು. ಉಪ ಪೊಲೀಸ್ ಆಯುಕ್ತ ದಿನೇಶ್ ತ್ರಿಪಾಠಿ ಘಟನೆ ಬಗ್ಗೆ ತನಿಖೆ ನಡೆಸಿ, ಚಂಪಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ