AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಸೀದಿ ಉತ್ಖನನ ವೇಳೆ ರಾಮ-ಸೀತಾ ವಿಗ್ರಹ ಪತ್ತೆ, ದೇವಾಲಯ ನಿರ್ಮಾಣಕ್ಕೆ ಹಿಂದೂಗಳ ಆಗ್ರಹ

ಮಧ್ಯಪ್ರದೇಶದ ಸಾಗರ್‌ನ ಮಸೀದಿಯೊಂದರ ಉತ್ಖನನದಲ್ಲಿ ಸೀತಾ-ರಾಮ ವಿಗ್ರಹಗಳು ಕಂಡುಬಂದಿವೆ. ಈ ಸ್ಥಳದಲ್ಲಿ ಹಿಂದೆ ದೇವಾಲಯವಿತ್ತು ಎಂದು ಹಿಂದೂ ಸಮುದಾಯವು ದೇವಾಲಯ ನಿರ್ಮಾಣಕ್ಕೆ ಆಗ್ರಹಿಸಿದೆ. ಘಟನೆ ಸ್ಥಳದಲ್ಲಿ ಹಿಂದೂ ಮುಖಂಡರು ಪೂಜೆ ಸಲ್ಲಿಸಲು ವೇದಿಕೆ ನಿರ್ಮಿಸಿದ್ದು, ಇದಕ್ಕೆ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನಿಯೋಜನೆಗೊಂಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಮಸೀದಿ ಉತ್ಖನನ ವೇಳೆ ರಾಮ-ಸೀತಾ ವಿಗ್ರಹ ಪತ್ತೆ, ದೇವಾಲಯ ನಿರ್ಮಾಣಕ್ಕೆ ಹಿಂದೂಗಳ ಆಗ್ರಹ
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on: Nov 22, 2025 | 5:52 PM

Share

ಮಧ್ಯಪ್ರದೇಶದ (Madhya Pradesh) ಸಾಗರ್ ಎಂಬಲ್ಲಿ ಮಸೀದಿಯೊಂದರ ಉತ್ಖನನದ (Sagar mosque excavation) ವೇಳೆ ಸೀತಾ ಮತ್ತು ರಾಮನ ವಿಗ್ರಹಗಳು ಕಂಡುಬಂದಿವೆ. ಇದೀಗ ಈ ಸುದ್ದಿ ಎಲ್ಲ ಕಡೆ ವೈರಲ್​​ ಆಗಿದ್ದು, ಸ್ಥಳಕ್ಕೆ ಹಿಂದೂ ಸಮುದಾಯದ ಮುಖಂಡರು ಹಾಗೂ ಜನರುನ ಕೂಡ ಆಗಮಿಸಿದ್ದರು. ಸಾಗರ್‌ನ ಪಪ್ಪೆಟ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂಸ್ಕೃತ ಬಚಾವೊ ಮಂಚ್‌ನ ನಾಯಕ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ಪ್ರದೇಶದಲ್ಲಿ ಒಂದು ಕಾಲದಲ್ಲಿ ದೇವಾಲಯವಿತ್ತು ಎಂಬುದು ಸಾಬೀತಾಗಿದೆ. ಈ ಸ್ಥಳದಲ್ಲಿ ಮತ್ತೆ ದೇವಾಲಯವನ್ನು ನಿರ್ಮಿಸಬೇಕು ಎಂಬುದು ಹಿಂದೂಗಳ ಬಯಕೆ ಇದೆ. ಇಲ್ಲಿ ಒಂದು ಕಾಲದಲ್ಲಿ ದೇವಾಲಯವಿತ್ತು. ನಂತರದಲ್ಲಿ ಅದನ್ನು ಮುಸ್ಲಿಂ ಸಮುದಾಯದವರು ಆಕ್ರಮಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

ಈ ವಿಚಾರ ತಿಳಿದು ನೂರಾರು ಹಿಂದೂಗಳು ಸ್ಥಳಕ್ಕೆ ಧಾವಿಸಿದ್ದರು. ಇದೇ ವೇಳೆ ಮುಸ್ಲಿಂ ಸಮುದಾಯದ ನಾಯಕರು ಕೂಡ ಸ್ಥಳಕ್ಕೆ ಬಂದಿದ್ದು, ಪರಿಸ್ಥಿತಿ ಉದ್ವಿಗ್ನವಾಗಿತ್ತು. ಇನ್ನು ವಿಗ್ರಹಕ್ಕೆ  ಹಿಂದೂ ನಾಯಕರು ಪೂಜೆ ನೆರವೇರಿಸಿದರು . ಪೂಜೆ ಮಾಡಲು ಅಲ್ಲೇ ಒಂದು ಸಣ್ಣ ವೇದಿಕೆಯನ್ನು ಕೂಡ ನಿರ್ಮಿಸಿದ್ದರು. ಆದರೆ ಮುಸ್ಲಿಮರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದೀಗ ಈ ಘಟನೆ ಭಾರೀ ಗದ್ದಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಇಟಾಲಿಯನ್ ಕಾನ್ಸುಲ್ ಜನರಲ್ ಹೃದಯ ಗೆದ್ದ ಬೆಂಗಳೂರು ಮಸಾಲೆ ದೋಸೆ

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಇಲ್ಲಿರುವ ವೇದಿಕೆಯನ್ನು ತೆಗೆಯಬೇಕು ಎಂದು ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದು, ಹಿಂದೂ ನಾಯಕರು ಯಾವುದೇ ಕಾರಣಕ್ಕೂ ಈ ವೇದಿಕೆಯನ್ನು ತೆಗೆಯಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಮಧ್ಯಪ್ರವೇಶಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಪೊಲೀಸ್​​​ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಎರಡು ಸಮುದಾಯಗಳ ನಡುವೆ ಯಾವುದೇ ಘರ್ಷಣೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ