ಹೈದರಾಬಾದ್: ಶುಕ್ರವಾರ ನಮಾಜ್, ನಾಗದೇವತೆಗೆ ಸೋಮವಾರ ಪೂಜೆ. ಜಾತಿ, ಧರ್ಮದ ಭೇದವಿಲ್ಲದೆ ಮುಸ್ಲಿಂ ಮಹಿಳೆಯೊಬ್ಬರು ಮನೆಯಲ್ಲಿ ದೀಪ ಹಚ್ಚಿ, ಪೂಜೆ ಮಾಡುತ್ತಾರೆ. ಪ್ರತಿ ಸೋಮವಾರ ನಾಗದೇವರ ಪೂಜೆ ಮಾಡುತ್ತಾರೆ. ಶ್ರೀಸತ್ಯಸಾಯಿ ಜಿಲ್ಲೆಯ ಮಡಕಶಿರಾ ಮಂಡಲದ ಅಯ್ಯವಾರಿಪಲ್ಲಿಯಲ್ಲಿ ಮುಸ್ಲಿಂ ಮಹಿಳೆ ಜರೀನಾ ಎಂಬುವವರ ಮನೆಯಲ್ಲಿ ಹಾವಿನ ಹುತ್ತವೊಂದು ಕಾಣಿಸಿಕೊಂಡಿದ್ದು, ಹಲವಾರು ವರ್ಷಗಳಿಂದ ದಿನದಿಂದ ದಿನಕ್ಕೆ ಅದು ಬೆಳೆಯುತ್ತಿದೆ. ಹಾಗಾಗಿ ಆ ಮುಸ್ಲಿಂ ಮಹಿಳೆ ಜರೀನಾ ಹಿಂದೂ ಸಂಪ್ರದಾಯದಂತೆ ನಾಗದೇವರನ್ನು ಪೂಜಿಸಲು ಆರಂಭಿಸಿದ್ದಾರೆ. ಮನೆಯಲ್ಲಿ ಹಾವಿನ ಹುತ್ತಕ್ಕೆ ಪೂಜೆ ಮಾಡತೊಡಗಿದ್ದಾರೆ.
ಆಕೆಯ ಮನೆಯ ಸುತ್ತಮುತ್ತಲಿನ ಹಿಂದೂ ಭಕ್ತರು ಕೂಡ ಜರೀನಾ ಮನೆಗೆ ಆಗಮಿಸಿ ಹಾವಿನ ಹುತ್ತಕ್ಕೆ ಪೂಜೆ ಸಲ್ಲಿಸಲು ಆರಂಭಿಸಿದರು. ಜರೀನಾ ಅವರು ಸಾಂಪ್ರದಾಯಿಕ ಹಿಂದೂಗಳ ರೀತಿಯಲ್ಲಿ ಪೂಜೆಯನ್ನು ಮಾಡುತ್ತಾರೆ ಮತ್ತು ಭಕ್ತರಿಗೆ ತೀರ್ಥಪ್ರಸಾದವನ್ನು ವಿತರಿಸುತ್ತಾರೆ.
ಇದನ್ನೂ ಓದಿ: ಟ್ರಾಫಿಕ್ ಪೊಲೀಸ್ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ರಸ್ತೆಯಲ್ಲಿ ಎಳೆದೊಯ್ದ ಚಾಲಕ; ವಿಡಿಯೋ ವೈರಲ್
ಜರೀನಾ ಮುಸ್ಲಿಂ ಮಹಿಳೆಯಾಗಿದ್ದರೂ, ಶುಕ್ರವಾರ ನಮಾಜ್ ಮಾಡಿ ಸೋಮವಾರ ಹಿಂದೂ ಸಂಪ್ರದಾಯದಂತೆ ನಾಗ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಜರೀನಾ ಮನೆಗೆ ಸ್ಥಳೀಯ ಎಲ್ಲಾ ಜಾತಿಯ ಜನರನ್ನು ಸ್ವಾಗತಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತನ್ನ ಮನೆಯಲ್ಲಿ ಹಾವಿನ ಹುತ್ತ ಬೆಳೆಯುತ್ತಿದೆ ಎನ್ನುತ್ತಾರೆ ಜರೀನಾ. ಹಿಂದೂ, ಮುಸ್ಲಿಂ ಎಂಬ ಭೇದವಿಲ್ಲದೆ ಇಡೀ ಕುಟುಂಬ ಸೋಮವಾರ ನಾಗದೇವತೆಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎನ್ನುತ್ತಾರೆ ಜರೀನಾ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ