ಹೆಂಡ್ತಿಗೆ ಕೈ ಕೊಟ್ಟ ಬಾಯ್‌ಫ್ರೆಂಡ್; ಹಿಂದೆ ಏನೇ ಆಗಿರಲಿ ಮರಳಿ ಮನೆಗೆ ಬಂದ್ರೆ ಆಕೆಯನ್ನು ನಾನು ಸ್ವೀಕರಿಸುವೆ ಎಂದ ಪತಿರಾಯ

ಕಟ್ಟಿಕೊಂಡವರು ಕೊನೆಯ ತನಕ, ಇಟ್ಟುಕೊಂಡವರು ಇರೋ ತನಕ ಎಂಬ ನಾಣ್ಣುಡಿಯೊಂದಿದೆ. ಇದೀಗ ಈ ನಾಣ್ಣುಡಿಗೆ ಉತ್ತಮ ನಿದರ್ಶನವೆಂಬಂತಿರುವ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ಗಂಡ ಮತ್ತು ತನ್ನ ಮೂವರು ಮಕ್ಕಳನ್ನು ಬಿಟ್ಟು ಬಾಯ್‌ಫ್ರೆಂಡ್‌ ಜೊತೆ ಓಡಿ ಹೋಗಿದ್ದಳು. ಆದ್ರೆ ಈಗ ಗೆಳೆಯ ಆಕೆ ನನ್ಗೆ ಬೇಡ್ವೇ ಬೇಡ ಎಂದು ಪಟ್ಟು ಹಿಡಿದಿದ್ದು, ಆಕೆಯ ಗಂಡ ಮಾತ್ರ ಆಕೆ ಮನೆಗೆ ಬಂದ್ರೆ

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 18, 2024 | 12:17 PM

ಮದುವೆಯ ಬಳಿಕವೂ ಪರ ಪುರುಷ ಅಥವಾ ಬೆರೋಬ್ಬ ಮಹಿಳೆಯ ಜೊತೆಗೆ ಸಂಬಂಧವನ್ನು ಇಟ್ಟುಕೊಂಡು ತಮ್ಮ ಸುಂದರ ಸಂಸಾರವನ್ನು ಹಾಳು ಮಾಡಿಕೊಂಡವರು ಅದರಲ್ಲಿ ಇನ್ನೂ ಕೆಲವರು ಗೆಳೆಯ/ಗೆಳತಿಗಾಗಿ ಮನೆ, ಮಕ್ಕಳು, ಸಂಸಾರವನ್ನೇ ಬಿಟ್ಟು ಓಡಿ ಹೋದವರಿದ್ದಾರೆ. ಇದೀಗ ಇಲ್ಲೊಂದು ಅಂತಹದ್ದೇ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ಬಾಯ್‌ಫ್ರೆಂಡ್‌ಗಾಗಿ ಗಂಡ ಮತ್ತು ತನ್ನ ಮೂರು ಮಕ್ಕಳನ್ನೇ ಬಿಟ್ಟು ಓಡಿ ಹೋಗಿದ್ದಾಳೆ. ಇನ್ಸ್ಟೆಂಟ್‌ ಕರ್ಮ ಎನ್ನುವ ಹಾಗೆ ಇದೀಗ ಆಕೆಯ ಬಾಯ್‌ ಫ್ರೆಂಡ್‌ ಅವಳು ನನಗೆ ಬೇಡ್ವೇ ಬೇಡ ಎಂದು ಪಟ್ಟು ಹಿಡಿದಿದ್ದಾನೆ. ಬಾಯ್‌ಫ್ರೆಂಡ್‌ನಿಂದ ಮೋಸ ಹೋದ ಈ ಮಹಿಳೆ ದಿಕ್ಕು ತೋಚದೆ ಅಳುತ್ತಾ ಕೂತಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಮೂರು ಮಕ್ಕಳ ತಾಯಿಯೊಬ್ಬಳು ಕೆಲ ದಿನಗಳ ಹಿಂದೆ ಗಂಡ-ಮಕ್ಕಳನ್ನು ಬಿಟ್ಟು ಬಾಯ್‌ಫ್ರೆಂಡ್‌ ಜೊತೆ ಓಡಿ ಹೋಗಿದ್ದಳು. ಇದೀಗ ಆಕೆಯ ಬಾಯ್‌ಫ್ರೆಂಡ್‌ ನನಗೆ ಆಕೆ ಬೇಡ ಎಂದು ಹೇಳಿದ್ದು, ಗೆಳೆಯನಿಂದಾದ ಮೋಸಕ್ಕೆ ಆ ಮಹಿಳೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಆದರೆ ಇಟ್ಟುಕೊಂಡವನು ಕಡೆ ತನಕ ಎನ್ನುವ ಮಾತಿನಂತೆ ಆಕೆಯ ಗಂಡ ಮಾತ್ರ ಅವಳು ಮನೆಗೆ ಬಂದರೆ ನಾನು ಅವಳನ್ನು ಸ್ವೀಕರಿಸುವೇ ಎಂದು ಮನಸಾರೆ ಹೇಳಿಕೊಂಡಿದ್ದಾನೆ.

gherkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮೂರು ಮಕ್ಕಳ ತಾಯಿ ತನ್ನ ಬಾಯ್‌ ಫ್ರೆಂಡ್‌ ತನಗೆ ಮೋಸ ಮಾಡಿದ ಎಂದು ಜೋರಾಗಿ ಅಳುತ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು. ಹೀಗೆ ದೊಡ್ಡವರೆಲ್ಲಾ ಸೇರಿ ಮಾತುಕತೆ ನಡೆಸುವ ಸಂದರ್ಭದಲ್ಲಿ ಪತಿರಾಯ ʼಹಿಂದೆ ಏನೇ ತಪ್ಪು ನಡೆದಿರಬಹುದು, ಆದ್ರೆ ಆಕೆ ಮನೆಗೆ ಬರುತ್ತಾಳೆ ಎಂದಾದರೇ ಖಂಡಿತವಾಗಿಯೂ ನಾನು ಅವಳನ್ನು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಶೂ, ಕೈಗವಸ, ಹೆಲ್ಮೆಟ್‌ ಇಲ್ಲದೆ ಚರಂಡಿ ಸ್ವಚ್ಛಗೊಳಿಸಿದ ಬೆಂಗಳೂರಿನ ಪೌರ ಕಾರ್ಮಿಕರು

ಅಕ್ಟೋಬರ್‌ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.5 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಗಂಡ ಮಕ್ಕಳನ್ನು ಬಿಟ್ಟು ಹೋದವಳಿಗೆ ಇದು ಆಗಬೇಕಾಗಿದ್ದೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆಕೆಯ ಪತಿ ಇಷ್ಟೆಲ್ಲಾ ಆದ್ರೂ ಆಕೆಯನ್ನು ಸ್ವೀಕರಿಸುತ್ತೇನೆ ಎಂದು ಹೇಳಿದನಲ್ವಾ, ಆ ಮನುಷ್ಯನ ಗುಣವನ್ನು ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದನ್ನೆಲ್ಲಾ ನೋಡಿದಾಗ ತುಂಬಾ ವಿಚಿತ್ರವೆನಿಸುತ್ತದೆʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:11 pm, Fri, 18 October 24