ಶುಕ್ರವಾರ ನಮಾಜ್, ಸೋಮವಾರ ನಾಗದೇವರ ಆರಾಧನೆ; ಮುಸ್ಲಿಂ ಮಹಿಳೆಯ ಕತೆಯಿದು

ಜರೀನಾ ಎಂಬ ಮುಸ್ಲಿಂ ಮಹಿಳೆಯ ಮನೆಯಲ್ಲಿ ಹಲವಾರು ವರ್ಷಗಳ ಹಿಂದೆ ಹಾವಿನ ಹುತ್ತ ಸೃಷ್ಟಿಯಾಗಿ, ಆ ಹಾವಿನ ಹುತ್ತ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿತ್ತು. ಹಾಗಾಗಿ ಆ ಮುಸ್ಲಿಂ ಮಹಿಳೆ ಜರೀನಾ ಹಿಂದೂ ಸಂಪ್ರದಾಯದಂತೆ ಪ್ರತಿ ವಾರವೂ ನಾಗದೇವತೆಯನ್ನು ಪೂಜಿಸಲು ಆರಂಭಿಸಿದರು. ಮನೆಯಲ್ಲಿ ಆಕೆ ಹಾವಿನ ಹುತ್ತಕ್ಕೆ ಪೂಜೆ ಮಾಡತೊಡಗಿದರು.

Follow us
|

Updated on: Oct 17, 2024 | 8:30 PM

ಹೈದರಾಬಾದ್: ಶುಕ್ರವಾರ ನಮಾಜ್, ನಾಗದೇವತೆಗೆ ಸೋಮವಾರ ಪೂಜೆ. ಜಾತಿ, ಧರ್ಮದ ಭೇದವಿಲ್ಲದೆ ಮುಸ್ಲಿಂ ಮಹಿಳೆಯೊಬ್ಬರು ಮನೆಯಲ್ಲಿ ದೀಪ ಹಚ್ಚಿ, ಪೂಜೆ ಮಾಡುತ್ತಾರೆ. ಪ್ರತಿ ಸೋಮವಾರ ನಾಗದೇವರ ಪೂಜೆ ಮಾಡುತ್ತಾರೆ. ಶ್ರೀಸತ್ಯಸಾಯಿ ಜಿಲ್ಲೆಯ ಮಡಕಶಿರಾ ಮಂಡಲದ ಅಯ್ಯವಾರಿಪಲ್ಲಿಯಲ್ಲಿ ಮುಸ್ಲಿಂ ಮಹಿಳೆ ಜರೀನಾ ಎಂಬುವವರ ಮನೆಯಲ್ಲಿ ಹಾವಿನ ಹುತ್ತವೊಂದು ಕಾಣಿಸಿಕೊಂಡಿದ್ದು, ಹಲವಾರು ವರ್ಷಗಳಿಂದ ದಿನದಿಂದ ದಿನಕ್ಕೆ ಅದು ಬೆಳೆಯುತ್ತಿದೆ. ಹಾಗಾಗಿ ಆ ಮುಸ್ಲಿಂ ಮಹಿಳೆ ಜರೀನಾ ಹಿಂದೂ ಸಂಪ್ರದಾಯದಂತೆ ನಾಗದೇವರನ್ನು ಪೂಜಿಸಲು ಆರಂಭಿಸಿದ್ದಾರೆ. ಮನೆಯಲ್ಲಿ ಹಾವಿನ ಹುತ್ತಕ್ಕೆ ಪೂಜೆ ಮಾಡತೊಡಗಿದ್ದಾರೆ.

ಆಕೆಯ ಮನೆಯ ಸುತ್ತಮುತ್ತಲಿನ ಹಿಂದೂ ಭಕ್ತರು ಕೂಡ ಜರೀನಾ ಮನೆಗೆ ಆಗಮಿಸಿ ಹಾವಿನ ಹುತ್ತಕ್ಕೆ ಪೂಜೆ ಸಲ್ಲಿಸಲು ಆರಂಭಿಸಿದರು. ಜರೀನಾ ಅವರು ಸಾಂಪ್ರದಾಯಿಕ ಹಿಂದೂಗಳ ರೀತಿಯಲ್ಲಿ ಪೂಜೆಯನ್ನು ಮಾಡುತ್ತಾರೆ ಮತ್ತು ಭಕ್ತರಿಗೆ ತೀರ್ಥಪ್ರಸಾದವನ್ನು ವಿತರಿಸುತ್ತಾರೆ.

ಇದನ್ನೂ ಓದಿ: ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ರಸ್ತೆಯಲ್ಲಿ ಎಳೆದೊಯ್ದ ಚಾಲಕ; ವಿಡಿಯೋ ವೈರಲ್

ಜರೀನಾ ಮುಸ್ಲಿಂ ಮಹಿಳೆಯಾಗಿದ್ದರೂ, ಶುಕ್ರವಾರ ನಮಾಜ್ ಮಾಡಿ ಸೋಮವಾರ ಹಿಂದೂ ಸಂಪ್ರದಾಯದಂತೆ ನಾಗ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಜರೀನಾ ಮನೆಗೆ ಸ್ಥಳೀಯ ಎಲ್ಲಾ ಜಾತಿಯ ಜನರನ್ನು ಸ್ವಾಗತಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತನ್ನ ಮನೆಯಲ್ಲಿ ಹಾವಿನ ಹುತ್ತ ಬೆಳೆಯುತ್ತಿದೆ ಎನ್ನುತ್ತಾರೆ ಜರೀನಾ. ಹಿಂದೂ, ಮುಸ್ಲಿಂ ಎಂಬ ಭೇದವಿಲ್ಲದೆ ಇಡೀ ಕುಟುಂಬ ಸೋಮವಾರ ನಾಗದೇವತೆಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎನ್ನುತ್ತಾರೆ ಜರೀನಾ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ
ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ
ಬಿಜೆಪಿಯಲ್ಲಿದ್ದಾಗ ಒಳ್ಳೆಯವನಾಗಿದ್ದವನು ಕಾಂಗ್ರೆಸ್ ಸೇರಿ ಕೆಟ್ಟನೇ? ಶಾಸಕ
ಬಿಜೆಪಿಯಲ್ಲಿದ್ದಾಗ ಒಳ್ಳೆಯವನಾಗಿದ್ದವನು ಕಾಂಗ್ರೆಸ್ ಸೇರಿ ಕೆಟ್ಟನೇ? ಶಾಸಕ
ಸಿದ್ದರಾಮಯ್ಯ ಸರ್ಕಾರವೇ ರಾಜ್ಯದ ಮಾನ ಹರಾಜು ಹಾಕುತ್ತಿದೆ: ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರವೇ ರಾಜ್ಯದ ಮಾನ ಹರಾಜು ಹಾಕುತ್ತಿದೆ: ಕುಮಾರಸ್ವಾಮಿ